ಶನಿವಾರಸಂತೆ, ನ. ೭: ಸಮೀಪದ ಮಾಲಂಬಿ ತಿರುವು ರಸ್ತೆಯಲ್ಲಿ ನಡೆದು ಬರುತ್ತಿದ್ದ ಮಹಿಳೆಗೆ ಖಾಸಗಿ ಬಸ್ (ಕೆಎ-೨೦-ಸಿ-೯೧೬೭) ಡಿಕ್ಕಿಯಾಗಿದ್ದು, ಗಂಭೀರವಾಗಿ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಡ್ಲೆಮಕ್ಕಿ ಹಾಡಿಯ ಗಂಗೆ (೫೫) ಗಾಯಗೊಂಡ ಮಹಿಳೆ. ಈಕೆ ರಸ್ತೆಯಲ್ಲಿ ನಡೆದು ಬರುತ್ತಿರುವಾಗ ಕುಶಾಲನಗರದ ಕಡೆಯಿಂದ ಬಂದ ಬಸ್ ಹಿಂಬದಿಯಿAದ ಡಿಕ್ಕಿಪಡಿಸಿದೆ. ಪರಿಣಾಮ ರಸ್ತೆಗೆ ಬಿದ್ದು ಗಾಯಗೊಂಡರು. ಪ್ರತ್ಯಕ್ಷದರ್ಶಿ ಕಾರ್ಮಿಕ ಗಣೇಶ್ ಬಸಪ್ಪ ಅವರೊಂದಿಗೆ ಗಂಗೆಯನ್ನು ಉಪಚರಿಸಿ ಆ್ಯಂಬ್ಯುಲೆನ್ಸ್ನಲ್ಲಿ ಕುಶಾಲನಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಅಪಘಾತಕ್ಕೆ ಕಾರಣರಾದ ಬಸ್ ಚಾಲಕ ಪ್ರವೀಣ್ ಮೇಲೆ ಕ್ರಮ ಕೈಗೊಳ್ಳುವಂತೆ ಕಾರ್ಮಿಕ ಗಣೇಶ್ ಶನಿವಾರಸಂತೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಬಸ್ ವಶಪಡಿಸಿಕೊಂಡ ಹೆಡ್‌ಕಾನ್ಸ್ಟೇಬಲ್ ಕೆ.ಎಂ. ಪ್ರದೀಪ್ ಕುಮಾರ್ ಪ್ರಕರಣ ದಾಖಲಿಸಿದ್ದಾರೆ.