ಮಡಿಕೇರಿ, ನ. ೨೩: ನೆಹರು ಯುವ ಕೇಂದ್ರ, ಯುವ ಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ, ಜಿಲ್ಲಾ ಯುವ ಒಕ್ಕೂಟ, ತಾಲೂಕು ಯುವ ಒಕ್ಕೂಟ, ಹುಲಿತಾಳ ಭಗತ್ ಯುವಕ ಸಂಘ ಹಾಗೂ ಮರಗೋಡು ಭಾರತಿ ಸಂಯುಕ್ತ ಪದವಿ ಪೂರ್ವ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಸಂವಿಧಾನ ದಿನಾಚರಣೆಯು ತಾ. ೨೬ ರಂದು ಬೆಳಗ್ಗೆ ೧೦ ಗಂಟೆಗೆ ಮರಗೋಡು ಭಾರತಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ.

ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ಮರಗೋಡು ಭಾರತಿ ಹೈಸ್ಕೂಲ್ ಸೊಸೈಟಿಯ ಅಧ್ಯಕ್ಷ ಕಟ್ಟೆಮನೆ ಆರ್. ಸೋನಾಜಿತ್, ಮರಗೋಡು ಗ್ರಾ.ಪಂ. ಅಧ್ಯಕ್ಷೆ ಅಯ್ಯಂಡ್ರ ಪೂರ್ಣಿಮಾ ಶ್ರೀನಿವಾಸ್, ಮೂರ್ನಾಡು ದಂತ ವೈದ್ಯರು ಸಾಹಿತಿಗಳು ಮೇಚಿರ ಸುಭಾಷ್ ನಾಣಯ್ಯ ಇತರರು ಪಾಲ್ಗೊಳ್ಳಲಿದ್ದಾರೆ.