ಸಿದ್ದಾಪುರ, ನ. ೧೬: ಹೊಂಡ - ಗುಂಡಿಗಳಿAದ ಕೂಡಿರುವ ಅಮ್ಮತ್ತಿ ರಸ್ತೆಯ ಕಾಮಗಾರಿಯನ್ನು ಪ್ರಾರಂಭಿಸಲಾಗಿದೆ. ಸಿದ್ದಾಪುರದಿಂದ ಅಮ್ಮತ್ತಿ - ವೀರಾಜಪೇಟೆ ತೆರಳುವ ರಸ್ತೆಯು ತೀವ್ರವಾಗಿ ಹದಗೆಟ್ಟಿದ್ದು, ಈ ಬಗ್ಗೆ ‘ಶಕ್ತಿ’ಯು ಇತ್ತೀಚೆಗೆ ಸಮಗ್ರ ವರದಿ ಪ್ರಕಟಿಸಿತ್ತು. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಜನಪ್ರತಿನಿಧಿಗಳು, ಅಧಿಕಾರಿಗಳು ಇದೀಗ ಎಕ್ಸ್ಕವೇಟರ್ ಬಳಸಿ ರಸ್ತೆಯನ್ನು ಅಗೆದು ತೆಗೆಯುತ್ತಿದ್ದಾರೆ. ಗುಂಡಿಗಳನ್ನು ಮುಚ್ಚುವ ಕಾಮಗಾರಿ ಪ್ರಾರಂಭಿಸಿದ್ದಾರೆ.