ಕಣಿವೆ, ನ. ೭: ಕುಶಾಲನಗರ ತಾಲೂಕಿನ ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣಿವೆ ಗ್ರಾಮದ ಐತಿಹಾಸಿಕ ದೇವಾಲಯ ಶ್ರೀ ರಾಮಲಿಂಗೇಶ್ವರ ಸನ್ನಿಧಿಯಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ತೂಗುಸೇತುವೆ ಸೂಕ್ತ ನಿರ್ವಹಣೆ ಕೊರತೆಯಿಂದಾಗಿ ನಲುಗಿಹೋಗಿದೆ. ಈ ಕಾರಣ ದಿಂದಾಗಿ ನಿತ್ಯವೂ ತಮ್ಮ ಸಂಚಾರಕ್ಕಾಗಿ ಈ ತೂಗು ಸೇತುವೆಯನ್ನು ಆಶ್ರಯಿಸಿರುವ ಜನರು ತಮ್ಮ ಪ್ರಾಣವನ್ನು ಬಲವಾಗಿ ಕೈಯಲ್ಲಿ ಹಿಡಿದು ತಿರುಗಾಡುವಂತಹ ದುಸ್ಥಿತಿಯ ಪರಿಸ್ಥಿತಿ ನಿರ್ಮಾಣಗೊಂಡು ಮೂರು ವರುಷಗಳು ಕಳೆದರೂ ಕೂಡ ಸ್ಥಳೀಯ ಹೆಬ್ಬಾಲೆ ಗ್ರಾಮ ಪಂಚಾಯಿತಿ ಆಡಳಿತವಾಗಲೀ, ಜಿಲ್ಲಾಡಳಿತವಾಗಲಿ ಸೂಕ್ತ ನಿರ್ವಹಣೆಗೆ ಮುಂದಾಗದಿರುವುದು ಸಾರ್ವಜನಿಕರ ಆಕ್ರೋಷಕ್ಕೆ ಕಾರಣವಾಗಿದೆ.
ಕಳೆದ ೨೦೧೮ರ ಆಗಸ್ಟ್ನಲ್ಲಿ ಕೊಡಗು ಜಿಲ್ಲೆಯನ್ನು ಕಾಡಿದ ಜಲಪ್ರಳಯದ ಸಂದರ್ಭ ತನ್ನ ಎಲ್ಲೆಯನ್ನು ಮೀರಿ ಅಪಾಯದ ಮಟ್ಟದಲ್ಲಿ ಹರಿದ ಕಾವೇರಿ ನದಿಯ ನೀರಿನ ರಭಸಕ್ಕೆ ಈ ತೂಗುಸೇತುವೆ ಜಿಲ್ಲಾಡಳಿತವಾಗಲಿ ಸೂಕ್ತ ನಿರ್ವಹಣೆಗೆ ಮುಂದಾಗದಿರುವುದು ಸಾರ್ವಜನಿಕರ ಆಕ್ರೋಷಕ್ಕೆ ಕಾರಣವಾಗಿದೆ.
ಕಳೆದ ೨೦೧೮ರ ಆಗಸ್ಟ್ನಲ್ಲಿ ಕೊಡಗು ಜಿಲ್ಲೆಯನ್ನು ಕಾಡಿದ ಜಲಪ್ರಳಯದ ಸಂದರ್ಭ ತನ್ನ ಎಲ್ಲೆಯನ್ನು ಮೀರಿ ಅಪಾಯದ ಮಟ್ಟದಲ್ಲಿ ಹರಿದ ಕಾವೇರಿ ನದಿಯ ನೀರಿನ ರಭಸಕ್ಕೆ ಈ ತೂಗುಸೇತುವೆ ಒತ್ತಾಯದಿಂದಾಗಿ ಶಾಸಕ ಅಪ್ಪಚ್ಚು ರಂಜನ್ ಮೂರು ಲಕ್ಷ ಅನುದಾನ ನೀಡಿ ತಾತ್ಕಾಲಿಕವಾಗಿ ಈ ತೂಗು ಸೇತುವೆಯನ್ನು ಸರಿಪಡಿಸಲಾಗಿತ್ತು. ಅಂದರೆ ಹಾನಿ ಆಗಿದ್ದ ತೂಗು ಸೇತುವೆಯನ್ನು ಎಕ್ಸ÷್ಕವೇಟರ್ಗಳ ಮೂಲಕ ಎಳೆದು ತಹಬಂದಿಗೆ ತರಲಾಗಿತ್ತು. ಅಷ್ಟರಲ್ಲಿ ನೀರಿನ ರಭಸಕ್ಕೆ ಸೇತುವೆಗೆ ಅಳವಡಿಸಿದ್ದ ಕಬ್ಬಿಣದ ರಾಡುಗಳು, ರಕ್ಷಾಕವಚದ ಮೆಸ್ಸುಗಳು ಹಾಳಾಗಿದ್ದವು.
ಕಳೆದ ಹತ್ತು ವರ್ಷಗಳ ಹಿಂದೆ ಅಂದರೆ ೨೦೧೧ ರಲ್ಲಿ ನಿರ್ಮಿಸಿದ ಈ ತೂಗುಸೇತುವೆಗೆ ಅಳವಡಿಸಿ ರುವ ಕಬ್ಬಿಣದ ನೆಟ್ಟು ಬೋಲ್ಟುಗಳು ಸಡಿಲಗೊಂಡು ದಿನೇ ದಿನೇ ಕಳಚಿ ನೀರೊಳಗೆ ಬೀಳುತ್ತಿವೆ. ಕೆಲವು ಬೋಲ್ಟುಗಳು ತುಕ್ಕು ಹಿಡಿದು ತಮ್ಮ ಶಕ್ತಿ ಕಳೆದುಕೊಂಡಿವೆ. ಅಷ್ಟೇ ಅಲ್ಲ ಸುಮಾರು
(ಮೊದಲ ಪುಟದಿಂದ) ೨೦೦ ಮೀಟರ್ ದೂರದಷ್ಟು ತೀರ ಅಳವಡಿಸಿರುವ ಈ ತೂಗುಸೇತುವೆಯಲ್ಲಿ ಎರಡು ಬದಿಗಳಲ್ಲಿ ಅಳವಡಿಸಿರುವ ‘ಎಲ್’ ಆಕಾರದ ಕಬ್ಬಿಣದ ರಾಡುಗಳು ನದಿತೊಳಗೆ ಬಿದ್ದು ಹೋಗಿದ್ದರೂ ಕೂಡ ಬದಲೀ ರಾಡುಗಳನ್ನು ಅಳವಡಿಸಿ ತೂಗುಸೇತುವೆಯ ಗುಣಮಟ್ಟ ಕಾಯ್ದುಕೊಳ್ಳಬೇಕಾದ ಆಡಳಿತ ವ್ಯವಸ್ಥೆ ತಮಗೆ ಸಂಬAಧಿಸಿದ್ದು ಅಲ್ಲವೇ ಅಲ್ಲಾ ಎಂಬAತೆ ಕಣ್ಮುಚ್ಚಿ ಕುಳಿತಿದೆ.
ತೂಗುಸೇತುವೆಯ ಪಾದಚಾರಿ ಮಾರ್ಗದಲ್ಲಿ ಸುಮಾರು ೨೫೦ ಸಂಖ್ಯೆಯ ಕಾಂಕ್ರೀಟ್ ಹಲಗೆಗಳನ್ನು ಅಳವಡಿಸಲಾಗಿದೆ. ಈ ಪಾದಚಾರಿ ಮಾರ್ಗದ ಕಾಂಕ್ರೀಟ್ ಹಲಗೆಯ ಎರಡು ಬದಿಗಳಲ್ಲಿ ಪಾದಚಾರಿಗಳ ಕಾಲು ಜಾರದಂತೆ ರಕ್ಷಾ ಕವಚವಾಗಿ ವೆಲ್ಡಿಂಗ್ ಮಾಡಿದ್ದ ಕಬ್ಬಿಣದ ಮೆಸ್ ಕೂಡ ಕಳಚಿ ನೇತಾಡುತ್ತಿದೆ. ಇದು ಪಾದಚಾರಿಗಳಲ್ಲಿ ಭಯವನ್ನು ಮೂಡಿಸುತ್ತಿದೆ.
ಸ್ಥಳೀಯ ಗ್ರಾ.ಪಂ. ಕಡೆಗಣನೆ : ಕಳೆದ ೨೦೧೧ ರಲ್ಲಿ ಲೋಕಾರ್ಪಣೆ ೨೦೧೧ ರಲ್ಲಿ ಮಲೆನಾಡು ಪ್ರದೇಶ ಅಭಿವೃದ್ದಿ ಮಂಡಳಿ ವತಿಯಿಂದ ಸುಮಾರು ೮೦ ಲಕ್ಷ ವೆಚ್ಚ ಮಾಡಿ ನಿರ್ಮಿಸಿದ್ದ ಈ ತೂಗು ಸೇತುವೆಯಿಂದಾಗಿ ನೆರೆಯ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕಾವೇರಿ ನದಿ ದಂಡೆಯ ಹತ್ತಕ್ಕೂ ಹೆಚ್ಚು ಗ್ರಾಮಗಳ ೩೦೦ ಕ್ಕೂ ಅಧಿಕ ಮಂದಿ ತಮ್ಮ ದೈನಂದಿನ ಹೊಟ್ಟೆಪಾಡಿಗೆ ಕುಶಾಲನಗರದ ಕೈಗಾರಿಕಾ ಪ್ರದೇಶದ ವಿವಿಧ ಕಾಫಿ ಉದ್ದಿಮೆಗಳಲ್ಲಿ ಕೆಲಸ ಮಾಡಿ ಜೀವನ ನಡೆಸಲು ಈ ತೂಗುಸೇತುವೆಯನ್ನೇ ಅಳವಡಿಸಿಕೊಂಡಿದ್ದಾರೆ. ಅಷ್ಟು ಮಾತ್ರವಲ್ಲ. ಈ ಗ್ರಾಮಗಳ ನೂರಾರು ವಿದ್ಯಾರ್ಥಿಗಳು ಪ್ರೌಢ ಶಿಕ್ಷಣದ ನಂತರದ ಶಿಕ್ಷಣಕ್ಕಾಗಿ ಇದೇ ತೂಗುಸೇತುವೆಯ ಮೂಲಕ ಕೂಡಿಗೆ, ಕುಶಾಲನಗರ ಹಾಗು ಮಡಿಕೇರಿಗೆ ತೆರಳುತ್ತಾರೆ. ಜೊತೆಗೆ ಕುಶಾಲನಗರ ತಾಲೂಕಿನ ಕಣಿವೆ, ಕೂಡಿಗೆ, ಹಕ್ಕೆ, ಹುಲುಸೆ ಗ್ರಾಮಗಳ ಹತ್ತಾರು ಕೃಷಿಕರ ಕೃಷಿ ಭೂಮಿ ನದಿಯಾಚೆಯ ಪಿರಿಯಾಪಟ್ಟಣ ತಾಲೂಕಿನ ಗಡಿ ಗ್ರಾಮಗಳಿಗೆ ತೆರಳುತ್ತಾರೆ.ಯುವ ಮುಖಂಡ ಲೋಕೇಶ್ ಹೇಳುತ್ತಾರೆ.
ಶಾಶ್ವತ ಕಾಂಕ್ರೀಟ್ ಸೇತುವೆಗೆ ಆಗ್ರಹ : ತೂಗು ಸೇತುವೆ ಸಮರ್ಪಕವಾಗಿ ನಿರ್ವಹಣೆಯಾಗದ ಕಾರಣ ಮುಂದಾಗುವ ಅಪಾಯಕ್ಕೆ ಅಮಾಯಕ ಜೀವಗಳು ಗುರಿಯಾ ಗುವ ಮುನ್ನವೇ ಎಚ್ಚೆತ್ತುಕೊಂಡು ಕಾವೇರಿ ನದಿಗೆ ಅಡ್ಡಲಾಗಿ ಶಾಶ್ವತವಾದ ತೂಗುಸೇತುವೆಯನ್ನು ನಿರ್ಮಿಸಲು ಜಿಲ್ಲಾಡಳಿತ ಮುಂದಾಗಬೇಕು ಎಂದು ಗ್ರಾಪಂ ಮಾಜಿ ಸದಸ್ಯ ಹುಲುಸೆ ಗ್ರಾಮದ ವೆಂಕಟೇಶ್ ಒತ್ತಾಯಿಸಿದ್ದಾರೆ.
ಮಗಳ ಮನೆಗೆ ತೂಗು ಸೇತುವೆಯೇ ಆಸರೆ : ಹೇಗಿದ್ದರೂ ತೂಗು ಸೇತುವೆ ಆಯ್ತಲ್ಲ ಹೋಗಿ ಬರೋಕೆ ಅಂದುಕೊAಡು ನದಿಯಾಚೆ ದಂಡೆಯ ದೊಡ್ಡಕಮರವಳ್ಳಿ ಗ್ರಾಮಕ್ಕೆ ಮಗಳನ್ನು ಮದುವೆ ಮಾಡಿದ್ದೇನೆ. ತೂಗು ಸೇತುವೆ ಏನಾದರು ಬಂದ್ ಆದರೆ ಕುಶಾಲನಗರಕ್ಕಾಗಿ ಬಳಸಿ ೨೦ ಕಿಮೀ ಕ್ರಮಿಸಿ ನೂರಾರು ರೂಗಳನ್ನು ಖರ್ಚು ಮಾಡಿಕೊಂಡು ಮಗಳ ಮನೆಗೆ ಹೋಗಬೇಕಾಗುತ್ತದೆ. ಬಡವರು ನಾವೆಲ್ಲ ಅಷ್ಟೊಂದು ಹಣ ತರೋದು. ಆದ್ದರಿಂದ ಕೂಡಲೇ ತೂಗು ಸೇತುವೆ ಸರಿಪಡಿಸಿ ಎಂದು ತೊರೆನೂರಿನ ಮಹಿಳೆ ಗೌರಮ್ಮ ಹೇಳುತ್ತಾರೆ.
ಹಾಗಾಗಿ ಎರಡೂ ಜಿಲ್ಲೆಗಳ ಗಡಿ ಭಾಗದ ರೈತರ, ವಿದ್ಯಾರ್ಥಿಗಳ ಹಾಗೂ ಕೂಲಿ ಕಾರ್ಮಿಕರ ಬಾಂಧವ್ಯದ ಬೆಸುಗೆಯಾಗಿರುವ ಈ ತೂಗುಸೇತುವೆ ಅಪಾಯಕ್ಕೆ ಸಿಲುಕುವ ಮುನ್ನವೇ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಕೂಡಲೇ ರಿಪೇರಿ ಮಾಡಿ ಸುಸ್ಥಿತಿಗೆ ತರುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ.
(ವಿಶೇಷ ವರದಿ : ಕೆ.ಎಸ್.ಮೂರ್ತಿ)