ಮಡಿಕೇರಿ, ನ.೨೫ : ಕೊಡವ ಸ್ಪೋರ್ಟ್ಸ್ ಅಸೋಸಿಯೇಷನ್ ವತಿಯಿಂದ ತಾ. ೨೬ (ಇಂದು) ಮತ್ತು ೨೭ ರಂದು ಮಡಿಕೇರಿಯ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಕೊಡವ ಪ್ರೀಮಿಯರ್ ಲೀಗ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ.

ಬೆಳಿಗ್ಗೆ ೮.೧೫ ಗಂಟೆಗೆ ನಡೆಯುವ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡವ ಸ್ಪೋರ್ಟ್ಸ್ ಅಸೋಸಿಯೇಷನ್ ಅಧ್ಯಕ್ಷ ಕುಟ್ಟಂಡ ಕುಟ್ಟಪ್ಪ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕರ್ನಾಟಕ ಹೈಕೋರ್ಟ್ನ ಮಾಜಿ ಹೆಚ್ಚುವರಿ ಅಡ್ವಕೇಟ್ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ, ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಮಂಡೇಪAಡ ಅಪ್ಪಚ್ಚು ರಂಜನ್, ರನ್‌ಜಿಟ್ ಟೆಕ್ನಾಲಜೀಸ್ ಪ್ರೆöÊ.ಲಿ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಂದಿರ ಬಿ.ತಿಮ್ಮಯ್ಯ, ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಯಾ.ಮಲ್ಚೀರ ಎ.ಅಯ್ಯಪ್ಪ, ಮಡಿಕೇರಿ ನಗರಸಭಾ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ ಪಾಲ್ಗೊಳ್ಳಲಿದ್ದಾರೆ.

ಸಮಾರೋಪ

ತಾ.೨೭ ರಂದು ಸಂಜೆ ೪.೩೦ ಗಂಟೆಗೆ ಕುಟ್ಟಂಡ ಕುಟ್ಟಪ್ಪ ಅವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ, ಕಾಂಗ್ರೆಸ್ ಯುವ ಮುಖಂಡ ಡಾ.ಮಂಥರ್ ಗೌಡ, ರನ್‌ಜಿಟ್ ಟೆಕ್ನಾಲಜೀಸ್ ಪ್ರೆöÊ.ಲಿ ನ ನಂದಿರ ಬಿ.ತಿಮ್ಮಯ್ಯ, ನಟಿ ಉದ್ದಪಂಡ ಹರ್ಷಿಕಾ ಪೂಣಚ್ಚ, ನಟ ಭುವನ್ ಪೊನ್ನಣ್ಣ, ರಾಜ್ಯ ಪಶ್ಚಿಮಘಟ್ಟ ಸಂರಕ್ಷಣಾ ವೇದಿಕೆ ಮಾಜಿ ಅಧ್ಯಕ್ಷ ಶಾಂತೆಯAಡ ರವಿ ಕುಶಾಲಪ್ಪ, ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯ ತೇಲಪಂಡ ಶಿವಕುಮಾರ್ ನಾಣಯ್ಯ ಭಾಗವಹಿಸಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.

ತಂಡಗಳು

೧೦ ಫ್ರಾಂಚೈಸಿಗಳ ಐಪಿಎಲ್ ಮಾದರಿ ಬಿಡ್ಡಿಂಗ್ ನಡೆದಿದ್ದು, ಬೆಂಗಳೂರು ಬಂಬAಗ, ಮೈಸೂರು ಮಕ್ಕ, ಕೊಡವ ಬೀರಂಗ, ಎಲ್‌ಸಿಎಂ ಟಸ್ಕರ್ಸ್ @೯೭, ಟೀಮ್ ಕೈಮಡ ೨೦೨೫, ಕೆಎ೧೨ ವಾರಿಯರ್ಸ್, ಅಂಜಿಕೇರಿ ನಾಡ್‌ಕೂಟ, ಟೀಮ್ ಭಗವತಿ, ಎಂಪಿಬಿ ರಾಯಲ್ಸ್ ಹಾಗೂ ಪಿ & ಜಿ ನಾಲ್ನಾಡ್ ನರಿಯ ತಂಡಗಳು ಸೆಣಸಾಡಲು ಸಜ್ಜಾಗಿವೆ. ಮೊದಲ ಬಹುಮಾನ ಆಕರ್ಷಕ ಟ್ರೋಫಿ ಸೇರಿ ರೂ.೨ಲಕ್ಷ, ದ್ವಿತೀಯ ಟ್ರೋಫಿ ಸೇರಿ ೧ ಲಕ್ಷ ರೂ. ಮತ್ತು ತೃತೀಯ ಬಹುಮಾನ ೪೦ ಸಾವಿರ ರೂ. ನೀಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.