ಕೂಡಿಗೆ, ನ. ೨೩: ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಮೂರನೇ ವಾರ್ಡ್ ಬಲಮುರಿ ದೇವಾಲಯದ ಸಭಾಂಗಣದಲ್ಲಿ ಜಲ ಸಂಜೀವಿನಿ ವಿಶೇಷ ವಾರ್ಡ್ ಸಭೆ ನಡೆಯಿತು.
ಮಹಾತ್ಮ ಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಮಾಡುವ ಸಲುವಾಗಿ ಸಂಗ್ರಹಿಸಲಾದ ಸಾಮಾನ್ಯ ಮಾಹಿತಿಯ ಆಧಾರದ ಮೇಲೆ ಕೈಗೊಳ್ಳಬಹುದಾದ ಚಟುವಟಿಕೆಗಳ ಕುರಿತು ಚರ್ಚಿಸಲಾಯಿತು.
ಅಭಿವೃದ್ಧಿಗೆ ಪೂರಕವಾದ ವಿಷಯಗಳ ಬಗ್ಗೆ ಮತ್ತು ಗ್ರಾಮದ ಪ್ರಗತಿ ಸೇರಿದಂತೆ ಮೂಲಭೂತ ಸೌಕರ್ಯಗಳ ಬಗ್ಗೆ ಮಾಹಿತಿ ಸೇರಿದಂತೆ ಚರ್ಚೆಗಳು ನಡೆದವು. ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಕೆ. ಚೆಲುವರಾಜು ಯೋಜನೆಯ ಬಗ್ಗೆ ಮಾತಾಡಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಂ.ಆರ್. ಸುಮೇಶ್ ರಾಷ್ಟಿçÃಯ ಉದ್ಯೋಗ ಖಾತರಿ ಯೋಜನೆಗಳ ಬಗ್ಗೆ ಸವಿಸ್ತಾರವಾದ ಮಾಹಿತಿ ನೀಡಿದರು. ವಾರ್ಡ್ ಸದಸ್ಯರಾದ ವೇದಾವತಿ, ಮುರಳಿ ಉಪಸ್ಥಿತರಿದ್ದರು. ಲೆಕ್ಕ ಸಹಾಯಕ ಮಂಜುನಾಥ್ ಅವರು ನಿರೂಪಿಸಿ ವಂದಿಸಿದರು.