ಮಡಿಕೇರಿ, ನ. ೬: ಎಂ. ಬಾಡಗ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಕ್ಲಬ್ ವತಿಯಿಂದ ತಾ. ೧೭ ರಿಂದ ಮೂರ್ನಾಡಿನಲ್ಲಿ ಜಿಲ್ಲಾಮಟ್ಟದ ಗ್ರಾಮಾಂತರ ಹಿಂದೂ ಹಾಕಿ ಪಂದ್ಯಾವಳಿ ನಡೆಯಲಿದೆ. ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ಪಂದ್ಯಾವಳಿ ನಡೆಯಲಿದೆ. ಪಂದ್ಯಾಟದಲ್ಲಿ ಪ್ರಥಮ ಸ್ಥಾನಗಳಿಸಿದ ತಂಡಕ್ಕೆ ರೂ. ೭೫ ಸಾವಿರ, ದ್ವಿತೀಯ ಬಹುಮಾನ ರೂ. ೫೦ ಸಾವಿರ, ತೃತೀಯ ಹಾಗೂ ನಾಲ್ಕನೇ ಬಹುಮಾನ ಗಳಿಸುವ ತಂಡಕ್ಕೆ ತಲಾ ೨೦ ಸಾವಿರ ಬಹುಮಾನ ಇರಲಿದೆ. ರೂ. ೫ ಸಾವಿರ ಪ್ರವೇಶ ಶುಲ್ಕ ಪಾವತಿಸಿ ತಂಡವನ್ನು ನೋಂದಾಯಿ ಸಿಕೊಳ್ಳುವಂತೆ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗೆ ೯೬೧೧೫೫೪೦೪೧, ೯೧೪೮೮೧೧೬೫೯ ಸಂಖ್ಯೆಯನ್ನು ಸಂಪರ್ಕಿಸಲು ಕೋರಿದೆ. ಗ್ರಾಮಗ್ರಾಮಗಳ ನಡುವೆ ಈ ಪಂದ್ಯಾವಳಿ ನಡೆಯಲಿದ್ದು, ನೋಂದಾಯಿಸಿ ಕೊಳ್ಳದ ತಂಡಗಳು ಪ್ರವೇಶಶುಲ್ಕ ಪಾವತಿಸಿ ನೋಂದಾಯಿಸಿಕೊಳ್ಳುವAತೆ ಮನವಿ ಮಾಡಿದೆ.