ಮಡಿಕೇರಿ, ನ. ೧೮: ನಗರದ ಜಿಲ್ಲಾ ಪೊಲೀಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಾರ್ಷಿಕ ಕ್ರೀಡಾಕೂಟದ ೨ನೇ ದಿನದಂದು ವಿವಿಧ ರೀತಿಯ ಕ್ರೀಡೆಗಳು ನಡೆದವು. ರೈಫಲ್ ಹಾಗೂ ಪಿಸ್ತೂಲ್ ಶೂಟಿಂಗ್, ೧೫೦೦ ಮೀಟರ್ ಓಟ, ಕ್ರಿಕೆಟ್, ಮಹಿಳೆಯರಿಗೆ ೪x೧೦೦ ರಿಲೇ, ಮಹಿಳೆ ಮತ್ತು ಪುರುಷರ ವಿಭಾಗದಲ್ಲಿ ಹಗ್ಗಜಗ್ಗಾಟ, ಕಬಡ್ಡಿ ಪಂದ್ಯಾವಳಿಗಳು ನಡೆದವು.

ಡಿಎಆರ್, ಸೋಮವಾರಪೇಟೆ, ವೀರಾಜಪೇಟೆ, ಮಡಿಕೇರಿ ಉಪವಿಭಾಗ, ಮಹಿಳಾ ಪೊಲೀಸರು ಹಾಗೂ ವಿಶೇಷ ಘಟಕಗಳ ನಡುವೆ ಕ್ರಿಕೆಟ್, ಹಗ್ಗಜಗ್ಗಾಟ, ಕಬಡ್ಡಿ ಪಂದ್ಯಾವಳಿಗಳು ನಡೆದವು. ತಾ. ೧೯ ರಂದು (ಇಂದು) ಕ್ರೀಡಾಕೂಟ ಸಮಾರೋಪ ಸಮಾರಂಭ ನಡೆಯಲಿದ್ದು, ಮೈಸೂರು ದಕ್ಷಿಣ ವಲಯ ಮಹಾನಿರೀಕ್ಷಕ ಪ್ರವೀಣ್ ಮಧುಕರ್ ಪವಾರ್ ಪಾಲ್ಗೊಳ್ಳಲಿದ್ದಾರೆ.