ಮಡಿಕೇರಿ, ನ. ೬: ಉತ್ಥಾನ ದ್ವಾದಶಿ ಹಬ್ಬದ ಪ್ರಯುಕ್ತ ಶನಿವಾರ ಸಂಜೆ ಮಡಿಕೇರಿ ಓಂಕಾರೇಶ್ವರ ದೇವಾಲಯ ಆವರಣದಲ್ಲಿ ವಿಶೇಷವಾಗಿ ತುಳಸಿ ಪೂಜೆಯನ್ನು ನಡೆಸಲಾಯಿತು. ಶ್ರುತಿಲಯ ಭಜನಾ ತಂಡದಿAದ ಭಕ್ತಿ ಗಾಯನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭ ದಿನದ ಮಹತ್ವದ ಕುರಿತು ‘ಶಕ್ತಿ’ ಪ್ರಧಾನ ಸಂಪಾದಕರಾದ ಜಿ. ರಾಜೇಂದ್ರ ಮಾತನಾಡಿದರು.

ಕಾರ್ಯಕ್ರಮಕ್ಕೆ ಮುಜರಾಯಿ ಸಮಿತಿಯೊಂದಿಗೆ ಸಹಯೋಗ ನೀಡಿದ ಕೊಡಗು ವಲಯ ಹವ್ಯಕ ವಿಭಾಗದ ಪದಾಧಿಕಾರಿ ಡಾ. ರಾಜಾರಾಮ್ ಅವರು, ಭಕ್ತಾದಿಗಳನ್ನು ಸ್ವಾಗತಿಸಿದರು. ಈ ಸಂದರ್ಭ ಓಂಕಾರೇಶ್ವರ ದೇಗುಲ ಸಮಿತಿಯ ಮಾಜಿ ಅಧ್ಯಕ್ಷ ರಮೇಶ್ ಹೊಳ್ಳ, ನಿವೃತ್ತ ವ್ಯವಸ್ಥಾಪಕ ಸಂಪತ್ ಕುಮಾರ್, ಮಾಜಿ ಸದಸ್ಯರುಗಳಾದ ಪ್ರಕಾಶ್ ಆಚಾರ್ಯ, ಉದಯ ಕುಮಾರ್ ಮೊದಲಾದವರಿದ್ದರು. ಅರ್ಚಕರಾದ ಮಂಜುನಾಥ್ ಭಟ್ ಅವರಿಂದ ಪೂಜೆ ನೆರವೇರಿತು.