ಮಡಿಕೇರಿ, ನ. ೮: ಮರ್ಕೆರ ಯೂತ್ ಕ್ರಿಕೆಟ್ ಕ್ಲಬ್ (ಎಂ.ವೈ.ಸಿ.ಸಿ.) ವತಿಯಿಂದ ಜಿಲ್ಲಾ ಮಟ್ಟದ ಟಿ.೨೦ ಲೆದರ್ ಬಾಲ್ ಕ್ರಿಕೆಟ್ ಚಾಂಪಿಯನ್ ಶಿಪ್ ತಾ. ೨೦ ರಿಂದ ೩೦ರ ತನಕ ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಕ್ಲಬ್‌ನ ಉಪಾಧ್ಯಕ್ಷ ಪೊನ್ನಚ್ಚನ ಮಧು ಮಾಹಿತಿ ನೀಡಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಕ್ರೀಡಾಪಟುಗಳು ಈ ಪಂದ್ಯಾಟದಲ್ಲಿ ಭಾಗವಹಿಸಬೇಕಾಗಿದ್ದು, ಬೇರೆಡೆ ನೆಲೆಸಿದ್ದರು ಇಲ್ಲಿನ ಒಂದು ದಾಖಲೆಯನ್ನು ನೀಡಿ ತಂಡದಲ್ಲಿ ಆಡಬಹುದಾಗಿದೆ. ನಾಕೌಟ್ ಮಾದರಿಯಲ್ಲಿ ಕ್ರೀಡೆ ನಡೆಯಲಿದೆ. ವಿಜೇತ ತಂಡಕ್ಕೆ ರೂ. ೩೦ ಸಾವಿರ ಹಾಗೂ ಟ್ರೋಫಿ, ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ ರೂ. ೨೦ ಸಾವಿರ ಹಾಗೂ ಟ್ರೋಫಿ ಬಹುಮಾನವಾಗಿ ನೀಡಲಾಗುತ್ತದೆ. ಪ್ರತಿ ಪಂದ್ಯಕ್ಕೂ ‘ಮ್ಯಾನ್ ಆಫ್ ದಿ ಮ್ಯಾಚ್’ ಪ್ರಶಸ್ತಿ ಜೊತೆಗೆ ವಿವಿಧ ವೈಯಕ್ತಿಕ ಬಹುಮಾನ ನೀಡಲಾಗುತ್ತದೆ. ತಾ. ೧೩ರೊಳಗೆ ತಂಡವನ್ನು ನೋಂದಾಯಿಸಿಕೊಳ್ಳುವAತೆ ವಿವರಿಸಿದ ಅವರು, ಹೆಚ್ಚಿನ ಮಾಹಿತಿಗೆ ೯೪೮೦೩೧೮೨೧೩, ೮೬೬೦೭೨೩೧೭೦, ೮೩೧೦೧೨೮೭೯೦ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಹೇಳಿದರು.

ಮೈದಾನ ನಿರ್ವಹಣೆಗೆ ಒತ್ತಾಯ

ನಗರದ ಜಿಲ್ಲಾ ಕ್ರೀಡಾಂಗಣ ವ್ಯವಸ್ಥಿತವಾಗಿ ಇಲ್ಲದ ಬಗ್ಗೆ ಮಧು ಆಕ್ಷೇಪ ವ್ಯಕ್ತಪಡಿಸಿದರು. ಇರುವ ಒಂದು ಮೈದಾನ ಸೂಕ್ತ ನಿರ್ವಹಣೆ ಇಲ್ಲದೆ ಹಾಳಾಗುತ್ತಿದೆ. ಇದರಿಂದ ಕ್ರೀಡಾಪಟುಗಳಿಗೆ ಸಮಸ್ಯೆಯಾಗುತ್ತಿದೆ ಈ ಬಗ್ಗೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಪಾಲೆಮಾಡುವಿನಲ್ಲಿ ನಿರ್ಮಾಣವಾಗಬೇಕಾದ ಕ್ರಿಕೆಟ್ ಸ್ಟೇಡಿಯಂ ಯಾವ ಹಂತದಲ್ಲಿದೆ ಎಂದು ಯಾರಿಗೂ ತಿಳಿಯುತ್ತಿಲ್ಲ. ಇದರ ನಿರ್ವಹಣೆಯನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಅಧೀನ ಸ್ಥಳೀಯ ಕ್ಲಬ್‌ಗೆ ನೀಡಿದರೆ ಉತ್ತಮ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಗೋಷ್ಠಿಯಲ್ಲಿ ಕ್ಲಬ್‌ನ ಅಧ್ಯಕ್ಷ ಕಾಯಪಂಡ ಎಂ. ಉತ್ತಪ್ಪ, ಕಾರ್ಯದರ್ಶಿ ಎಂ.ಎA.ಸುನಿಲ್, ಸದಸ್ಯರುಗಳಾದ ಪ್ರಿನ್ಸ್ ಕುಶಾಲಪ್ಪ ಹಾಗೂ ಟಿ.ಆರ್. ಧ್ರುವ ಹಾಜರಿದ್ದರು.