ಮಡಿಕೇರಿ, ನ. ೬: ೨೦೧೫ ರಲ್ಲಿ ಟಿಪ್ಪು ಜಯಂತಿ ಸಂದರ್ಭ ಸೃಷ್ಟಿ ಯಾದ ಗಲಭೆ ದಿನದಂದು ಸಾವನ್ನಪ್ಪಿದ ದೇವಪಂಡ ಕುಟ್ಟಪ್ಪ ಅವರ ಸ್ಮರಣೆ ಹಾಗೂ ಬಲಿದಾನ್ ದಿವಸ್ ತಾ. ೧೦ ರಂದು ಹಿಂದೂ ಜಾಗರಣಾ ವೇದಿಕೆ ವತಿಯಿಂದ ನಡೆಯಲಿದೆ. ಅಂದು ಬೆಳಿಗ್ಗೆ ೯ ಗಂಟೆಗೆ ಮಡಿಕೇರಿಯ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ೧೦ ಗಂಟೆಗೆ ಸ್ಮರಣೆ ಕಾರ್ಯಕ್ರಮ ನಡೆಯಲಿದೆ.