ಮಡಿಕೇರಿ, ನ. ೨೨ : ಮೆ|| ಪ್ರತಿ ಪಾಟಿ ಪ್ರಾಜೆಕ್ಟ್ ಪ್ರೆöÊ.ಲಿ. ಬೆಂಗಳೂರು ಇವರ ಒಡಂಬಡಿಕೆಯೊAದಿಗೆ ಕೊಡಗು ಜಿಲ್ಲೆ ಮಡಿಕೇರಿ ತಾಲೂಕು ಮಡಿಕೇರಿ ಹೋಬಳಿ ಕೆ.ನಿಡುಗಣೆ ಗ್ರಾಮದಲ್ಲಿ ಭೂ ಪರಿವರ್ತನೆಗೊಂಡ ಜಾಗದ ಪೈಕಿ ರೆಡೀಂ ಸಾಗು ೬೦/೧ ರ ೨.೪೦ ಎಕ್ರೆ, ೬೦/೩ರ ೧.೧೧ ಎಕ್ರೆ, ಸಾಗು ಬಾಣೆ ಸ.ನಂ. ೩೪ ರ ೩.೫೭ ಎಕ್ರೆ, ೩೫/೨ರ ೨.೫೨ ಎಕ್ರೆ, ೬೫/೨೨ ರ ೩.೨೫ ಎಕ್ರೆ, ಪರಾಧೀನ ಜಾಗ ಸ.ನಂ. ೨೨/೧೧ ರ ೦.೬೦ ಎಕ್ರೆ, ೨೨/೧೫ರ ೯.೪೦ ಎಕ್ರೆ, ೨೨/೧೬ರ ೧.೫೦ ಎಕ್ರೆ, ಪರಾಧೀನ ಬಾಣೆ ೩೧/೧ರ ೯.೮೬.೫೦ ಎಕ್ರೆ, ೩೩ರ ೨.೩೩ ಎಕ್ರೆ, ಸಾಗು ಜಾಗ ಸ.ನ., ೩೧/೩ ರ ೪.೩೨ ಎಕ್ರೆ ಜಾಗದಿಂದ ಸಹಾಯಕ ಕಾರ್ಯಪಾಲಕ ಅಭಿಯಂತರರು ಕರ್ನಾಟಕ ಗೃಹ ಮಂಡಳಿ ಮೈಸೂರು ಉಪ ವಿಭಾಗ ಮೈಸೂರು ಇವರು ವಸತಿ ನಿರ್ಮಾಣ ಕಾಮಗಾರಿಗೆ ಅಡಚಣೆಯಾಗಿರುವ ವಿವಿಧ ಜಾತಿಯ ಮರಗಳನ್ನು ಇಲಾಖಾ ವತಿಯಿಂದ ಕಡಿದು ಸರ್ಕಾರಿ ಮರ ಸಂಗ್ರಹಾಲಯ ಆನೆಕಾಡಿಗೆ ಸಾಗಿಸಲು ಅನುಮತಿ ಕೋರಿದ್ದಾರೆ.
ಈ ಬಗ್ಗೆ ಜಿಲ್ಲಾಧಿಕಾರಿಯವರು ಈ ಜಾಗವನ್ನು ಷರತ್ತಿಗೊಳಪಟ್ಟು ಭೂ ಪರಿವರ್ತನೆಗೊಳಿಸಿ ಆದೇಶ ನೀಡಿರುವಂತೆ ಭೂ ಪರಿವರ್ತನೆಗೊಂಡ ಜಾಗದಲ್ಲಿ ವಸತಿ ನಿರ್ಮಾಣ ಕಾಮಗಾರಿಗೆ ಅಡಚಣೆಯಾದ ವಿವಿಧ ಜಾತಿಯ ೩೬೯ ಮರಗಳನ್ನು ಅರಣ್ಯ ಇಲಾಖಾ ವತಿಯಿಂದ ತೆರವುಗೊಳಿಸಿ ಸರ್ಕಾರಿ ಮರ ಸಂಗ್ರಹಾಲಯ ಆನೆಕಾಡಿಗೆ ಸಾಗಿಸುವ ಬಗ್ಗೆ ಸಾರ್ವಜನಿಕರು ಈ ಬಗ್ಗೆ ಯಾವುದೇ ಆಕ್ಷೇಪಣೆ ಇದ್ದಲ್ಲಿ ಲಿಖಿತ ಮೂಲಕ ನವೆಂಬರ್, ೩೦ ರೊಳಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ, ಮಡಿಕೇರಿ ವಿಭಾಗ, ಮಡಿಕೇರಿ ಇವರಿಗೆ ಸಲ್ಲಿಸಲು ತಿಳಿಸಿದೆ. ನಿಗಧಿತ ಅವಧಿಯಲ್ಲಿ ಯಾವುದೇ ಆಕ್ಷೇಪಣೆ ಬಾರದಿದ್ದಲ್ಲಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದು ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅವರು ತಿಳಿಸಿದ್ದಾರೆ.