ಮಡಿಕೇರಿ, ನ. ೬: ಕನ್ನಡವನ್ನು ನಿರ್ಲಕ್ಷö್ಯ ಮಾಡುವ ಪ್ರವೃತ್ತಿ ಬೆಳೆಯುತ್ತಿರುವ ಈ ದಿನಮಾನಗಳಲ್ಲಿ, ಮಕ್ಕಳಲ್ಲಿ ಈ ನೆಲದ ಭಾಷೆಯ ಬಗ್ಗೆ ಅಭಿಮಾನ ಮೂಡಿಸಿ ‘ಓದುವ ಸಂಸ್ಕೃತಿಯನ್ನು' ಬೆಳೆಸುವ ಪ್ರಯತ್ನಗಳು ಹೆಚ್ಚಿನ ಮಟ್ಟದಲ್ಲಿ ನಡೆಯಬೇಕು. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಯೋಗ್ಯವಾದ ಪುಸ್ತಕ ಮಳಿಗೆಯ ಅಗತ್ಯತೆ ಇದೆ ಎಂದು ರೋಟರಿ ಜಿಲ್ಲೆಯ ಪಬ್ಲಿಕ್ ಇಮೇಜ್ ಸಮಿತಿಯ ಮಡಿಕೇರಿ, ನ. ೬: ಕನ್ನಡವನ್ನು ನಿರ್ಲಕ್ಷö್ಯ ಮಾಡುವ ಪ್ರವೃತ್ತಿ ಬೆಳೆಯುತ್ತಿರುವ ಈ ದಿನಮಾನಗಳಲ್ಲಿ, ಮಕ್ಕಳಲ್ಲಿ ಈ ನೆಲದ ಭಾಷೆಯ ಬಗ್ಗೆ ಅಭಿಮಾನ ಮೂಡಿಸಿ ‘ಓದುವ ಸಂಸ್ಕೃತಿಯನ್ನು' ಬೆಳೆಸುವ ಪ್ರಯತ್ನಗಳು ಹೆಚ್ಚಿನ ಮಟ್ಟದಲ್ಲಿ ನಡೆಯಬೇಕು. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಯೋಗ್ಯವಾದ ಪುಸ್ತಕ ಮಳಿಗೆಯ ಅಗತ್ಯತೆ ಇದೆ ಎಂದು ರೋಟರಿ ಜಿಲ್ಲೆಯ ಪಬ್ಲಿಕ್ ಇಮೇಜ್ ಸಮಿತಿಯ ಉದ್ಘಾಟಿಸಿ ಅವರು ಮಾತನಾಡಿದರು.
ಪುಸ್ತಕಗಳನ್ನು ಓದುವ ಅಭಿರುಚಿ ಕಡಿಮೆಯಾಗುತ್ತಿದ್ದು, ಈ ಹಿಂದೆ ಒಂದು ಮನೆಯಲ್ಲಿ ಎಷ್ಟು ಕನ್ನಡ ಪುಸ್ತಕಗಳ ಸಂಗ್ರಹವಿದೆ ಎನ್ನುವ ಕುತೂಹಲವಿತ್ತು. ಪ್ರಸ್ತುತ ಪುಸ್ತಕಗಳ ಬದಲಿಗೆ ಮೊಬೈಲ್ ಗೀಳು ಮನೆ ಮಂದಿಯಲ್ಲಿ ಹೆಚ್ಚುತ್ತಿದ್ದು, ಪೋಷಕರು ಮಕ್ಕಳಲ್ಲಿ ಓದುವ ಆಸಕ್ತಿಯನ್ನು ಬಿತ್ತುವ ಅಗತ್ಯವಿದೆಯೆಂದು ನುಡಿದರು.
ಜಿಲ್ಲೆಯಲ್ಲಿ ಉತ್ತಮವಾದ ಪುಸ್ತಕ ಮಳಿಗೆ ಸ್ಥಾಪನೆ ಮೂಲಕ ಪುಸ್ತಕ ಓದುವ ಹವ್ಯಾಸವನ್ನು ಬೆಳೆಸಿದರೆ ಅದು ನಾಡಿನ ನುಡಿ, ಸಂಸ್ಕೃತಿಯ ಬೆಳವಣಿಗೆಗೂ ಮಹತ್ವದ ಕೊಡುಗೆ ನೀಡಲಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲೆಯ ವಿವಿಧ ಸಂಘಟನೆಗಳು ಗಂಭೀರ ಚಿಂತನೆ ಹರಿಸುವಂತೆಯೂ ಅನಿಲ್ ಸಲಹೆಯಿತ್ತರು.
(ಮೊದಲ ಪುಟದಿಂದ)
ಮಡಿಕೇರಿ ನಗರಸಭಾ ಉಪಾಧ್ಯಕ್ಷೆ ಸವಿತಾ ರಾಕೇಶ್ ಮಾತನಾಡಿ, ಸಮರ್ಥ ಕನ್ನಡಿಗ ಸಂಸ್ಥೆ ಇದೀಗ ಕನ್ನಡ ಪರವಾದ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಪ್ರತಿಭಾ ಪ್ರದರ್ಶನಕ್ಕೆ ಅನುವು ಮಾಡಿಕೊಡುತ್ತಿರುವುದು ಶ್ಲಾಘನೀಯ. ಕನ್ನಡ ನೆಲ, ಭಾಷೆ, ಸಂಸ್ಕೃತಿಯನ್ನು ಪ್ರತಿಯೊಬ್ಬರು ಪ್ರೀತಿಸಬೇಕೆಂದು ಕರೆ ನೀಡಿದ ಅವರು, ಅತ್ಯಂತ ಸುಂದರವಾದ, ಸಾಂಸ್ಕೃತಿಕ , ಸಾಹಿತ್ಯಿಕ ಶ್ರೀಮಂತಿಕೆ ಹೊಂದಿರುವ ಕನ್ನಡದ ಬೆಳವಣಿಗೆಗೆ ಶ್ರಮಿಸೋಣವೆಂದೂ ಹೇಳಿದರು.
ಸಮರ್ಥ ಕನ್ನಡಿಗ ಸಂಘಟನೆಯ ಸ್ಥಾಪಕ ಅಧ್ಯಕ್ಷ ಡಾ. ಲಿಂಗೇಶ್ ಹುಣಸೂರು ಮಾತನಾಡಿ, ‘ಮಾತು ಕೆಲಸವಾಗಬಾರದು-ಕೆಲಸ ಮಾತನಾಡಬೇಕು' ಎನ್ನುವ ನಾಣ್ನುಡಿಯಂತೆ ಕನ್ನಡ ಪರವಾದ ಕೆಲಸಗಳು ಇಂದು ಸಮಾಜದಲ್ಲಿ ಮಾತನಾಡಬೇಕಾಗಿದೆ. ಪ್ರಸ್ತುತ ವಿವಿಧ ಕನ್ನಡಪರ ಸಂಘಟನೆಗಳಿAದ ಕಾರ್ಯಕ್ರಮಗಳು ನಡೆಯುತ್ತಿವೆಯಾದರು, ಅದು ರಾಜಕೀಯ ಪಕ್ಷಗಳ ಪ್ರಮುಖರನ್ನು ಮೆರೆಸುವ ಕಾರ್ಯಕ್ರಮಗಳಾಗಿವೆ. ಈ ಎಲ್ಲಾ ಕಾರಣಗಳ ಹಿನ್ನೆಲೆ, ಯಾರಿಂದಲೂ ಹಣದ ನೆರವನ್ನು ಕೋರದೆ ಸಮರ್ಥ ಕನ್ನಡಿಗ ಸಂಸ್ಥೆ ವಿಭಿನ್ನ ನೆಲೆಗಟ್ಟಿನಲ್ಲಿ ಕಾರ್ಯರ್ವಹಿಸುತ್ತಿದೆ ಎಂದು ಹೇಳಿದರು.
ಮಡಿಕೇರಿ ತಾಲೂಕು ಕಸಾಪ ಅಧ್ಯಕ್ಷ, ಲಯನ್ಸ್ ಟ್ರಸ್ಟ್ ಅಧ್ಯಕ್ಷ ಅಂಬೆಕಲ್ ನವೀನ್ ಕುಶಾಲಪ್ಪ, ಮಾತನಾಡಿ, ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸಕ್ರಿಯವಾಗಿ ಕನ್ನಡ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದೆ. ಸದಸ್ಯತ್ವ ಅಭಿಯಾನವೂ ವೇಗ ಪಡೆದಿದೆ ಎಂದರಲ್ಲದೇ, ಮುಂದಿನ ದಿನಗಳಲ್ಲಿ ವಿಭಿನ್ನ ಕಾರ್ಯಯೋಜನೆಗಳನ್ನು ರೂಪಿಸುವುದಾಗಿ ಹೇಳಿದರು.
ಸಮರ್ಥ ಕನ್ನಡಿಗರು ಸಂಸ್ಥೆಯ ಜಿಲ್ಲಾ ಸಂಚಾಲಕಿ ಕೆ.ಜಯಲಕ್ಷಿö್ಮ ಮಾತನಾಡಿ, ಜಿಲ್ಲೆಯ ಪ್ರತಿಭೆಗಳಿಗೆ ವೇದಿಕೆ ನೀಡುವ ನಿಟ್ಟಿನಲ್ಲಿ ಪ್ರತೀ ವರ್ಷ ಸಮರ್ಥ ಕನ್ನಡಿಗ ಸಂಸ್ಥೆಯ ವತಿಯಿಂದ ನಿಮ್ಮ ಪ್ರತಿಭೆ - ನಮ್ಮ ವೇದಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಸಂಸ್ಥೆಯ ಸದಸ್ಯೆಯರೇ ಆರ್ಥಿಕ ಸಂಪನ್ಮೂಲ ಕ್ರೋಡೀಕರಿಸಿ ಕಾರ್ಯಕ್ರಮ ಆಯೋಜಿಸುತ್ತಿದ್ದು, ಈ ವರ್ಷವೂ ಅತ್ಯಧಿಕ ಸಂಖ್ಯೆಯಲ್ಲಿ ಕಲಾವಿದರು, ಕಲಾತಂಡಗಳು ಪಾಲ್ಗೊಂಡಿವೆ ಎಂದರು.
ಸಮರ್ಥ ಕನ್ನಡಿಗ ಸಂಸ್ಥೆಯ ಪ್ರಧಾನ ಸಂಚಾಲಕ ಆನಂದ ದೆಗ್ಗನಹಳ್ಳಿ, ಹಿಮವನ ಪಬ್ಲಿಕೇಷನ್ ಪ್ರಕಾಶಕರಾದ ಲಕ್ಷಿö್ಮ ಕೆ. ಲಿಂಗೇಶ್, ಮುಂಬೈನ ಚಂದ್ರಶೇಖರ್ ರಾವ್ ಮೆಮೋರಿಯಲ್ ಟ್ರಸ್ಟ್ ಅಧ್ಯಕ್ಷೆ ಜಯಂತಿ ಸಿ.ರಾವ್ ಹಲವು ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.
ಜಿಲ್ಲೆಯ ವಿವಿಧೆಡೆಗಳಿಂದ ಬಂದಿದ್ದ ಪುಟಾಣಿಗಳು, ಯುವಕ, ಯುವತಿಯರು, ಮಹಿಳೆಯರು ಛದ್ಮವೇಷ , ಸಮೂಹಗಾಯನ, ನೃತ್ಯ , ಚಿತ್ರಕಲೆ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ಗಾಯತ್ರಿ ಚೆರಿಯಮನೆ ನಿರೂಪಿಸಿ, ಶೀರಕ್ಷಾ ಪ್ರಭಾಕರ್ ಪ್ರಾರ್ಥಿಸಿದ ಕಾರ್ಯಕ್ರಮದಲ್ಲಿ ಪ್ರತಿಮಾಹರೀಶ್ ರೈ ಸ್ವಾಗತಿಸಿ, ಶಾಂತ ಹೆಗಡೆ ವಂದಿಸಿದರು.