ಮಡಿಕೇರಿ, ನ. ೧೮: ಕಾಂತೂರು - ಮೂರ್ನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐಕೊಳ ಗ್ರಾಮದ ಮಾಚಿಕಾಡು ರಸ್ತೆ ಹಾಗೂ ಗ್ರಾಮದ ಅಯ್ಯಪ್ಪ ದೇವಾಲಯದ ರಸ್ತೆ ದುಸ್ಥಿತಿ ತಲುಪಿದ್ದು, ಶೀಘ್ರದಲ್ಲಿ ಸರಿಪಡಿಸದಿದ್ದಲ್ಲಿ ಮುಂದಿನ ಚುನಾವಣೆ ಬಹಿಷ್ಕರಿಸುವುದಾಗಿ ಐಕೊಳ ಗ್ರಾಮದ ಗ್ರಾಮಸ್ಥರು ನಿರ್ಧರಿಸಿದ್ದಾರೆ. ಈ ಸಂಬAಧ ಇಂದು ಜಿಲ್ಲಾಧಿಕಾರಿ ಬಿ.ಸಿ ಸತೀಶ ಅವರಿಗೆ ೧೦೦ ಮಂದಿ ಗ್ರಾಮಸ್ಥರ ಸಹಿಯೊಂದಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದ್ದು, ರಸ್ತೆ ಸರಿಪಡಿಸದಿದ್ದಲ್ಲಿ ಮುಂದಿನ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಈ ರಸ್ತೆಯನ್ನು ಗ್ರಾಮದ ೩೦೦ಕ್ಕೂ ಹೆಚ್ಚು ಕುಟುಂಬಸ್ಥರು ಅವಲಂಭಿಸಿಕೊAಡಿದ್ದಾರೆ. ಬಹುತೇಕ ಮಂದಿ ಕೃಷಿ ಅವಲಂಭಿತ ರಾಗಿದ್ದು, ದಿನನಿತ್ಯ ಕಾರ್ಮಿಕರನ್ನು ಇದೇ ರಸ್ತೆಯಲ್ಲಿ ಕರೆ ತಂದು ಕೆಲಸ ಮಾಡಿಕೊಳ್ಳಬೇಕಾಗುತ್ತದೆ. ಹದಗೆಟ್ಟ ರಸ್ತೆಯಲ್ಲಿ ಈ ಕಾರ್ಯ ಕಷ್ಟಸಾಧ್ಯವಾಗಿದೆ. ಹಲವು ವರ್ಷಗಳಿಂದ ದುಸ್ಥಿಯಲ್ಲಿರುವ ರಸ್ತೆಯನ್ನು ಸರಿಪಡಿಸುವಂತೆ ಹಲವು ಬಾರಿ ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದಾಗಿ ಗ್ರಾಮಸ್ಥರು ದೂರಿದ್ದಾರೆ.