ಮಡಿಕೇರಿ, ನ.೨೨ : ಶಿಸ್ತು, ಸಮಯಪ್ರಜ್ಞೆ ಮತ್ತು ನಾಯಕತ್ವ ಗುಣ ಬೆಳೆಸಿಕೊಳ್ಳಲು ಸ್ಕೌಟ್ಸ್ ಮತ್ತು ಗೈಡ್ಸ್ ಸಹಕಾರಿ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ ವೇದಮೂರ್ತಿ ಹೇಳಿದರು.

ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ವತಿಯಿಂದ ನಗರದ ಪೊನ್ನಮ್ಮ ಕುಶಾಲಪ್ಪ ಸ್ಕೌಟ್ಸ್ ಮತ್ತು ಗೈಡ್ಸ್ ಭವನದಲ್ಲಿ ಒಂದು ವಾರಗಳ ಕಾಲ ಏರ್ಪಡಿಸಿರುವ ಮೂಲ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸ್ಕೌಟ್ಸ್ ಮತ್ತು ಗೈಡ್ಸ್ನಲ್ಲಿ ತೊಡಗಿಸಿಕೊಳ್ಳುವುದರಿಂದ ನಾಯಕತ್ವ ಗುಣ ಬೆಳೆಸಿಕೊಳ್ಳುವುದರ ಜೊತೆಗೆ ಹಲವು ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಆ ನಿಟ್ಟಿನಲ್ಲಿ ಶಿಕ್ಷಣದ ಜೊತೆಗೆ ಸಾಂಸ್ಕೃತಿಕ ವೈವಿಧ್ಯತೆಯಲ್ಲಿ ಪ್ರಮುಖ ಪಾತ್ರ ವಹಿಸಬಹುದಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸ್ಕೌಟ್ಸ್ ಮತ್ತು ಗೈಡ್ಸ್ನ ಜಿಲ್ಲಾ ಪ್ರಧಾನ ಆಯುಕ್ತ ಕೆ.ಟಿ. ಬೇಬಿಮ್ಯಾಥ್ಯೂ ಮಾತನಾಡಿ ಸಾಮಾಜಿಕ ಮತ್ತು ಶೈಕ್ಷಣಿಕ ಬೆಳವಣಿಗೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ನ ಪಾತ್ರ ಪ್ರಮುಖವಾಗಿದೆ; ಜೀವನ ಕೌಶಲ್ಯ ಬೆಳವಣಿಗೆಗೆ ಹಾಗೂ ಕ್ರಿಯಾಶೀಲ ಚಟುವಟಿಕೆಗೆ ಸಹಕಾರಿಯಾಗಿದೆ; ಆ ನಿಟ್ಟಿನಲ್ಲಿ ಮೂಲ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ ಎಂದರು.

ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಸದಾಶಿವ ಪಲ್ಲೇದ್ ಮಾತನಾಡಿ ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಸಾಂಸ್ಕೃತಿಕ, ಕಲೆ, ಹಾಡುಗಾರಿಕೆ ಹೀಗೆ ಹಲವು ಕ್ಷೇತ್ರಗಳಲ್ಲಿ ಪ್ರಮುಖ ಪಾತ್ರ ವಹಿಸಬಹುದಾಗಿದೆ. ಆ ನಿಟ್ಟಿನಲ್ಲಿ ಶಿಕ್ಷಣದ ಜೊತೆಗೆ ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತಾಗಬೇಕು ಎಂದರು.

ಜಿಲ್ಲಾ ಸಂಘಟಕಿ ದಮಯಂತಿ ಮಾಹಿತಿ ನೀಡಿ ಮೂರರಿಂದ ೫ ವರ್ಷದೊಳಗಿನ ಬಾಲಕ, ಬಾಲಕಿಯರು ಆಟವಾಡುತ್ತ ವೈಯಕ್ತಿಕ ಸ್ವಚ್ಛತೆ, ಶಿಸ್ತು ಮತ್ತು ಶಿಷ್ಟಾಚಾರ ಕಲಿಯುವುದು ಪ್ರಧಾನ ಚಟುವಟಿಕೆಯಾಗಿದೆ. ೫ ರಿಂದ ೧೦ ವರ್ಷದ ಬಾಲಕ, ಬಾಲಕಿಯರು ನಾಯಕತ್ವ ವಹಿಸಲು ನೆರವಾಗುತ್ತದೆ; ೧೦ ರಿಂದ ೧೭ ವರ್ಷದ ಬಾಲಕ, ಬಾಲಕಿಯರು ತಮ್ಮ ಪ್ರದೇಶದಲ್ಲಿ ಮಹತ್ತರ ಸಾಧನೆ ಮಾಡಿರುವವರಿಗೆ ಪ್ರಶಸ್ತಿ ಪುರಸ್ಕಾರ ದೊರೆಯಲಿದೆ. ೧೫ ರಿಂದ ೨೫ ವರ್ಷದ ಯುವಕ, ಯುವತಿಯರು ರೋರ‍್ಸ್ ಮತ್ತು ರೇಂರ‍್ಸ್ ಪ್ರವೇಶ ಹಂತದಿAದ ರಾಜ್ಯ ಪುರಸ್ಕಾರ ಹಂತದವರೆಗೆ ಪ್ರಮುಖ ಪಾತ್ರ ವಹಿಸಲಿದೆ ಎಂದರು.

ಸ್ಕೌಟ್ಸ್ ಮತ್ತು ಗೈಡ್ಸ್ನ ಸ್ಥಾನಿಕ ಆಯುಕ್ತ ಎಚ್.ಆರ್.ಮುತ್ತಪ್ಪ, ಉಪಾಧ್ಯಕ್ಷೆ ರಾಣಿ ಮಾಚಯ್ಯ, ದೈಹಿಕ ಶಿಕ್ಷಣಾಧಿಕಾರಿ(ನಿವೃತ್ತ) ವೆಂಕಟೇಶ್, ಜಿಲ್ಲಾ ಕಾರ್ಯದರ್ಶಿ ಎಂ.ಎನ್.ವಸAತಿ, ಗೈಡ್ ವಿಭಾಗದ ನಾಯಕಿ ಮೈಥಿಲಿ ರಾವ್, ಸ್ಕೌಟ್ಸ್ ವಿಭಾಗದ ನಾಯಕ ಗೋಪಾಲಕೃಷ್ಣ, ಗೈಡ್ ವಿಭಾಗದ ಸಹಾಯಕಿ ಸುಲೋಚನ, ಅಲೀಮಾ, ಬಿ.ಬಿ.ಜಾಜಿ, ರವಿಚಂದ್ರನ್ ಇತರರು ಇದ್ದರು.