ತಾ. ೨೦ ರಂದು ಸಮಾರೋಪ
ಚೆಯ್ಯಂಡಾಣೆ, ನ. ೧೬: ಚೆಯ್ಯಂಡಾಣೆ ಕನ್ನಡ ರಾಜ್ಯೋತ್ಸವ ಕ್ರೀಡಾ ಸಮಿತಿಯ ವತಿಯಿಂದ ತಾ. ೨೦ ರವರೆಗೆ ನರಿಯದಂಡ, ಕೋಕೇರಿ, ಚೇಲಾವರ ಗ್ರಾಮದ ಗ್ರಾಮಸ್ಥರಿಗೆ ಆಟೋಟಗಳ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಗ್ರಾಮದ ಪ್ರತಿಯೊಬ್ಬರಿಗೂ, ಶಾಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೂ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ಸಮಾರೋಪ ಸಮಾರಂಭದಲ್ಲಿ ಕ್ರೀಡಾ ಸಮಿತಿಯ ಅಧ್ಯಕ್ಷ ಮುಂಡ್ಯೋಳAಡ ರವಿ ಸೋಮಣ್ಣ ಅವರು ಧ್ವಜಾರೋಹಣ ನಡೆಸಲಿದ್ದಾರೆ.
ನಂತರ ನಾಡಗೀತೆ, ಕ್ರೀಡಾಜ್ಯೋತಿ ಆಗಮನ, ವಿವಿಧ ಸ್ಪರ್ಧೆಗಳು ನಡೆಯಲಿವೆ. ಅಪರಾಹ್ನ ಸಭೆಯ ಅಧ್ಯಕ್ಷತೆಯನ್ನು ರವಿ ಸೋಮಣ್ಣ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ, ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ, ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾಕುಶಾಲಪ್ಪ, ಕೊಡಗು ಪೊಲೀಸ್ ಅಧೀಕ್ಷಕ ಮಲ್ಚೀರ ಎ. ಅಯ್ಯಪ್ಪ, ಪಂಚಾಯಿತಿ ಅಧ್ಯಕ್ಷ ಬಿ.ಎಂ. ರಾಜೇಶ್ ಅಚ್ಚಯ್ಯ, ಉಪಾಧ್ಯಕ್ಷೆ ಬಿ.ಎಸ್. ಪುಷ್ಪ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಕೆ.ಸಿ. ಮೀನಾ ಭಾಗವಹಿಸಲಿದ್ದಾರೆ.