ಕಡಂಗ, ನ. ೨೩: ಮರ್ಕಝುಲ್ ಹಿದಾಯ ಕೊಟ್ಟಮುಡಿಯ ಅಧೀನದ ಪಬ್ಲಿಕ್ ಸ್ಕೂಲ್ ಹಾಗೂ ಮರ್ಕಝ್ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಸ್ಪರ್ದಾತ್ಮಕ ಪರೀಕ್ಷೆಗಳಿಗೆ ಪ್ರೋತ್ಸಾಹಿಸುವ ಸಲುವಾಗಿ ಸಿವಿಲ್ ಸರ್ವೀಸ್ ಫೌಂಡೇಶನ್ ಅಕಾಡೆಮಿಕ್ ಯೋಜನೆಯನ್ನು ಶಂಸುದ್ದೀನ್ ಎಡಿಎಲ್‌ಆರ್ ಉದ್ಘಾಟಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿ.ಎ. ಯೂಸುಫ್ ಹಾಜಿ ಕೊಂಡAಗೇರಿ ಅವರು ಹಾಗೂ ಸ್ವಾಗತ ಭಾಷಣವನ್ನು ಶಾಲೆಯ ನಿರ್ದೇಶಕ ಎಂ. ಬಿ ಹಮೀದ್ ಕಬಡಕ್ಕೇರಿರವರು ನಿರ್ವಹಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಅಬ್ದುಲ್ಲಾ ( ಪಿಡಿಓ ಹೊದ್ದೂರು ಪಂಚಾಯಿತಿ), ಕುಂಞೆ ಅಬ್ದುಲ್ಲಾ ಮಡಿಕೇರಿ, ಶೌಕತ್ ಕುಂಜಿಲ ಅವರು ಭಾಷಣವನ್ನು ನಿರ್ವಹಿಸಿದರು.

ಪಿ. ಎ. ಇಸ್ಮಾಯಿಲ್ ಸಖಾಫಿ ಕೊಂಡAಗೇರಿ (ಪ್ರಧಾನ ಕಾರ್ಯದರ್ಶಿ ಮರ್ಕಝುಲ್ ಹಿದಾಯ), ಎಂ.ಎ ಅಬ್ದುಲ್ಲಾ (ಕೋಶಾಧಿಕಾರಿ ಮರ್ಕಝುಲ್ ಹಿದಾಯ), ಎ.ಎ. ಮುಹಮ್ಮದ್ ಹಾಜಿ ಕುಂಜಿಲ (ಕಾರ್ಯದರ್ಶಿ ಮರ್ಕಝುಲ್ ಹಿದಾಯ), ಸಿ.ಕೆ. ಅಹ್ಮದ್ ಹಾಜಿ (ಉಪಾಧ್ಯಕ್ಷರು ಮರ್ಕಝುಲ್ ಹಿದಾಯ ಕೊಟ್ಟಮುಡಿ) ಹಾಗೂ ಶಿಹಾಬುದ್ದೀನ್ ನೂರಾನಿ (ಪ್ರಿನ್ಸಿಪಾಲ್ ಹಿದಾಯ ಕಾಲೇಜ್ ಆಫ್ ಇಸ್ಲಾಮಿಕ್ ಸ್ಟಡೀಸ್) ಅವರು ಹಿತನುಡಿ ಗಳನ್ನಾಡಿದರು.

ವಂದನಾರ್ಪಣೆಯನ್ನು ಇರ್ಷಾದ್ ಹಿಮಮಿ (ಲೆಕ್ಚರ್ ಹಿದಾಯ ಕಾಲೇಜ್ ಆಫ್ ಇಸ್ಲಾಮಿಕ್ ಸ್ಟಡೀಸ್) ಅವರು ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಮುತಅಲ್ಲಿಮರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಪೋಷಕರು , ನಾಡಿನ ಸಮಸ್ತ ಜನರೆಲ್ಲರೂ ಭಾಗವಹಿಸಿದ್ದರು.