ಗೋಣಿಕೊಪ್ಪ, ಅ. ೬: ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ಜನಕ ಪಾಂಡAಡ ದಿ. ಕುಟ್ಟಪ್ಪ ಹೆಸರನ್ನು ಪೊನ್ನಂಪೇಟೆ ಟರ್ಫ್ ಮೈದಾನಕ್ಕೆ ನಾಮಕರಣ ಮಾಡುವ ನಿಟ್ಟಿನಲ್ಲಿ ಸರಕಾರದ ಗಮನ ಸೆಳೆಯಲಾಗುವುದು ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಭರವಸೆ ನೀಡಿದರು.

ಈ ಬಗ್ಗೆ ಹಾಕಿ ಅಕಾಡೆಮಿಯ ನಿರ್ದೇಶಕ ಚೆಯ್ಯಂಡ ಸತ್ಯ ಮನವಿ ಸಲ್ಲಿಸಿದ ಹಿನ್ನೆಲೆ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭಾರತ ದೇಶಕ್ಕೆ ಹಲವಾರು ಕ್ರೀಡಾಪಟು ಗಳನ್ನು ನೀಡುವಲ್ಲಿ ಕೌಟುಂಬಿಕ ಹಾಕಿ ಸಹಾಯಕವಾಗಿವೆ. ಹಾಕಿ ಅಕಾಡೆಮಿ ತಮ್ಮ ಮನವಿಯಂತೆ ಪೊನ್ನಂಪೇಟೆ ಟರ್ಫ್ ಮೈದಾನಕ್ಕೆ ದಿ.ಪಾಂಡAಡ ಕುಟ್ಟಪ್ಪ ನವರ ಹೆಸರನ್ನು ನಾಮಕರಣ ಮಾಡಲು ರಾಜ್ಯದ ಮುಖ್ಯಮಂತ್ರಿ ಹಾಗೂ ಕ್ರೀಡಾ ಸಚಿವರ ಗಮನಕ್ಕೆ ತರುವ ಮೂಲಕ ಆದಷ್ಟು ಬೇಗನೆ ಇವರ ಹೆಸರು ನಾಮಕರಣ ಮಾಡಲು ಕ್ರಮ ವಹಿಸುವುದಾಗಿ ಹೇಳಿದರು.

ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಗೆ ದಿ.ಕುಟ್ಟಪ್ಪ ನವರ ಕೊಡುಗೆ ಅಪಾರವಾಗಿದೆ. ಆರಂಭದಲ್ಲಿ ತಮ್ಮ ಕೈಯಿಂದ ಹಣವನ್ನು ಭರಿಸುವ ಮೂಲಕ ಪಂದ್ಯಾವಳಿ ಆರಂಭಿಸಿದರು. ನಂತರದ ವರ್ಷಗಳಲ್ಲಿ ಸರ್ಕಾರ ಅನುದಾನ

(ಮೊದಲ ಪುಟದಿಂದ) ನೀಡಲು ಆರಂಭಿಸಿತು. ಇದೀಗ ಹಾಕಿ ಕ್ರೀಡೆ ಹೆಮ್ಮರವಾಗಿ ಬೆಳೆದು ನಿಂತಿದೆ ಎಂದು ಸ್ಮರಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಹಾಕಿ ಅಕಾಡೆಮಿಯ ಅಧ್ಯಕ್ಷ ಪಾಂಡAಡ ಕೆ. ಬೋಪಣ್ಣ ಮಾತನಾಡಿ, ಹಾಕಿ ಕ್ರೀಡೆಗೆ ಅಕಾಡೆಮಿ ಸಂಪೂರ್ಣ ಸಹಕಾರ ನೀಡಲಿದೆ. ಹೊಸ ಪ್ರತಿಭೆಗೆ ಅವಕಾಶ ಸಿಗಬೇಕು ಎಂದರು.

ವಿಧಾನ ಪರಿಷತ್ ಸದಸ್ಯ ಮಂಡೆಪAಡ ಸುಜಾ ಕುಶಾಲಪ್ಪ ಮಾತನಾಡಿ, ಹಾಕಿ ಕ್ರೀಡೆಗೆ ಪಾಂಡAಡ ಕುಟ್ಟಪ್ಪ ನವರ ಸೇವೆ ಅಪಾರವಾಗಿದೆ, ಜನಾಂಗವನ್ನು ಒಂದೆಡೆಗೆ ಸೇರಿಸುವ ಪ್ರಯತ್ನದಲ್ಲಿ ಅವರು ಯಶಸ್ವಿಯಾಗಿದ್ದಾರೆ. ಇದನ್ನು ನಾವು ಮುಂದುವರಿಸಿಕೊAಡು ಸಾಗಬೇಕು ಎಂದು ಕರೆ ನೀಡಿದರು.

ಅತಿಥಿಗಳಾಗಿ ಪಾಂಡAಡ ಲೀಲಾ ಕುಟ್ಟಪ್ಪ, ಅಂತರರಾಷ್ಟಿçÃÃಯ ಹಾಕಿ ತೀರ್ಪುಗಾರ ಬಿ.ಪಳಂಗಪ್ಪ, ಕಾಫಿ ಬೆಳೆಗಾರ, ಟ್ರೋಫಿ ದಾನಿ ಬಯವಂಡ ಮಹಾಬಲ, ಹಾಕಿ ಕೂರ್ಗ್ ಉಪಾಧ್ಯಕ್ಷ ಬಲ್ಯಾಟಂಡ ಪಾರ್ಥ ಚಂಗಪ್ಪ, ಪುಚ್ಚಿಮಾಡ ಹರೀಶ್ ದೇವಯ್ಯ, ಪೊನ್ನಂಪೇಟೆ ಕೊಡವ ಸಮಾಜದ ಕಾಳಿಮಾಡ ಮೋಟಯ್ಯ, ತೀತಿರ ಅಪ್ಪಚ್ಚು ಸೇರಿದಂತೆ, ಕೊಡವ ಹಾಕಿ ಅಕಾಡೆಮಿಯ ಉಪಾಧ್ಯಕ್ಷರುಗಳಾದ ಕುಕ್ಕೆರ ಜಯ ಚಿಣ್ಣಪ್ಪ, ಮಾದಂಡ ಎಸ್.ಪೂವಯ್ಯ, ಬಡಕಡ ದೀನಾ ಪೂವಯ್ಯ, ಕಾರ್ಯಾಧ್ಯಕ್ಷರಾದ ಮೇಕೇರಿರ ರವಿ ಪೆಮ್ಮಯ್ಯ, ಗೌರವ ಕಾರ್ಯದರ್ಶಿ ಮಾಲೆಟಿರ ಶ್ರೀನಿವಾಸ್, ಜಂಟಿ ಕಾರ್ಯದರ್ಶಿ ಮುಕ್ಕಾಟಿರ ಭೀಮಯ್ಯ, ನಿರ್ದೇಶಕರುಗಳಾದ ಕಂಬೀರAಡ ರಾಕಿ ಪೂವಣ್ಣ, ಚೇನಂಡ ಸುರೇಶ್ ನಾಣಯ್ಯ ಚೆಯ್ಯಂಡ ಸತ್ಯ, ಕಾಳಿಯಂಡ ಸಂಪನ್ ಅಯ್ಯಪ್ಪ, ಕುಲ್ಲೇಟಿರ ಅರುಣ ಬೇಬ, ಕುಯಮಂಡ ಕಿರಣ್ ಕುಮಾರ್ ಮರ್ಚಂಡ ಗಣೇಶ್ ಪೊನ್ನಪ್ಪ, ನೆರ್ಪಂಡ ಹರ್ಷ ಮಂದಣ್ಣ ಸೇರಿದಂತೆ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.

ವೀರಾಜಪೇಟೆ ಕಾವೇರಿ ಕಾಲೇಜಿನ ವಿದ್ಯಾರ್ಥಿಗಳು ನ್ರೃತ್ಯ ಪ್ರದರ್ಶನ ನೀಡಿದರು. ಸಂಜೆ ಪಂಚಮ್ ಬೋಪಣ್ಣ ತಂಡದಿAದ ಕೊಡವ ನೈಟ್ಸ್ ಕಾರ್ಯಕ್ರಮ ನಡೆಯಿತು.