ಪೊನ್ನAಪೇಟೆ, ನ. ೧೬ : ಗೋವುಗಳನ್ನು ಅಕ್ರಮವಾಗಿ ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊನ್ನಂಪೇಟೆ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿ, ಅಕ್ರಮವಾಗಿ ಸಾಗಿಸುತ್ತಿದ್ದ ೩ ಗೋವುಗಳನ್ನು ರಕ್ಷಣೆ ಮಾಡಿ, ವಾಹನ ಸಮೇತ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕೊAಡAಗೇರಿ ಗ್ರಾಮದ ಷಂಶೀರ್ ಮತ್ತು ನಾರಾಯಣ ಎಂಬವರು ಬಂಧಿತ ಆರೋಪಿಗಳು. ಗೋವುಗಳನ್ನು ಮಾರುತಿ ಸೂಪರ್ ಕ್ಯಾರಿ ಗೂಡ್ಸ್ ವಾಹನ (ಕೆ.ಎ.೧೨, ಬಿ.೯೩೫೬) ದಲ್ಲಿ ಸಾಗಿಸುತ್ತಿದ್ದಾಗ ದಾಳಿ ನಡೆಸಿದ ಪೊಲೀಸರು ಮತ್ತೂರು ಗ್ರಾಮದ ಸಮೀಪ ರಸ್ತೆಯಲ್ಲಿ ವಾಹನ ಸಮೇತ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿದ್ದಾರೆ. ಕೊಡಗು ಎಸ್.ಪಿ ನಿರ್ದೇಶನದ ಮೇರೆಗೆ, ವೀರಾಜಪೇಟೆ ತಾಲೂಕು ಡಿವೈಎಸ್‌ಪಿ, ಗೋಣಿಕೊಪ್ಪ ಸಿಐ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪೊನ್ನಂಪೇಟೆ ಠಾಣೆ ಸಬ್‌ಇನ್ಸ್ಪೆಕ್ಟರ್ ಹೆಚ್.ಸಿ. ಸುಬ್ರಮಣ್ಯ, ಎಎಸ್‌ಐ ವೆಂಕಟೇಶ್, ಪ್ರಮೋದ್‌ಕುಮಾರ್, ಸಿಬ್ಬಂದಿಗಳಾದ ಪ್ರಮೋದ್ ಕುಮಾರ್, ಮಹದೇಶ್ವರಸ್ವಾಮಿ, ಜೀವನ್, ಬಸವರಾಜ್, ಸಂತೋಷ್ ಪಾಲ್ಗೊಂಡಿದ್ದರು.

-ಚನ್ನನಾಯಕ