ನಾಪೋಕ್ಲು, ನ. ೧೯: ನಾಪೋಕ್ಲು ಕರ್ನಾಟಕ ಪಬ್ಲಿಕ್ ಶಾಲೆಯ ಆಂಗ್ಲ ಮಾಧ್ಯಮ ವಿಭಾಗದಲ್ಲಿ ಶಿಕ್ಷಕರಿಲ್ಲದೆ ಮಕ್ಕಳಿಗೆ ಸಮಸ್ಯೆಯಾಗಿದೆ ಎಂದು ವಿದ್ಯಾರ್ಥಿಗಳ ಪೋಷಕರು ತಾ. ೨೧ ರಂದು ಶಾಲೆಯ ಮುಖ್ಯ ದ್ವಾರದಲ್ಲಿ ಧರಣಿ ನಡೆಸಲು ತೀರ್ಮಾನಿಸಿ ರುವದಾಗಿ ಪೋಷಕರಾದ ಸಿ.ಎಂ. ಉಸ್ಮಾನ್ ತಿಳಿಸಿದರು.

ಈ ಬಗ್ಗೆ ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಖಾಸಾಗಿ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ದುಬಾರಿ ಶುಲ್ಕ ನೀಡಿ ಬಡವರು ತಮ್ಮ ಮಕ್ಕಳನ್ನು ಕಲಿಸಲು ಸಾಧ್ಯವಾಗದ ನಿಟ್ಟಿನಲ್ಲಿ ಸರಕಾರ ರಾಜ್ಯದ ಎಲ್ಲಾ ತಾಲೂಕುಗಳಿಗೆ ಒಂದರÀAತೆ ಕರ್ನಾಟಕ ಪಬ್ಲಿಕ್ ಶಾಲೆ ಆರಂಭಿಸಿದೆ. ಇಲ್ಲಿ ಎಲ್.ಕೆ.ಜಿ.ಯಿಂದ ದ್ವಿತೀಯ ಪಿಯುಸಿವರೆಗೆ ಸರಕಾರಿ ಶುಲ್ಕದಲ್ಲಿ ಕಲಿಯುವ ಅವಕಾಶವಿದೆ. ಅದರಂತೆ ಈ ಶಾಲೆಯಲ್ಲಿ ಶಿಕ್ಷಕರ ಕೊರತೆಯಿದ್ದ ಹಿನ್ನೆಲೆಯಲ್ಲಿ ಶಾಲೆ ಆರಂಭದಿAದ ಸರಕಾರದ ಆದೇಶದಂತೆ ಆಂಗ್ಲ ಮಾಧ್ಯಮ ವಿಭಾಗಕ್ಕೆ ಇಬ್ಬರು ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ.

ಆದರೆ ಈಗ ನಾಲ್ಕು ತಿಂಗಳ ಬಳಿಕ ಅವರು ವಿದ್ಯಾರ್ಥಿಗಳಿಗೆ ಬೋಧಿಸಲು ಅರ್ಹರಲ್ಲ ಎಂಬ ಕಾರಣಕ್ಕಾಗಿ ಅವರನ್ನು ವಜಾಗೊಳಿಸಿ ಅದೇ ಜಾಗಕ್ಕೆ ಕನ್ನಡ ಮಾಧ್ಯಮ ಶಿಕ್ಷಕರನ್ನು ನೇಮಿಸಲಾಗಿದೆ. ಇದರಿಂದ ನಮ್ಮ ಮಕ್ಕಳ ಮುಂದಿನ ಭವಿಷ್ಯಕ್ಕೆ ತೊಂದರೆಯಾಗಲಿದೆ. ಅರ್ಹರಲ್ಲದ ಮೇಲೆ ಅವರನ್ನು ನೇಮಿಸುವ ಅಗತ್ಯ ಏನಿತ್ತು. ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಎಲ್ಲಿದ್ದರು ಎನ್ನುವ ಪೋಷಕರು ಈ ಬಗ್ಗೆ ಹಲವು ಬಾರಿ ಶಾಲಾ ಮೇಲುಸ್ತುವಾರಿ ಸಮಿತಿ ಮತ್ತು ಪೋಷಕರು ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಅವರು ಇದಕ್ಕೆ ಸ್ವಂದಿಸದ ಕಾರಣ ಧರಣೆ ನಡೆಸುವ ಅನಿವಾರ್ಯತೆ ಉಂಟಾಗಿದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಪೋಷಕರಾದ ಎಸ್. ಸುಮಿತ್ರ, ಪಿ.ಎ. ಷಂಶುದ್ದೀನ್, ಬಿ.ಎಚ್. ಉಮ್ಮರ್, ಕೆ.ಎ. ಸಮೀನಾ, ಪಿ.ಎ. ಮುತ್ತಾಲಿಬ್, ಮುಬೀನಾ ಎಸ್.ಹೆಚ್. ಇದ್ದರು.