ಸುಂಟಿಕೊಪ್ಪ, ನ. ೨೩: ಹೊರಜಿಲ್ಲೆ, ರಾಜ್ಯ ಆಗಮಿಸಿ ಮನೆಗಳನ್ನು ಬಾಡಿಗೆ ಪಡೆದು ನೆಲೆಸಿರುವ ಸುತ್ತ ಮುತ್ತಲ ಮಂದಿಯ ಚಲನವಲನಗಳ ನಿಗಾವಿರಿಸಿ ವ್ಯಕ್ತಿಗಳ ಮೇಲೆ ಸಂಶAiÀi ಮೂಡಿಬಂದಲ್ಲಿ ಠಾಣೆಗೆ ತಿಳಿಸುವಂತೆ ಠಾಣಾಧಿಕಾರಿ ಮಂಜು ತಿಳಿಸಿದ್ದಾರೆ.
ಸುಂಟಿಕೊಪ್ಪ ಠಾಣಾ ವ್ಯಾಪ್ತಿಯಲ್ಲಿ ನಡೆದ ಸಾರ್ವಜನಿಕ ಮಾಹಿತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಠಾಣಾಧಿಕಾರಿ, ನಮ್ಮ ಠಾಣಾ ವ್ಯಾಪ್ತಿಯಲ್ಲಿ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಗ್ರಾಮ, ಪಟ್ಟಣಗಳಲ್ಲಿ ಮನೆಯನ್ನು ಪಡೆದುಕೊಂಡು ನೆಲೆಸಿ ಅನೈತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಮನೆಯ ಆಸುಪಾಸಿನಲ್ಲಿ ಮನೆಗಳನ್ನು ವಾಸಕ್ಕೆ ಪಡೆದುಕೊಂಡು ನೆಲೆಸಿರುವ ಮಂದಿಯ ಚಲನವಲನದ ಬಗ್ಗೆ ನಿಗಾವಹಿಸಿ ಅವರಿಂದ ಸಂಶಯಾಸ್ಪದ ಚಟುವಟಿಕೆಗಳು ಕಂಡುಬAದಲ್ಲಿ ಠಾಣೆಗೆ ಮಾಹಿತಿ ನೀಡುವಂತೆ ಸೂಚಿಸಿದರು. ಅವರ ಮೇಲೆ ಇಲಾಖೆಯ ವತಿಯಿಂದ ನಿಗಾ ಇರಿಸಲು ಸಹಕಾರಿಯಾಗುತ್ತದೆ. ಅಂತಹ ವ್ಯಕ್ತಿಗಳಿಂದ ಗ್ರಾಮದಲ್ಲಿ ಮುಂದಾಗುವ ಅನಾಹುತ ಹಾಗೂ ಅಪರಾಧ ಪ್ರಕರಣಗಳನ್ನು ತಡೆಯಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸುಂಟಿಕೊಪ್ಪ ಠಾಣೆಯ ಪ್ರೊಬೇಷನರಿ ಎಸ್.ಐ. ನವೀನ್, ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್, ಪಂಚಾಯಿತಿ ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ, ಸದಸ್ಯರು, ಹರದೂರು ಗ್ರಾ.ಪಂ. ಅಧ್ಯಕ್ಷ ಪದ್ಮನಾಭ, ಟಿ.ಸಿ.ಎಲ್ ತೋಟದ ವ್ಯವಸ್ಥಾಪಕರು, ಆಟೋ ಚಾಲಕರ ಸಂಘದ ಮಾಜಿ ಅಧ್ಯಕ್ಷ ಸಂತೋಷ್, ಸೋಮಯ್ಯ, ವಾಹನ ಚಾಲಕರ ಸಂಘದ ಮಾಜಿ ಅಧ್ಯಕ್ಷ ಕಿಟ್ಟಣ್ಣ ರೈ, ಕಾರ್ಯದರ್ಶಿ ಸುರೇಶ್, ವಾಹನ ಚಾಲಕರು, ಆಟೋ ಚಾಲಕರು ಗ್ರಾಮಸ್ಥರು ಇದ್ದರು.