(ಚಿತ್ರ-ವರದಿ: ಹೆಚ್.ಕೆ.ಜಗದೀಶ್) ಗೋಣಿಕೊಪ್ಪಲು, ನ.೬: ಕೊಡವ ಹಾಕಿ ಅಕಾಡೆಮಿ ವತಿಯಿಂದ ಮೊದಲ ಬಾರಿಗೆ ಕೊಡವ ಕೌಟುಂಬಿಕ ಹಾಕಿ ಜನಕ ಪಾಡಂಡ ದಿ. ಕುಟ್ಟಪ್ಪ ಸ್ಮರಣಾರ್ಥ ಆಯೋಜಿಸಿದ್ದ ೫-ಎ ಸೈಡ್ ರಿಂಕ್ ಹಾಕಿ ಪಂದ್ಯಾವಳಿಯಲ್ಲಿ ಚೇಂದAಡ ತಂಡ ಕುಪ್ಪಂಡ ವಿರುದ್ಧ ಗೆಲುವು ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದರೆ, ಕುಪ್ಪಂಡ (ಕೈಕೇರಿ) ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಕಳೆದ ೧೧ ದಿನಗಳಿಂದ ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ನಡೆಯುತ್ತಿದ್ದ ಪಂದ್ಯಾವಳಿಗೆ ವರ್ಣರಂಜಿತ ತೆರೆ ಎಳೆಯಲಾಯಿತು. ೧೧೪ ತಂಡಗಳು ಸೇರಿ ಒಟ್ಟು ೧೧೩೦ ಕ್ರೀಡಾಪಟುಗಳು ಭಾಗವಹಿಸಿ ಹಾಕಿ ನಮ್ಮೆಯ ರಂಗು ಹೆಚ್ಚಿಸುವಲ್ಲಿ ಕಾರಣರಾದರು.
ಅಂತಿಮ ಪಂದ್ಯದಲ್ಲಿ ಕುಪ್ಪಂಡ ತಂಡವನ್ನು ೮-೨ ಗೋಲುಗಳಿಂದ ಮಣಿಸಿ ಚೇಂದAಡ ಗೆಲುವಿಗೆ ಮುತ್ತಿಕ್ಕಿತು.
ಕುಪ್ಪಂಡ, ಚೇಂದAಡ, ಪರದಂಡ, ನೆಲ್ಲಮಕ್ಕಡ ಸೆಮಿಫೈನಲ್ ಪ್ರವೇಶಿಸಿತ್ತು. ತೀವ್ರ ಹಣಾಹಣಿಯಲ್ಲಿ ಕುಪ್ಪಂಡ ಹಾಗೂ ಚೇಂದAಡ ಗೆಲುವು ಸಾಧಿಸಿ ಫೈನಲ್ ಪ್ರವೇಶಿ ಮುಖಾಮುಖಿಯಾಯಿತು. ಅಂತಿಮ ಪಂದ್ಯವು ಅತ್ಯಂತ ರೋಚಕತೆಯಿಂದ ಕೂಡಿತ್ತು. ಎರಡು ತಂಡಗಳು ಗೆಲುವಿಗಾಗಿ ಸೆಣಸಾಡಿದವು.
ಪಂದ್ಯ ಪ್ರಾರಂಭದ ೧ ನಿಮಿಷದಲ್ಲೇ ಕುಪ್ಪಂಡ ತಂಡ ಮಿಂಚಿನ ೧ ಗೋಲು ಗಳಿಸಿ ಮುನ್ನಡೆ ಪಡೆದಿತ್ತು. ಕ್ಷಣಾರ್ಧದಲ್ಲೇ ಚೇಂದAಡ ಗೋಲು ಭಾರಿಸಿ ಸಮ ಬಲ ಸಾಧಿಸಿತು.
(ಮೊದಲ ಪುಟದಿಂದ) ನಂತರ ಕುಪ್ಪಂಡ ಮತ್ತೊಂದು ಗೋಲು ಗಳಿಸಿದರೆ, ಚೇಂದAಡ ಕೂಡ ಗೋಲು ಹೊಡೆದು ಮತ್ತೆ ಪಂದ್ಯವನ್ನು ಸಮಮಾಡಿತು. ಪ್ರಾರಂಭದಲ್ಲಿ ಉತ್ತಮ ಪ್ರದರ್ಶನ ತೋರಿದ ಕುಪ್ಪಂಡ ತಂಡ, ನಂತರ ಹಿನ್ನಡೆ ಅನುಭವಿಸಿತು. ನಂತರ ಗೋಲಿನ ಮೇಲೆ ಗೋಲು ಬಾರಿಸಿ ಉತ್ತಮ ಆಟ ಪ್ರದರ್ಶಿಸಿದ ಚೇಂದAಡ, ಕುಪ್ಪಂಡಕ್ಕೆ ಗೋಲುಗಳಿಸಲು ಅವಕಾಶವೇ ನೀಡಲಿಲ್ಲ. ಚೇಂದAಡ ಉತ್ತಪ್ಪ ಭರ್ಜರಿ ೪ ಗೋಲು ಗಳಿಸಿ ಮಿಂಚಿದರೆ, ತಿಮ್ಮಯ್ಯ ೨, ಕುಶಾಲಪ್ಪ, ಬೋಪಣ್ಣ ತಲಾ ೧ ಗೋಲುಗಳಿಸಿ ಗೆಲುವಿನ ಹಂತವನ್ನು ಹೆಚ್ಚಿಸಿದರು. ಕುಪ್ಪಂಡ ಸೋಮಯ್ಯ ೨ ಗೋಲು ಗಳಿಸಿದರು. ಹಾಕಿ ವಿವರಣೆಗಾರರಾಗಿ ಚಪ್ಪುಡೀರ ಕಾರ್ಯಪ್ಪ, ಮಾಳೇಟಿರ ಶ್ರೀನಿವಾಸ್ ಹಾಗೂ ಕುಲ್ಲೆಟಿರ ಅರುಣ್ ಬೇಬಾ ಕಾರ್ಯ ನಿರ್ವಹಿಸಿದರು.