ಮಡಿಕೇರಿ, ನ. ೧೪: ಚಾಮರಾಜ ನಗರದ ಗುಂಡ್ಲುಪೇಟೆಯಲ್ಲಿ ನಡೆದ ವಿಭಾಗ ಮಟ್ಟದ ಪ್ರೌಢಶಾಲಾ ಬಾಲಕರ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ವೀರಾಜಪೇಟೆಯ ಕಾವೇರಿ ಶಾಲೆಯ ೯ನೇ ತರಗತಿಯ ವಿದ್ಯಾರ್ಥಿಗಳಾದ ಆಕರ್ಷ್ ಕೊಂಗAಡ, ಅಯ್ಯಪ್ಪ ಎಂ.ಜಿ, ತಹನ್ ಪೂವಯ್ಯ ಸಿ., ಮೊಹಮ್ಮದ್ ಆಜಾನ್ ಎಂ. ೧೦ನೇ ತರಗತಿಯ ಹಾಗೂ ಹಕಿಮ್ ಪಿ.ಎಲ್. ೯ನೇ ತರಗತಿ ಸಂತ ಮೇರಿ ಶಾಲೆ ಸುಂಟಿಕೊಪ್ಪ ಈ ವಿದ್ಯಾರ್ಥಿಗಳು ಕೊಡಗು ಜಿಲ್ಲೆಯನ್ನು ಪ್ರತಿನಿಧಿಸಿ ವಿಜೇತರಾಗಿದ್ದಾರೆ.

ಪ್ರಥಮ ಸುತ್ತಿನಲ್ಲಿ ಮೈಸೂರಿನ ತಂಡದ ವಿರುದ್ಧ ಎರಡನೇ ಸುತ್ತಿನಲ್ಲಿ ದಕ್ಷಿಣ ಕನ್ನಡದ ವಿರುದ್ಧ ಗೆದ್ದು ನಂತರ ಅಂತಿಮ ಸುತ್ತಿನಲ್ಲಿ ಚಿಕ್ಕಮಗಳೂರು ತಂಡದ ಎದುರು ವಿಜೇತರಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ತಾ. ೧೪, ೧೫ ಹಾಗೂ ೧೬ ರಂದು ಉಡುಪಿ ಜಿಲ್ಲೆಯಲ್ಲಿ ನಡೆಯುವ ರಾಜ್ಯಮಟ್ಟದ ಪಂದ್ಯಾವಳಿಯಲ್ಲಿ ಕೊಡಗು ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ. ಇವರುಗಳಿಗೆ ತರಬೇತುದಾರ ರಘುರಾಜ್ ತರಬೇತಿ ನೀಡಿದ್ದು, ಶಾಲೆಯ ದೈಹಿಕ ಶಿಕ್ಷಕಿ ಸರಿತಾ ಬಿ.ಯು. ಸಹಕಾರವನ್ನು ನೀಡಿರುತ್ತಾರೆ.