ಚೆಯ್ಯಂಡಾಣೆ, ನ. ೨೪: ಚೆಯ್ಯಂಡಾಣೆ ಮಡಿಕೇರಿ, ನಾಪೋಕ್ಲು ಸಂಪರ್ಕ ಕಲ್ಪಿಸುವ ಚೆಯ್ಯಂಡಾಣೆ-ಬಾವಲಿ ರಸ್ತೆಯ ಕಾಮಗಾರಿಗೆ ಇಂದು ಚೆಯ್ಯಂಡಾಣೆಯಲ್ಲಿ ಭೂಮಿ ಪೂಜೆ ನೇರವೇರಿತು.
ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕ ಕೆ.ಜಿ. ಬೋಪಯ್ಯ, ರೂ. ೧.೯೦ ಕೋಟಿಯಲ್ಲಿ ಈ ಕಾಮಗಾರಿಯನ್ನು ಗುತ್ತಿಗೆದಾರರಿಗೆ ಟೆಂಡರ್ ನೀಡಲಾಗಿದೆ. ಶೀಘ್ರ ಕಾಮಗಾರಿ ಆರಂಭಿಸಿ ಡಿಸೆಂಬರ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.
ಕಡAಗ-ಚೆಯ್ಯAಡಾಣೆ ರಸ್ತೆಯ ಕಾಮಗಾರಿ ಕೂಡ ಶೀಘ್ರ ಆರಂಭಿಸಲಾಗುವುದು; ಇದು ಹುಣಸೂರು- ಭಾಗಮಂಡಲ ರಾಜ್ಯ ಹೆದ್ದಾರಿಯಾದ ಕಾರಣ ಸ್ವಲ್ಪ ತಡವಾಗಿದ್ದು ಕೂಡಲೇ ನಿಮ್ಮೆಲ್ಲರ ಸಮಸ್ಯೆ ಪರಿಹರಿಸಲಾಗುವುದು. ಹುಣಸೂರು-ಭಾಗಮಂಡಲ ರಾಜ್ಯ ಹೆದ್ದಾರಿ ಬಿಟ್ಟು ನರಿಯಂದಡ ಗ್ರಾಮ ಪಂಚಾಯಿತಿಗೆ ಒಳಪಟ್ಟ ಒಟ್ಟು ೭ ರಸ್ತೆಯನ್ನು ಅಭಿವೃದ್ಧಿ ಪಡಿಸಲು ೩.೫೦ ಕೋಟಿ ರೂಪಾಯಿ ಅನುದಾನವನ್ನು ಗ್ರಾಮೀಣ ಅಭಿವೃದ್ಧಿ ಇಲಾಖೆಯಿಂದ ಲೋಕೋಪಯೋಗಿ ಇಲಾಖೆಗೆ ನೀಡಲಾಗಿದೆ.
ಗ್ರಾಮಸ್ಥರು ರಸ್ತೆ ಅಗಲೀಕರಣಕ್ಕೆ ಸಹಕರಿಸಿ ಉತ್ತಮ ಗುಣಮಟ್ಟದ ರಸ್ತೆ ಕಾಮಗಾರಿ ನಡೆಯಲು ಸಹಕರಿಸುವಂತೆ ಕೋರಿದರು.
ಈ ಸಂದರ್ಭ ಮಡಿಕೇರಿ ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೋಡಿರ ಪ್ರಸನ್ನ ತಮ್ಮಯ್ಯ, ನರಿಯಂದಡ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿದ್ದಂಡ ರಾಜೇಶ್ ಅಚ್ಚಯ್ಯ, ಚೆಯ್ಯಂಡಾಣೆ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಧನೋಜ್ ಪೊಕ್ಕುಳಂಡ್ರ, ಕಾಮಗಾರಿ ಗುತ್ತಿಗೆದಾರ ಸುನಿಲ್, ಗುತ್ತಿಗೆದಾರರಾದ ಪೂಣಚ್ಚ, ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮಸ್ಥರು ಇದ್ದರು.