ವೀರಾಜಪೇಟೆ, ನ. ೧೮: ಸಮುದಾಯ ಬಾಂಧವರು ಧಾರ್ಮಿಕ ಹಾಗೂ ಲೌಖಿಕ ಶಿಕ್ಷಣಕ್ಕೆ ಹೆಚ್ಚು ಮಹತ್ವವನ್ನು ಕೊಡುವ ಮೂಲಕ ತಮ್ಮ ಮಕ್ಕಳನ್ನು ಸತ್ಪçಜೆಗಳಾಗಿ ಬೆಳೆಸಬೇಕು ಎಂದು ಧರ್ಮಗುರು ಅಸೆಯ್ಯದ್ ಸಅದ್ ತಂಙಳ್ ಹೇಳಿದರು.

ಇಲ್ಲಿನ ಅನ್ವಾರುಲ್ ಹುದಾ ಸಮನ್ವಯ ವಿದ್ಯಾಕೇಂದ್ರ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ವಾರ್ಷಿಕ ಪೀರ್ ದಸ್ತಗೀರ್ ಕಾರ್ಯಕ್ರಮ ಮತ್ತು ಮಕ್ತಬತುಲ್ ಗುಝಲಿ ಗ್ರಂಥಾಲಯ ಬಸನ್ ಅಕಾಡೆಮಿಯ ನೂತನ ಕಟ್ಟಡ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕಾರ್ಯಕ್ರಮ ಉದ್ಘಾಟನೆ ಮಾಡಿದ ಸಅದ್ ತಂಙಳ್ ಅವರು ಗೌಸುಲ್ ಆಜಂ ಮುಹ್ಯಿದ್ದೀನ್ ಶ್ಯೆಖ್ (ಖ) ಅವರ ಸ್ಮೃರಣೆಯು ನಿರಂತರವಾಗಿ ನಡೆಯಬೇಕು. ಹಲವಾರು ವಿದ್ವಾಂಸರು, ಧಾರ್ಮಿಕ ಮೌಲ್ವಿಗಳು, ಧರ್ಮ ಪ್ರಚಾರಕರು ಧರ್ಮವನ್ನು ಕೇಂದ್ರೀಕರಿಸಿ ಹಲವು ವಿಷಯಗಳಲ್ಲಿ ಪಾಂಡಿತ್ಯ ಪಡೆದು ಲೇಖನದ ಮೂಲಕ ಹೊರ ತಂದಿದ್ದಾರೆ. ಬರೆದಿರುವ ಲೇಖನಗಳು ಗ್ರಂಥಗಳಾಗಿ ಮಾರ್ಪಟ್ಟಿವೆ. ವಿದ್ಯಾರ್ಥಿಗಳ ಜ್ಞಾನರ್ಜನೆಗೆ ಬೇಕಾದ ವಿಷಯಗಳು ಗ್ರಂಥಗಳ ಮೂಲಕ ತಿಳಿದುಕೊಂಡು ಧರ್ಮಬಾಂಧವರಿಗೆ ತಿಳಿಯಪಡಿಸುವಂತಾಗಬೇಕು. ಕಟ್ಟಡ ಮತ್ತು ಗ್ರಂಥಾಲಯಕ್ಕೆ ಕೊಡುಗೆ ನೀಡಿದ ದಾನಿಗಳನ್ನು ಸದಾ ಸ್ಮರಿಸುವಂತಾಗಬೇಕು, ಧರ್ಮಗ್ರಂಥಗಳು, ಲೇಖನಗಳು, ಕಿರುಹೊತ್ತಿಗೆಗಳು ಒಂದೇ ಸೂರಿನಡಿಯಲ್ಲಿ ಲಭಿಸುವುದು ನಮ್ಮ ಸೌಭಾಗ್ಯ ಎಂದು ಪರಿಗಣಿಸಬೇಕು. ಕೊಡಗು ಜಿಲ್ಲೆಯಲ್ಲಿ ಧಾರ್ಮಿಕ ಮತ್ತು ಲೌಕಿಕ ಶಿಕ್ಷಣ ನೀಡುತ್ತಿರುವ ಅನ್ವಾರುಲ್ ಹುದಾ ಸಂಸ್ಥೆಯ ಹೆಸರು ಚಿರಾಯುವಾಗಿರಲಿ ಎಂದು ಶುಭಹಾರೈಸಿದರು.

ಅನ್ವಾರುಲ್ ಹುದಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶೈಖುನಾ ಆಶ್ರಫ್ ಅಹ್ಸನಿ ಉಸ್ತಾದ್ ಅವರು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಇಲ್ಲಿನ ಸಮುದಾಯ ಬಾಂಧವರು ಧರ್ಮಗಳ ಬಗ್ಗೆ ಅಧ್ಯಯನ ಮಾಡಲು ಧರ್ಮದಲ್ಲಿನ ವಿಷಯಗಳನ್ನು ಆಳವಾಗಿ ಅರಿಯಲು ಅನ್ವಾರುಲ್‌ಹುದಾ ಜನತೆಗೆ ಸಹಕಾರಿಯಾಗಿದೆ ಎಂದರು. ಗೌಸುಲ್ ಆಜಂ ಮುಹ್ಯಿದ್ದೀನ್ ಶ್ಯೆಖ್ (ಖ) ಅವರ ಸ್ಮೃರಣೆ ಮತ್ತು ವಾರ್ಷಿಕ ದಸ್ತಗೀರ್ ಹೊಸತಾದ ಧಿಕ್ಕು ತೋರಿಸುವ ನಿಟ್ಟಿನಲ್ಲಿ ಜಗತ್ತು ಕಂಡ ವಿದ್ವಾಂಸ ಹುಜ್ಜತುಲ್ ಇಸ್ಲಾಂ ಗಝಲಿ (ರ) ಅವರ ಹೆಸರಿನಲ್ಲಿ ನಿರ್ಮಾಣವಾದ ಕಟ್ಟಡ ಮತ್ತು ಮಕ್ತಬುಲ್ ಗಝಾಲಿರ ಹೆಸರಿನಲ್ಲಿ ನಿರ್ಮಾಣವಾಗಿರುವ ಗ್ರಂಥಾಲಯಗಳು ಲೋಕಾರ್ಪಣೆಗೊಂಡವು.

ಕೊಡಗು ಜಿಲ್ಲೆಯ ಉಪಖಾಝಿ ಕೆ.ಎಸ್. ಶಾದುಲಿ ಫೈಝಿ ಅವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಅಸ್ಸಯ್ಯದ್ ಶಾಫಿ ಬಾಅಲವಿ ತಂಙಳ್ ಅವರು ಮಕ್ತಬತುಲ್ ಗಝಾಲಿ ಗ್ರಂಥಾಲಯವನ್ನು ಲೋಕಾರ್ಪಣೆ ಮಾಡಿದರು. ಅಸ್ಸಯ್ಯದ್ ಆಲಿ ಬಾಫಖಿ ತಂಙಳ್ ಅವರು ಅಕಾಡೆಮಿಯ ನೂತನ ಕಟ್ಟಡ ಉದ್ಘಾಟನೆ ಮಾಡಿದರು.

ಕಾರ್ಯಕ್ರಮ ಉದ್ದೇಶಿಸಿ ಅಸ್ಸಯ್ಯದ್ ಅಬ್ದುಲ್ ಅಜೀಜ್ ತಂಙಳ್ ಎಮ್ಮೆಮಾಡು, ಅಸ್ಸಯ್ಯದ್ ಖಾಸೀಂ ತಂಙಳ್ ಚಿಟ್ಟಡೆ, ಅಸ್ಸಯ್ಯದ್ ಜೈನುದ್ದೀನ್ ತಂಙಳ್ ಎಮ್ಮೆಮಾಡು, ಅಸ್ಸಯ್ಯದ್ ಆಟಕ್ಕೋಯ ತಙಳ್ ವೀರಾಜಪೇಟೆ, ಸಂಸ್ಥೆಯ ಉಪಾಧ್ಯಕ್ಷ ಅಬೂಬಕರ್ ಹಾಜಿ ಮೊಯ್ದೀನ್ ಕುಟ್ಟಿ ಹಾಜಿ ಪ್ರಧಾನ ಕಾರ್ಯದರ್ಶಿ, ಉದ್ಯಮಿ ಸೂಫಿ ಹಾಜಿ, ನಿಜಾರ್ ಅಹ್ಸನಿ ಉಸ್ತಾದ್ ಅವರುಗಳು ಮಾತನಾಡಿದರು. ಇಬ್ರಾಹಿಂ ಮಾಸ್ಟರ್ ಕೊಂಡAಗೇರಿ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಣೆ ಮಾಡಿದರು. ಇಲಿಯಾಸ್ ಅನ್ವಾರಿ ವಂದಿಸಿದರು.