ವೀರಾಜಪೇಟೆ, ನ. ೬: ಇತಿಹಾಸ ಪ್ರಸಿದ್ಧ ಬೊಟ್ಟಿಯತ್ ಮೂಂದ್ ನಾಡ್ ಕೈಮುಡಿಕೆ ಪುತ್ತರಿ ಕೋಲ್ ಮಂದ್ ನಮ್ಮೆ ಅನ್ನು ಈ ಬಾರಿ ವಿಜೃಂಭಣೆಯಿAದ ಆಚರಿಸಲು ಶುಕ್ರವಾರ ನಡೆದ ಪೂರ್ವಭಾವಿ ಸಭೆಯಲ್ಲಿ ತಿರ್ಮಾನಿಸಲಾಯಿತು.
ಮೂರು ನಾಡಿನ ತಕ್ಕರಾದ ಅಡ್ಡಂಡ ಪ್ರಕಾಶ್ ಕುಶಾಲಪ್ಪ ಅಧ್ಯಕ್ಷತೆಯಲ್ಲಿ ಕುಂದಾ ಸಮೀಪದ ಕೈಮುಡಿಕೆ ಕೋಲ್ ಮಂದ್‌ನಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಕಳೆದೆರಡು ವರ್ಷ ಕೊರೊನಾ ಮಹಾ ಮಾರಿಯಿಂದ ಹಬ್ಬವನ್ನು ಸರಳವಾಗಿ ಆಚರಿಸಲಾಯಿತು. ಈ ಬಾರಿ ಪುತ್ತರಿ ಕೋಲ್ ಮಂದನ್ನು ವಿಜೃಂಭಣೆಯಿAದ ಜಿಲ್ಲಾ ಮಟ್ಟದಲ್ಲಿ ಪೈಪೋಟಿಯನ್ನು ಆಯೋಜಿಸಲು ತೀರ್ಮಾನ ಕೈಗೊಳ್ಳಲಾಯಿತು. ವಿವಿಧ ಕಾರ್ಯಕ್ರಮಗಳೊಂದಿಗೆ ಮೂರು ವಿಭಾಗದಲ್ಲಿ ಪೈಪೋಟಿಯನ್ನು ನಡೆಸಲು ಸಭೆ ತಿರ್ಮಾನಿಸಿತು.
ಶಾಲಾ ಕಾಲೇಜು ವಿದ್ಯಾರ್ಥಿಗಳಿಗಾಗಿ ಹತ್ತನೇ ತರಗತಿಯ ಒಳಗೆ ಒಂದು ವಿಭಾಗ, ಪಿ.ಯು.ಸಿಯಿಂದ ಪದವಿ ಕಾಲೇಜು ವಿದ್ಯಾರ್ಥಿಗಳು ಸೇರಿ ಮತ್ತೊಂದು ವಿಭಾಗ ಹಾಗೂ ಸಾರ್ವಜನಿಕರಿಗೆ ಬೇರೆಯದೇಯಾದ ವಿಭಾಗವಾಗಿ ವಿಂಗಡಿಸಿ ವಿವಿಧ ಪೈಪೋಟಿ ನಡೆಸಲು ತಿರ್ಮಾನಿಸಲಾಯಿತು.
ಪುತ್ತರಿ ಕೋಲಾಟ್, ಉಮ್ಮತಾಟ್, ಬೊಳ್‌ಕಾಟ್, ಪರೆಯಕಳಿ, ಕಪ್ಪೆಯಾಟ್, ಕೊಡವ ಪಾಟ್ ಪೈಪೋಟಿ ಸೇರಿದಂತೆ ವಾಲಗತಾಟ್, ಯರವಾಟ್ ಪೈಪೋಟಿ ಜೊತೆಗೆ ಅಳಿವಿನಂಚಿನಲ್ಲಿರುವ ಯರವ ಜನಾಂಗದ ಚೀನಿ ದುಡಿಯನ್ನು ನುಡಿಸುವ ವಿಶೇಷ ಪೈಪೋಟಿ ವಿಭಾಗಕ್ಕೂ ಬಹುಮಾನ ನೀಡುವ ಮೂಲಕ ಉತ್ತೇಜನ ನೀಡಲು ತಿರ್ಮಾನಿಸಲಾಯಿತು.
ಸಭೆಯ ಮೊದಲಿಗೆ ಬೊಟ್ಟಿಯತ್ ನಾಡಿನ ದೇವಮಕ್ಕಡ ಬಾಣೆ ಕೋಲ್ ಮಂದ್‌ನಲ್ಲಿ ನೀರಿನ ಟ್ಯಾಂಕ್ ನಿರ್ಮಾಣ ಮಾಡಲು ಮುಂದಾದ ಗ್ರಾಮ ಪಂಚಾಯತ್ ಕ್ರಮವನ್ನು ಖಂಡಿಸಲಾಯಿತು. ಅನಿವಾರ್ಯ ಎಂದಾದರೆ ಮೂರು ನಾಡಿನವರು ದೇವಮಕ್ಕಡ ಬಾಣೆ ಕೋಲ್ ಮಂದ್‌ನಲ್ಲಿ ಸಭೆ ಸೇರಲು ತೀರ್ಮಾನಿಸಲಾಯಿತು. ಪ್ರತಿವರ್ಷ ಹುತ್ತರಿ ಕಳೆದು ಎರಡು ದಿನದೊಳಗೆ ಕೈಮುಡಿಕೆ ಕೋಲ್ ಮಂದ್ ನಡೆಸುವ ಹಾಗೆ ಹಬ್ಬವನ್ನು ಆಚರಿಸುವಂತೆ ಅಂದು ಬೆಳಿಗ್ಗೆ ೧೦.೩೦ರಿಂದ ಸಂಜೆಯವರೆಗೆ ವಿವಿಧ ಪೈಪೋಟಿಗಳನ್ನು ಆಯೋಜಿಸಲು ಹಾಗೂ ಸಾರ್ವಜನಿಕರಿಗೆ ಊಟದ ವ್ಯವಸ್ಥೆಯನ್ನು ಏರ್ಪಾಡು ಮಾಡಲು ಸಭೆಯಲ್ಲಿ ತಿರ್ಮಾನಿಸಲಾಯಿತು.
ಕುತ್ತ್ನಾಡ್ ತಕ್ಕ ಪಂದಿಮಾಡ ರಮೇಶ್ ಅಚ್ಚಪ್ಪ, ಬೇರಳಿ ನಾಡ್ ತಕ್ಕರಾದ ಮಳವಂಡ ಬೋಸು ದೇವಯ್ಯ ಸೇರಿದಂತೆ ಮೂರು ನಾಡಿನ ಗೌರವ ಕಾರ್ಯದರ್ಶಿ ಮೂಕಚಂಡ ಅರುಣ್ ಅಪ್ಪಣ್ಣ, ಊರು ತಕ್ಕರು ಹಾಗೂ ನಾಡಿನವರಾದ ಚಮ್ಮಟೀರ ಸುಗುಣ ಮುತ್ತಣ್ಣ, ಅಚ್ಚಿಯಂಡ ಬೋಸು, ತೀತಮಾಡ ಉತ್ತಪ್ಪ, ತೀತಮಾಡ ವಾಸು ಗಣಪತಿ, ಚಮ್ಮಟೀರ ಪ್ರವೀಣ್ ಉತ್ತಪ್ಪ, ಮೇಚಂಡ ಹ್ಯಾರಿ ಅಚ್ಚಪ್ಪ, ತೀತಿಮಾಡ ಗಾಂದಿ, ಬಲ್ಲಣಮಾಡ ಲಿತಿನ್, ಚೇರಂಡ ಮೋಟಯ್ಯ, ಬಲ್ಲಣಮಾಡ ರಾಜ್ ತಿಮ್ಮಯ್ಯ, ನಾಮೇರ ಬೋಸು, ಕಡೇಮಾಡ ಶರತ್, ಚೊಟ್ಟೆಪಂಡ ಶರತ್ ಕಡೇಮಾಡ ರಿಜು, ಬಾನಂಡ ಸಿರಿ, ಎ.ಜಿ ವಿವೇಕ್ ಸೇರಿದಂತೆ ಇತರರು ಉಪಸ್ಥಿತರಿದ್ದರು.