ಸೋಮವಾರಪೇಟೆ, ನ. ೧೪: ಹರದೂರು ವೃತ್ತದ ಪೌತಿಖಾತೆ ಆಂದೋಲನ ಪಂಚಾಯಿತಿ ಸಭಾಂಗಣದಲ್ಲಿ ತಾ. ೧೫ ರಂದು (ಇಂದು) ಮಧ್ಯಾಹ್ನ ೨.೩೦ಕ್ಕೆ ನಡೆಯಲಿದೆ ಎಂದು ಹೋಬಳಿ ಕಂದಾಯ ಪರಿವೀಕ್ಷಕರಾದ ದೀಪಿಕ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಪೌತಿಖಾತೆ ಆಂದೋಲನ ಜಿಲ್ಲೆಯಾದ್ಯಂತ ನಡೆಯುತ್ತಿದ್ದು, ಹರದೂರು, ಅಂಜನಗೇರಿ ಬೆಟ್ಟಗೇರಿ ಹಾಗೂ ಗರಗಂದೂರು ಗ್ರಾಮಗಳ ಪೌತಿ ಖಾತೆಗೆ ಸಂಬAಧಿಸಿದ ಅರ್ಜಿ ಸಲ್ಲಿಸುವವರು, ಖಾತೆದಾರರು ಮರಣ ಹೊಂದಿದಲ್ಲಿ ಮರಣ ಪ್ರಮಾಣಪತ್ರ, ವಂಶಾವಳಿ ದೃಢೀಕರಣ, ಪಹಣಿ, ಫಾರಂ ೧ರಲ್ಲಿ ಅರ್ಜಿ, ಎಂ.ಸಿ ಹಾಗೂ ಜಮಾಬಂಧಿ ಪ್ರತಿಯೊಂದಿಗೆ ಅರ್ಜಿ ಸಲ್ಲಿಸಬಹುದು ಎಂದು ಮಾಹಿತಿ ನೀಡಿದ್ದಾರೆ.