*ಗೋಣಿಕೊಪ್ಪ, ನ. ೨೩: ಫೆಬ್ರವರಿ ತಿಂಗಳಿನಲ್ಲಿ ನಡೆಯಲಿರುವ ಸಿಸಿಎಲ್ ೨೦೨೩ರ ೧೦ನೇ ವರ್ಷದ ಫುಟ್ಬಾಲ್ ಟೂರ್ನಮೆಂಟ್ ಕೂರ್ಗ್ ಚಾಂಪಿಯನ್ಸ್ ಲೀಗ್ ೨ನೇ ಆವೃತ್ತಿ ಅಂಗವಾಗಿ ಗೋಣಿಕೊಪ್ಪ ಚೆಲ್ಸಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಅಜ್ಮಿ ಪುಟ್ಟ್ ಪುಡಿ ಪ್ರಾಯೋಜಿಸುತ್ತಿರುವ ೪೦ ಅಡಿ ಉದ್ದದ ಫೀಫಾ ವರ್ಲ್ಡ್ ಕಪ್ ಕ್ರೀಡಾಪಟುಗಳ ಭಾವಚಿತ್ರಗಳನ್ನೊಳಗೊಂಡ ವಾಹನದ ಪ್ರದರ್ಶನ ಪಟ್ಟಣದಲ್ಲಿ ನಡೆಯಿತು.

ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಿಂದ ಬಸ್ ನಿಲ್ದಾಣದವರೆಗೆ ಮೆರವಣಿಗೆ ನಡೆಸಲಾಯಿತು. ಚೆಲ್ಸಿ ಸ್ಪೋರ್ಟ್ಸ್ ಕ್ಲಬ್, ಅಧ್ಯಕ್ಷ ಕುಮಾರ್, ಸಮಿತಿ ಪದಾಧಿüಕಾರಿಗಳು ಪಾಲ್ಗೊಂಡಿದ್ದರು.