ಮಡಿಕೇರಿ, ನ. ೨೨: ಸರ್ಕಾರದ ಆದೇಶದಂತೆ ೨೦೨೨-೨೩ ನೇ ಸಾಲಿನಿಂದ ಮುಖ್ಯಮಂತ್ರಿ ವಿದ್ಯಾನಿಧಿ ಕಾರ್ಯಕ್ರಮವನ್ನು ಮೀನುಗಾರರ ಮೀನು ಕೃಷಿಕರ ಮಕ್ಕಳಿಗೂ ವಿಸ್ತರಿಸಿದ್ದು ಕೊಡಗು ಜಿಲ್ಲೆಯ ಸಕ್ರಿಯ ಮೀನುಗಾರರು, ಮೀನುಕೃಷಿಕರ ಮಕ್ಕಳು ೮ ರಿಂದ ೧೦ನೇ ತರಗತಿವರೆಗೆ (ಹೆಣ್ಣು ಮಕ್ಕಳಿಗೆ ಮಾತ್ರ) ಮತ್ತು ಎಸ್‌ಎಲ್‌ಎಲ್‌ಸಿ ಪೂರ್ಣಗೊಳಿಸಿದ ನಂತರ ಕರ್ನಾಟಕ ರಾಜ್ಯದ ಯಾವುದೇ ಭಾಗದಲ್ಲಿರುವ ಅಧಿಕೃತವಾಗಿ ನೋಂದಣಿಯಾಗಿರುವ ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಕೋರ್ಸ್ಗಳಿಗೆ ಹಾಗೂ ಉನ್ನತ ಶಿಕ್ಷಣ ಪ್ರೋತ್ಸಾಹಿಸಲು ಹೊಸ ಶಿಷ್ಯವೇತನ ಯೋಜನೆಯ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ಕೋರಿದೆ. ಹೆಚ್ಚಿನ ಮಾಹಿತಿಗೆ ಮೀನುಗಾರಿಕೆ ಸಹಾಯಕ ನಿರ್ದೇಶಕರು, ಮಡಿಕೇರಿ, ಸೋಮವಾರಪೇಟೆ, ಪೊನ್ನಂಪೇಟೆ ಕಚೇರಿಯನ್ನು ಸಂಪರ್ಕಿಸುವAತೆ ಮೀನುಗಾರಿಕೆ ಉಪ ನಿರ್ದೇಶಕರು ತಿಳಿಸಿದ್ದಾರೆ.