ಶನಿವಾರಸಂತೆ, ನ. ೨೩: ಶನಿವಾರಸಂತೆ ಪೊಲೀಸ್ ಠಾಣಾ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಮೊಹಲ್ಲಾ ಕಮಿಟಿ ಸಭೆಯ ಅಧ್ಯಕ್ಷತೆಯನ್ನು ಪೊಲೀಸ್ ಇನ್ಸ್ಪೆಕ್ಟರ್ ಎಸ್. ಪರಶಿವಮೂರ್ತಿ ವಹಿಸಿ ಮಾತನಾಡಿದರು.
ಶನಿವಾರಸಂತೆ ಪಟ್ಟಣ ಹಾಗೂ ಸುತ್ತಮುತ್ತಲ ಒಂಟಿ ಮನೆಯಲ್ಲಿ ವಾಸವಿರುವವರು, ಮನೆ ಬಿಟ್ಟು ಕೆಲವು ಕಾಲ ಹೊರಗಡೆ ಹೋಗುವವರು, ಶನಿವಾರಸಂತೆ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು.
ಮನೆಯ ಮಾಲೀಕರುಗಳು ಯಾವುದೇ ಅಪರಿಚಿತ ವ್ಯಕ್ತಿಗಳಿಗೆ, ಮನೆ ಬಾಡಿಗೆ ನೀಡುವ ಸಮಯದಲ್ಲಿ ಅವರ ಭಾವಚಿತ್ರ ಹಾಗೂ ದಾಖಲಾತಿಗಳನ್ನು ಪಡೆದು, ಅದರ ಪ್ರತಿಯನ್ನು ಪೊಲೀಸ್ ಠಾಣೆಗೆ ನೀಡುವುದು, ಹೊರ ಜಿಲ್ಲೆ, ಹೊರ ರಾಜ್ಯದಿಂದ ಬಂದ ಬಾಡಿಗೆದಾರರ ಕುಟುಂಬದಲ್ಲಿರುವ ಸಂಖ್ಯೆ, ಐ.ಡಿ. ಕಾರ್ಡ್ ಹಾಗೂ ಪೂರ್ಣ ವಿವರ ಪಡೆದು ಠಾಣೆಗೆ ಮಾಹಿತಿ ನೀಡಬೇಕೆಂದು ತಿಳಿಸಿದರು.
ಸಭೆಯಲ್ಲಿ ಪ್ರಮುಖರಾದ ಜಯಕುಮಾರ್, ಜಗದೀಶ್, ಜಿ.ಎಸ್. ಶಿವರುದ್ರಪ್ಪ, ಪೊಲೀಸ್ ಇಲಾಖೆಯ ಹೆಡ್ ಕಾನ್ಸ್ಟೇಬಲ್ಗಳಾದ ಬೋಪಣ್ಣ, ಪ್ರದೀಪ್ ಕುಮಾರ್, ಸಿಬ್ಬಂದಿಗಳಾದ ತೇಜಸ್ವಿನಿ, ಪೂರ್ಣಿಮ, ಉಷಾ, ಸೋನಿ ಹಾಜರಿದ್ದರು.