ಮಡಿಕೇರಿ, ನ. ೮: ಸಮರ್ಥ ಕನ್ನಡಿಗರು ಸಂಸ್ಥೆಯ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರನ್ನು ಸಮರ್ಥ ಕನ್ನಡಿಗ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂಸ್ಥೆಯ ವತಿಯಿಂದ ನಡೆದ ಕನ್ನಡ ಹಬ್ಬದ ಅಂಗವಾಗಿ ಕವಿಗೋಷ್ಠಿ ಆಯೋಜಿಸ ಲಾಗಿತ್ತು. ನಗರದ ಲಯನ್ಸ್ ಸಭಾಂಗಣ ದಲ್ಲಿ ಆಯೋಜಿತ ಕಾರ್ಯಕ್ರಮದಲ್ಲಿ ಸಮರ್ಥ ಕನ್ನಡಿಗರು ಸಂಸ್ಥೆಯ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ೧೧ ಮಂದಿಗೆ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕೆ.ಟಿ. ಬೇಬಿ ಮ್ಯಾಥ್ಯೂ (ಸಮಾಜ ಸೇವೆ), ಎಂ.ಈ. ಮಹಮ್ಮದ್ (ಮಾಧ್ಯಮ ಮತ್ತು ಸಾಹಿತ್ಯ ಕ್ಷೇತ್ರ), ಕಲ್ಲುಮಾಡಂಡ ಶಶಿ ಮೊಣ್ಣಪ್ಪ (ಮಕ್ಕಳ ಹಿತರಕ್ಷಣೆ ಸೇವಾ ಕ್ಷೇತ್ರ), ಶ್ರೀನಿವಾಸ ಟಿ.ಪಿ. (ಅಂಚೆ ಸೇವೆ), ಎಂ. ಧನಂಜಯ (ಅಧ್ಯಕ್ಷರು, ಮಡಿಕೇರಿ ಚೇಂಬರ್ ಆಫ್ ಕಾಮರ್ಸ್ - ನಾಗರಿಕ ಸೇವಾ ಕ್ಷೇತ್ರ), ಸುನೀತಾ ಕುಶಾಲನಗರ (ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರ), ಶ್ರೀರಕ್ಷಾ ಪ್ರಭಾಕರ್ (ಯುವ ಪ್ರತಿಭೆ), ಟೀಮ್ ಕಾಡ ಅಗ್ರಹಾರ (ಸಂಘಟನೆ ಮತ್ತು ಸಾಮಾಜಿಕ ಕಳಕಳಿ ಕ್ಷೇತ್ರ), ಚಲುವರಾಜು ಹೆಚ್.ಎಲ್. (ಆರೋಗ್ಯ ಸೇವೆ ಮತ್ತು ವೈದ್ಯಕೀಯ ಸಾಹಿತ್ಯ), ಸಂಜಯ್ (ಅರಣ್ಯ ಸೇವೆ ಮತ್ತು ಪರಿಸರ ಕಾಳಜಿ ಕ್ಷೇತ್ರ) ಚೇತನ್ ಕೆ.ಎಚ್. (ಸಮಾಜ ಸೇವಾ ಕ್ಷೇತ್ರ) ಅವರುಗಳಿಗೆ ಪ್ರಶಸ್ತಿ ವಿತರಣೆಯನ್ನು ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ನೆರವೇರಿಸಿದರು. ಕನ್ನಡ ಹಬ್ಬದ ಅಂಗವಾಗಿನ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು ಮಡಿಕೇರಿ ನಗರಸಭಾಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ ವಿತರಿಸಿದರು.
ಉತ್ತರ ಕರ್ನಾಟಕ ವಲಯದ ನಿವೃತ್ತ ಅಂಚೆ ನಿರ್ದೇಶಕ ಪಿ.ವಿ. ದಾಮೋದರ್, ಸಮರ್ಥ ಕನ್ನಡಿಗರು ಸಂಸ್ಥೆಯ ಸಂಸ್ಥಾಪಕ ಲಿಂಗೇಶ್ ಹುಣಸೂರು, ಸಮರ್ಥ ಕನ್ನಡಿಗರು ಸಂಸ್ಥೆಯ ಪ್ರಧಾನ ಸಂಚಾಲಕ ಆನಂದ್ ದೆಗ್ಗನಹಳ್ಳಿ, ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಎಚ್.ಟಿ. ಮಡಿಕೇರಿ ತಾಲೂಕು ಕಸಾಪ ಅಧ್ಯಕ್ಷ ಅಂಬೆಕಲ್ ನವೀನ್ ಕುಶಾಲಪ್ಪ ಹಾಜರಿದ್ದರು.
ಹೇಮಂತ್ ಕಲ್ಲಹಳ್ಳಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಚಿತ್ರ ಆರ್ಯನ್ ಪ್ರಾರ್ಥಿಸಿದರು. ಕಡ್ಲೇರ ತುಳಸಿ ಮೋಹನ್ ಸ್ವಾಗತಿಸಿ, ಸಂಸ್ಥೆಯ ಜಿಲ್ಲಾ ಸಂಚಾಲಕಿ ಕೆ. ಜಯಲಕ್ಷಿö್ಮ ವಂದಿಸಿದರು.