ಮಡಿಕೇರಿ, ನ. ೮: ಪ್ರಸಕ್ತ ಸಾಲಿಗೆ ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಪರಿಶಿಷ್ಟ ಜಾತಿಯ ವಿದ್ಯಾವಂತ ನಿರುದ್ಯೋಗ ಯುವಕ-ಯುವತಿಯರಿಗೆ ವೃತ್ತಿ ಕೌಶಲ್ಯಾಭಿವೃದ್ಧಿ ತರಬೇತಿ ಯೋಜನೆಯಡಿ ವಿವಿಧ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಸೌರಶಕ್ತಿ ಪ್ಯಾನೆಲ್ ಅಳವಡಿಕೆ ಮತ್ತು ರಿಪೇರಿ ತರಬೇತಿ, ಜೆಸಿಬಿ, ಟ್ರಾö್ಯಕ್ಟರ್, ರೋಡ್ ರೋಲರ್, ಅರ್ಥ್ ಮೂವರ್ಸ್ ಚಾಲನಾ ತರಬೇತಿ, ಎ.ಸಿ., ಕಂಪ್ಯೂಟರ್ ಮತ್ತು ಮೊಬೈಲ್ ರಿಪೇರಿ ತರಬೇತಿ ನೀಡಲಾಗುತ್ತದೆ. ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆ ಹೊಂದಿದ್ದು, ೧೮ ರಿಂದ ೪೦ ವರ್ಷದೊಳಗಿರಬೇಕು.

ಪಿಯುಸಿ ಕಾಮರ್ಸ್, ಬಿಕಾಂ ವಿದ್ಯಾರ್ಹತೆ ಹೊಂದಿರುವವರಿಗೆ ಅಕೌಂಟ್ ಮತ್ತು ಟ್ಯಾಲಿ ತರಬೇತಿ, ಬಿ.ಇ. ಪದವಿ ಪಡೆದವರಿಗೆ ಕ್ಯಾಡ್, ಕ್ಯಾಡ್+. ಜಾವ ಪೈಥಾನ್ ಬಗ್ಗೆ ತರಬೇತಿ, ಡಿಪ್ಲೋಮೊ, ಯಾವುದೇ ಪದವಿ ಪಡೆದವರಿಗೆ ವೆಬ್ ಡಿಸೈನಿಂಗ್ ತರಬೇತಿ ಮತ್ತು ೨ಡಿ ಆನಿಮೇಷನ್, ೩ಡಿ ಆನಿಮೇಷನ್ ಬಗ್ಗೆ ತರಬೇತಿ ಹಾಗೂ ಡಿಪ್ಲೋಮೊ ಪತ್ರಿಕೋದ್ಯಮ, ಪದವಿಯಲ್ಲಿ ಪತ್ರಿಕೋದ್ಯಮ ಪಡೆದವರಿಗೆ ಟೆಲಿಜರ್ನಲಿಸಂ ತರಬೇತಿ ನೀಡಲಾಗುತ್ತದೆ. ೨೧ ರಿಂದ ೪೦ ವರ್ಷದೊಳಗಿರಬೇಕು.

ಅರ್ಜಿಗಳು ಸೇವಾಸಿಂಧು ಪೋರ್ಟಲ್ hಣಣಠಿs://sevಚಿsiಟಿಜhu.ಞಚಿಡಿಟಿಚಿಣಚಿಞಚಿ.gov.iಟಿ ನಲ್ಲಿ ಲಭ್ಯವಿದೆ. ಫಲಾಪೇಕ್ಷಿಗಳು ‘ಗ್ರಾಮ ಒನ್’ ‘ಬೆಂಗಳೂರು ಒನ್’ ಅಥವಾ ‘ಕರ್ನಾಟಕ ಒನ್’ ಕೇಂದ್ರಗಳಲ್ಲಿ ಮಾತ್ರ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ತಾ. ೩೦ ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಜಿಲ್ಲಾ ವ್ಯವಸ್ಥಾಪಕರು, ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕೊಡಗು ಜಿಲ್ಲೆ-೫೭೧೨೦೧, ದೂ.ಸಂ.೦೮೨೭೨-೨೨೮೮೫೭ ನ್ನು ಸಂಪರ್ಕಿಸಬಹುದು ಎಂದು ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಚಂದ್ರಶೇಖರ್ ತಿಳಿಸಿದ್ದಾರೆ.