ಸಿದ್ದಾಪುರ, ನ. ೧೭: ಕೇರಳ ಮೂಲದ ಬಾಡಿಗೆ ವಾಹನದ ಚಾಲಕನೋರ್ವ ನಿದ್ರೆ ಮಂಪರಿನಲ್ಲಿ ಸರಣಿ ಅಪಘಾತ ನಡೆಸಿ ಪ್ರಾಣಪಾಯದಿಂದ ಪಾರಾದ ಘಟನೆ ನೆಲ್ಯಹುದಿಕೇರಿಯ ಮುಖ್ಯ ರಸ್ತೆಯಲ್ಲಿ ನಡೆದಿದೆ.
ಕೇರಳದಿಂದ ಕುಶಾಲನಗರಕ್ಕೆ ತೆರಳುತ್ತಿದ್ದ ಸ್ವಿಫ್ಟ್ ಡಿಸೈರ್ ಕಾರು (ಕೆ.ಎಲ್. ೧೬. ಆರ್. ೪೪೫೨) ನೆಲ್ಯಹುದಿಕೇರಿ ಪಟ್ಟಣದ ಬಳಿ ಬರುತ್ತಿದ್ದ ಸಂದರ್ಭದಲ್ಲಿ ಚಾಲಕ ನಿದ್ರೆಯ ಮಂಪರಿನಲ್ಲಿ ರಸ್ತೆ ಬದಿಯಲ್ಲಿ ಸ್ಥಳೀಯ ನಿವಾಸಿಗಳು ನಿಲ್ಲಿಸಿದ್ದ ಮಾರುತಿ ಓಮ್ನಿ, ಇಟಿಯೋಸ್, ಆಲ್ಟೋ ಹಾಗೂ ಒಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ನಾಲ್ಕು ವಾಹನಗಳು ಜಖಂಗೊAಡಿವೆ. ಡಿಕ್ಕಿಹೊಡೆದ ವಾಹನ ಕೂಡ ಸಂಪೂರ್ಣ ಜಖಂಗೊAಡಿದ್ದು ಅದೃಷ್ಟವಶಾತ್ ಚಾಲಕ ಕೊಲ್ಲಂ ನಿವಾಸಿ ಬಿಬಿನ್ ಪ್ರಾಣಪಾಯದಿಂದ ಪಾರಾಗಿದ್ದಾನೆ ಪ್ರಕರಣವು ಸಿದ್ದಾಪುರ ಪೊಲೀಸ್ ಠಾಣಾ ಮೆಟ್ಟಿಲೇರಿದೆ.