ಮುಳ್ಳೂರು, ನ. ೧೪: ಸಮೀಪದ ಕೊಡಗು-ಹಾಸನ ಜಿಲ್ಲಾ ಗಡಿ ಭಾಗದಲ್ಲಿರುವ ಸಕಲೇಶಪುರ ತಾಲೂಕಿನ ಹೊಸೂರು ಗ್ರಾಮದಲ್ಲಿರುವ ನಾನೂರು ವರ್ಷಗಳ ಇತಿಹಾಸ ಹೊಂದಿರುವ ಹೊಸೂರು ಬೆಟ್ಟದ ಶ್ರೀ ಬಸವೇಶ್ವರಸ್ವಾಮಿ ಕೌಟೆಕಾಯಿ ಜಾತ್ರೆ ಸೋಮವಾರ ಶ್ರದ್ಧಾ ಭಕ್ತಿಯಿಂದ ನೆರವೇರಿತು. ಹೊಸೂರು ಗ್ರಾಮದ ಬೆಟ್ಟದ ಮೇಲಿರುವ ಶ್ರೀ ಬಸವೇಶ್ವರ ಸ್ವಾಮಿ ದೇವಸ್ಥಾನ ಸಮಿತಿ ಮತ್ತು ಜೆ.ಸಿ.ಐ ಹೊಸೂರು ಬಸವೇಶ್ವರ ಸಂಸ್ಥೆ ವತಿಯಿಂದ ನಡೆದ ಕೌಟೆಕಾಯಿ ಜಾತ್ರೆ ಪ್ರಯುಕ್ತ ದೇವಸ್ಥಾನದಲ್ಲಿ ಸೋಮವಾರ ಬೆಳಗ್ಗೆ ೯ ಗಂಟೆಯಿAದ ಅರ್ಚಕರು ದೇವರಿಗೆ ವಿಶೇಷ ಪೂಜೆ ನೆರವೇರಿಸಿದರು.ಪೂಜಾ ಕಾರ್ಯದಲ್ಲಿ ಹೊಸೂರು, ಸಕಲೇಶಪುರ ಸೇರಿದಂತೆ ಕೊಡಗು ಜಿಲ್ಲೆಯ ಶನಿವಾರಸಂತೆ ಸುತ್ತಮುತ್ತಲಿನಿಂದ ನೂರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ಬಸವೇಶ್ವರ ಸ್ವಾಮಿ ಕೌಟೆಕಾಯಿ ಜಾತ್ರೆ ಪ್ರಯುಕ್ತ ದೇವರ ವಿಗ್ರಹವನ್ನು ಅಡ್ಡಪಲ್ಲಕ್ಕಿಯಲ್ಲಿ ಕೂರಿಸಿ ಹೊಸೂರು ಗ್ರಾಮದ ಬೀದಿಗಳಲ್ಲಿ ವಾದ್ಯಗೋಷ್ಠಿ ಯೊಂದಿಗೆ ಮೆರವಣಿಗೆ ನಡೆಸಲಾಯಿತು. ಬೆಟ್ಟದ ಕೆಳ ಭಾಗದಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ಜಾತ್ರೆ ನಡೆಸಲಾಯಿತು.

ಸಾಧಕರಿಗೆ ಸನ್ಮಾನ ಕಾರ್ಯಕ್ರಮ ವನ್ನು ಸಕಲೇಶಪುರದ ಉದ್ಯಮಿ ಜಯಪ್ರಕಾಶ್ ಉದ್ಘಾಟಿಸಿದರು. ದೇವಸ್ಥಾನ ಸಮಿತಿ ಪ್ರಮುಖ ರಮೇಶ್ ಪ್ರಸ್ತಾವಿಕವಾಗಿ ಮಾತನಾಡಿ, ರೈತ, ಜಾನುವಾರು, ಕೃಷಿಗೆ ಭಾವನಾತ್ಮಕ ಸಂಬAಧ ಇದ್ದು ಹಿಂದೆ ರೈತ ಜಾನುವಾರು ಬಳಸಿ ಉಳುಮೆ ಮಾಡುವುದು, ಸಾವಯವ ಕೃಷಿ ಪದ್ಧತಿ ಹಾಗೂ ಬೆಳೆಗಳಿಗೆ ಜಾನುವಾರುಗಳ ಸಗಣಿಯಲ್ಲಿರುವ ಕೌಟೆಕಾಯಿ ಬೀಜವನ್ನು ಸಂಗ್ರಹಿಸಿ ಅದನ್ನು ನೆಟ್ಟು ಕೌಟೆಕಾಯಿಯ ರಸದಿಂದ ಕೀಟನಾಶಕ ಔಷಧಿ ಯನ್ನಾಗಿ ಬಳಸುತ್ತಿದ್ದರು. ಈ ಹಿನ್ನೆಲೆ ಯಲ್ಲಿ ಕಳೆದ ೪೦೦ ವರ್ಷಗಳಿಂದ ಗ್ರಾಮದ ಬಸವೇಶ್ವರ ದೇವರ ವಾರ್ಷಿಕ ಪೂಜೆಯಲ್ಲಿ ಕೌಟೆಕಾಯಿ ಎಂಬ ಹೆಸರಿನಲ್ಲಿ ಜಾತ್ರೆಯನ್ನು ನಡೆಸಿ ಕೊಂಡು ಬರಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಸಾಧಕರಾದ ಬೆಂಗಳೂರಿನ ಮೈ ನೇಚರ್ ಇಂಡಿಯಾ ಫೌಂಡೇಶ್‌ನ ಜಿ.ಎಸ್. ಸುರೇಂದ್ರ, ಪತ್ರಕರ್ತ ಸುರೇಶ್ ಚೆರಿಯಮನೆ, ಸೋಮವಾರಪೇಟೆಯ ದಾನಿ ಜಿ.ಟಿ. ಯೋಗೇಂದ್ರ ಇವರುಗಳನ್ನು ದೇವಸ್ಥಾನ ಸಮಿತಿ ಮತ್ತು ಜೆಸಿಐ ಹೊಸೂರು ಬಸವೇಶ್ವರ ವೇದಿಕೆಯಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷ ಟಿ.ಎಸ್. ಶಾಂತಮಲ್ಲಪ್ಪ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ದೇವಸ್ಥಾನ ಸಮಿತಿ ಕಾರ್ಯದರ್ಶಿ ಎಚ್.ಎ. ಗಣೇಶ್, ಪ್ರಮುಖರಾದ ಬಸವರಾಜು, ಎಚ್.ಎಂ. ಮೋಹನ್, ಎಚ್.ಎಂ. ಪುಟ್ಟಸ್ವಾಮಿ ಮುಂತಾದವರು ಹಾಜರಿದ್ದರು. ಜಾತ್ರೆ ಪ್ರಯುಕ್ತ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.