ಮಡಿಕೇರಿ, ನ. ೧೭ : ಭಾರತ್ ಸ್ಕೌಟ್ಸ್ ಮತ್ತು ಗೈಡ್, ಸಂಪಾಜೆ ಸ್ಥಳೀಯ ಸಂಸ್ಥೆ ವತಿಯಿಂದ ಮಕ್ಕಳ ಮೇಳ-೨೦೨೨-೨೩ ಕಾರ್ಯಕ್ರಮವು ತಾ. ೧೯ ರಿಂದ ೨೧ ರವರೆಗೆ ಮಡಿಕೇರಿ ತಾಲೂಕಿನ ಚೆಂಬು ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆಯಲಿದೆ.
ಅಂದು ಬೆಳಿಗ್ಗೆ ೧೦ ಗಂಟೆಗೆ ಶಿಬಿರಾರ್ಥಿಗಳ ನೋಂದಣಿ ಹಾಗೂ ದಂತ ತಪಾಸಣಾ ಶಿಬಿರ, ಬೆಳಿಗ್ಗೆ ೧೧ ಗಂಟೆಗೆ ಧ್ವಜಾರೋಹಣ, ಮಧ್ಯಾಹ್ನ ೨ ಗಂಟೆಗೆ ಚೆಂಬು ಸರ್ಕಾರಿ ಪ್ರೌಢಶಾಲೆಯಿಂದ ಬಾಲಂಬಿ ಗ್ರಾ.ಪಂ.ಯವರೆಗೆ ಪಥ ಸಂಚಲನ ನಡೆಯಲಿದೆ.
ಚೆಂಬು ಗ್ರಾ.ಪಂ. ಅಧ್ಯಕ್ಷೆ ಎ. ಕುಸುಮ ಯೋಗೀಶ್ವರ, ಉಪಾಧ್ಯಕ್ಷೆ ಕೆ.ಎಸ್. ಶಶಿಕಲ, ಸಂಪಾಜೆ ಸ್ಥಳೀಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಉಪಾಧ್ಯಕ್ಷ ಉದಯಕುಮಾರ್ ಕುಂಬಳಚೇರಿ, ಚೆಂಬು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ ಪ್ರಭು, ಚೆಂಬು ಪ್ರಗತಿಪರ ಕೃಷಿಕÀ ಹೊಸೂರು ಗೋಪಾಲಕೃಷ್ಣ, ಚೆಂಬು, ಮಿತ್ರಕೂಟ ಕ್ರೀಡಾ ಸಂಘದ ಅಧ್ಯಕ್ಷ ನವೀನ್ ರಾಮಕಜೆ, ಚೆಂಬು ಸರ್ಕಾರಿ ಪ್ರೌಢಶಾಲೆಯ ಎಸ್ಡಿಎಂ.ಸಿ. ಸದಸ್ಯೆ ಟಿ.ಟಿ. ಭಾರತಿ, ಇತರರು ಪಾಲ್ಗೊಳ್ಳಲಿದ್ದಾರೆ.
ಸಂಜೆ ೪.೩೦ ಗಂಟೆಗೆ ಮೇಳದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಸಂಪಾಜೆ ಸ್ಥಳೀಯ ಸಂಸ್ಥೆ ಅಧ್ಯಕ್ಷ ಎಂ. ಧನಂಜಯ, ಪ್ರಗತಿಪರ ಕೃಷಿಕರಾದ ಲೀಲಾವತಿ ಜಯಪ್ರಕಾಶ್ ಊರುಬೈಲು, ಭಾ.ಸ್ಕೌ.ಗೈ. ಜಿಲ್ಲಾ ಪ್ರಧಾನ ಆಯುಕ್ತ ಬೇಬಿ ಮ್ಯಾಥ್ಯು, ಮಡಿಕೇರಿ ತಾಲೂಕು ಅಕ್ರಮ ಸಕ್ರಮ ಸಮಿತಿ ಸದಸ್ಯ ಸುಬ್ರಮಣ್ಯ ಉಪಾಧ್ಯಾಯ ಇತರರು ಪಾಲ್ಗೊಳ್ಳಲಿದ್ದಾರೆ.
ತಾ. ೨೦ ರಂದು ಸಾಹಸಮಯ ಕ್ರೀಡೆ ಮತ್ತು ವಸ್ತು ಪ್ರದರ್ಶನ ಉದ್ಘಾಟನೆ. ಪೊಲೀಸ್ ಉಪ ಅಧೀಕ್ಷಕ ಜಿ.ಎಸ್. ಗಜೇಂದ್ರ ಪ್ರಸಾದ್, ಚೆಂಬು ಸ್ವಾಮಿ ವಿವೇಕಾನಂದ ಯುವಕ ಮಂಡಲ ಅಧ್ಯಕ್ಷರು ಹಾಗೂ ಗ್ರಾ.ಪಂ. ಸದಸ್ಯ ಪಿ.ಜಿ. ತೀರ್ಥರಾಮ ಇತರರು ಪಾಲ್ಗೊಳ್ಳಲಿದ್ದಾರೆ.
ಸಂಜೆ ೭ ಗಂಟೆಗೆ ಶಿಬಿರಾಗ್ನಿ ಕಾರ್ಯಕ್ರಮ ನಡೆಯಲಿದೆ. ಜಿಲ್ಲಾಧಿಕಾರಿ ಹಾಗೂ ಭಾ.ಸ್ಕೌ.ಗೈ. ಜಿಲ್ಲಾಧ್ಯಕ್ಷ ಡಾ.ಬಿ.ಸಿ. ಸತೀಶ, ಸಂಪಾಜೆ ವಲಯ ಅರಣ್ಯಾಧಿಕಾರಿ ಮಧುಸೂದನ್ ಇತರರು ಪಾಲ್ಗೊಳ್ಳಲಿದ್ದಾರೆ.
ತಾ. ೨೧ ರಂದು ಬೆಳಿಗ್ಗೆ ೮ ಗಂಟೆಗೆ ಸರ್ವಧರ್ಮ ಪ್ರಾರ್ಥನೆ. ಬೆಳಿಗ್ಗೆ ೧೦.೩೦ ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಭಾ.ಸ್ಕೌ. ಮತ್ತು ಗೈ. ಸಂಪಾಜೆ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಎಂ. ಧನಂಜಯ, ಸುಳ್ಯದ ನಿವೃತ್ತ ಉಪನ್ಯಾಸಕರು ಹಾಗೂ ಸಾಹಿತಿ ಲೀಲಾ ದಾಮೋದರ್ ಕುಂದಲ್ಪಾಡಿ ಇತರರು ಪಾಲ್ಗೊಳ್ಳಲಿದ್ದಾರೆ.