ಮಡಿಕೇರಿ, ನ. ೩: ಮರಗೋಡು ಸ್ಪೋರ್ಟ್ಸ್ ಅಂಡ್ ರಿಕ್ರಿಯೇಶನ್ ಕ್ಲಬ್ ವತಿಯಿಂದ ಅಂತರ ಗ್ರಾಮ ಕ್ರೀಡಾಕೂಟ ಏರ್ಪಡಿಸಲಾಗಿದ್ದು, ತಾ.೫ ಹಾಗೂ ೬ರಂದು ಮರಗೋಡು-ಹೊಸ್ಕೇರಿ ಗ್ರಾಮದ ಭಾರತಿ ಪ.ಪೂ. ಕಾಲೇಜು ಆಟದ ಮೈದಾನದಲ್ಲಿ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಕ್ಲಬ್‌ನ ಅಧ್ಯಕ್ಷ ಕೋಚನ ಅನೂಪ್; ಮರಗೋಡು, ಹೊಸ್ಕೇರಿ, ಕಟ್ಟೆಮಾಡು, ಐಕೊಳ ಹಾಗೂ ಅರೆಕಾಡು ಗ್ರಾಮಸ್ಥರುಗಳಿಗೆ ಸೀಮಿತವಾಗಿ ಅಂತರ ಗ್ರಾಮ ಕ್ರೀಡಾಕೂಟ ಏರ್ಪಡಿಸಲಾಗಿದ್ದು, ಎಲ್ಲ ಸಮುದಾಯದ ಜನರನ್ನು ಒಗ್ಗೂಡಿಸುವ ಮತ್ತು ಹೊಸ ಕ್ರೀಡಾಪಟುಗಳನ್ನು ಗುರುತಿಸುವ ನಿಟ್ಟಿನಲ್ಲಿ ಆಯೋಜನೆ ಮಾಡಲಾಗಿದೆ. ೨೦೧೭ರಲ್ಲಿ ಆಯೋಜಿಸಿದ್ದ ಕ್ರೀಡಾ ಕೂಟದಲ್ಲಿ ಭಾಗವಹಿಸಿದ್ದ ಕ್ರೀಡಾ ಪಟುಗಳು ರಾಜ್ಯ ಹಾಗೂ ರಾಷ್ಟçಮಟ್ಟ ದಲ್ಲಿ ಪ್ರತಿನಿಧಿಸಿರುವದಾಗಿ ತಿಳಿಸಿದರು.
ಅಂಕಗಳ ಮೂಲಕ ಚಾಂಪಿಯನ್
ಆಯಾ ಗ್ರಾಮದ ಕ್ರೀಡಾ ಪಟುಗಳು ಅದೇ ಗ್ರಾಮದ ಪರವಾಗಿ ಭಾಗವಹಿಸಬೇಕು. ಭಾಗವಹಿಸುವ ಕ್ರೀಡಾಪಟುಗಳು ಕಡ್ಡಾಯವಾಗಿ ಆಧಾರ್ ಕಾರ್ಡ್ಗಳನ್ನು ಹಾಜರುಪಡಿಸಬೇಕಿದೆ. ಪ್ರತಿಯೊಂದು ಪಂದ್ಯ ಹಾಗೂ ಆಟೋಟಗಳಿಗೆ ಅಂಕಗಳನ್ನು ನೀಡಲಾಗುವದು. ಅತಿ ಹೆಚ್ಚು ಅಂಕ ಪಡೆದ ಗ್ರಾಮವನ್ನು ಚಾಂಪಿಯನ್ ಎಂದು ಪರಿಗಣಿಸಲಾಗುವದು.
೩ಐದನೇ ಪುಟಕ್ಕೆ
(ಮೊದಲ ಪುಟದಿಂದ) ಪ್ರಥಮ ಬಹುಮಾನವಾಗಿ ರೂ.೫೦ಸಾವಿರ ನಗದು ಹಾಗೂ ಟ್ರೋಫಿ, ಎರಡನೇ ಬಹುಮಾನ ರೂ.೪೦ ಸಾವಿರ ನಗದು ಹಾಗೂ ಟ್ರೋಫಿ, ಮೂರನೇ ಬಹುಮಾನವಾಗಿ ರೂ.೩೦ ಸಾವಿರ ಹಾಗೂ ಟ್ರೋಫಿ, ನಾಲ್ಕನೇ ಬಹುಮಾನ ರೂ.೨೦ ಸಾವಿರ, ಐದನೇ ಬಹುಮಾನವಾಗಿ ರೂ.೧೦ ಸಾವಿರ ಹಾಗೂ ಟ್ರೋಫಿ ನೀಡಲಾಗುವದು. ಇದರೊಮದಿಗೆ ಅತ್ಯುತ್ತಮ ಪುರುಷ ಹಾಗೂ ಮಹಿಳಾ ಆಟಗಾರ್ತಿ ಎಂಬ ವೈಯಕ್ತಿಕ ಪ್ರಶಸ್ತಿ ನೀಡಲಾಗುವದೆಂದು ಅನೂಪ್ ತಿಳಿಸಿದರು.
ಪಂದ್ಯಾಟಗಳು
ಪುರುಷರಿಗೆ ಫುಟ್‌ಬಾಲ್, ವಾಲಿಬಾಲ್, ಕಬಡ್ಡಿ ಹಾಗೂ ಹಗ್ಗ ಜಗಾಟ, ಮಹಿಳೆಯರಿಗೆ ಥ್ರೋಬಾಲ್, ಕಬಡ್ಡಿ, ಹಗ್ಗ ಜಗ್ಗಾಟ ಪಂದ್ಯಾವಳಿ ಏರ್ಪಡಿಸಲಾಗಿದ್ದು, ಪ್ರತಿ ಗ್ರಾಮದಿಂದ ಒಂದು ತಂಡಕ್ಕೆ ಮಾತ್ರ ಭಾಗವಹಿಸಲು ಅವಕಾಶವಿದೆ ಎಂದು ಹೇಳಿದರು.
ಇದರೊಂದಿಗೆ ಪುರುಷ ಹಾಗೂ ಮಹಿಳೆಯರಿಗೆ ೧೦೦, ೪೦೦, ೮೦೦, ೧೫೦೦ ಮೀ. ಓಟದ ಸ್ಪರ್ಧೆ, ೩೦-೪೦ ವರ್ಷದೊಳಗಿನ ಮಹಿಳೆಯರಿಗೆ ೧೦೦ಮೀ., ೪೦ ವರ್ಷ ಮೇಲ್ಪಟ್ಟ ಮಹಿಳೆಯರಿಗೆ ೧೦೦ಮೀ., ೪೦-೫೦ವರ್ಷ ಮೇಲ್ಪಟ್ಟ ಪುರುಷರಿಗೆ ೧೦೦ಮೀ., ೫೦ವರ್ಷ ಮೇಲ್ಪಟ್ಟ ಪುರುಷರಿಗೆ ೧೦೦ಮೀ. ಓಟದ ಸ್ಪರ್ಧೆ, ೪೦ ವರ್ಷ ಮೇಲ್ಪಟ್ಟ ಪುರುಷ ಹಾಗೂ ಮಹಿಳೆಯರಿಗೆ ೪x೧೦೦ಮೀ., ಪುರುಷ ಹಾಗೂ ಮಹಿಳೆಯರಿಗೆ ೪x೧೦೦ ಮೀ.ಓಟದ ಸ್ಪರ್ಧೆ, ಪುರುಷ ಹಾಗೂ ಮಹಿಳೆಯರಿಗೆ ಉದ್ದ ಜಿಗಿತ, ಭಾರದ ಗುಂಡು ಎಸೆತ ಸ್ಪರ್ಧೆ ಏರ್ಪಡಿಸಲಾಗಿದೆ. ಪ್ರತಿ ಆಟೋಟ ಸ್ಪರ್ಧೆಗೆ ಒಂದು ಗ್ರಾಮದಿಂದ ಮೂವರು ಸ್ಪರ್ಧಾಳುಗಳಿಗೆ ಮಾತ್ರ ಅವಕಾಶವಿರುವದಾಗಿ ಅನೂಪ್ ಮಾಹಿತಿ ನೀಡಿದರು.
ಮಕ್ಕಳ ವಿಭಾಗದಲ್ಲಿ ಚಿಕ್ಕ ಮಕ್ಕಳಿಗೆ ಕಾಳು ಹೆಕ್ಕುವದು, ೧ರಿಂದ ಎರಡನೇ ತರಗತಿ ಮಕ್ಕಳಿಗೆ ೫೦ಮೀ.ಓಟ, ೩ರಿಂದ ೪ನೇ ತರಗತಿ ಮಕ್ಕಳಿಗೆ, ೫ರಿಂದ ೭ನೇ ತರಗತಿ ಮಕ್ಕಳಿಗೆ ೮ರಿಂದ ೧೦ನೇ ತರಗತಿ ಮಕ್ಕಳಿಗೆ ೧೦೦ ಮೀ. ಓಟದ ಸ್ಪರ್ಧೆ ಏರ್ಪಡಿಸಿರುವದಾಗಿ ಅವರು ತಿಳಿಸಿದರು.
ಉಚಿತ ಆರೋಗ್ಯ ಶಿಬಿರ
ಕ್ರೀಡಾಕೂಟದಲ್ಲಿ ಉಚಿತ ಆರೋಗ್ಯ ಶಿಬಿರ ಕೂಡ ಏರ್ಪಡಿಸಲಾಗಿದೆ. ತಾ.೫ರಂದು ಸುಳ್ಯದ ಕುರುಂಜಿ ವೆಂಕಟರಮಣ ಗೌಡ ಮಹಾ ವಿದ್ಯಾಲಯದ ವತಿಯಿಂದ ಉಚಿತ ದಂತ ತಪಾಸಣಾ ಶಿಬಿರ ನಡೆಯಲಿದೆ. ತಾ.೬ರಂದು ಡಾ.ನೆರಿಯನ ನವೀನ್ ಹಾಗೂ ಡಾ. ರಾಜೇಶ್ವರಿ ಅವರುಗಳಿಂದ ಉಚಿತ ಆರೋಗ್ಯ ಶಿಬಿರ, ಡಾ. ಕೃಪಾಲಿನಿ ಅವರಿಂದ ಉಚಿತ ನೇತ್ರ ತಪಾಸಣಾ ಶಿಬಿರ ನಡೆಯಲಿದೆ ಎಂದು ಅನೂಪ್ ತಿಳಿಸಿದರು. ಅಲ್ಲದೆ, ಎರಡೂ ದಿನಗಳ ಕಾಲ ಭಾಗವಹಿಸುವ ಎಲ್ಲ ಕ್ರೀಡಾಪಟುಗಳಿಗೆ ಹಾಗೂ ಸಾರ್ವಜನಿಕರಿಗೆ ಭೋಜನದ ವ್ಯವಸ್ಥೆ ಮಾಡಿರುವದಾಗಿ ಹೇಳಿದರು.
ಸಮಾರಂಭ
ತಾ.೫ರAದು ಬೆಳಿಗ್ಗೆ ೮.೪೫ಗಂಟೆಗೆ ನಿವೃತ್ತ ಪ್ರಾಂಶುಪಾಲ ಕೋಚನ ಶ್ರೀನಿವಾಸ್ ಸಮಾರಂಭ ಉದ್ಘಾಟಿಸುವರು. ಕೋಚನ ಅನೂಪ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್, ಮರಗೋಡು ಗ್ರಾ.ಪಂ.ಅಧ್ಯಕ್ಷೆ ಅಯ್ಯಂಡ್ರ ಪೂರ್ಣಿಮಾ, ಸಮಾಜ ಸೇವಕ ಡಾ.ಮಂಥರ್ ಗೌಡ, ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ.ಕೆ.ವಿ.ರೇಣುಕಾಪ್ರಸಾದ್, ಉದ್ಯಮಿ ಬಿದ್ರುಪಣೆ ಗಣೇಶ್, ಜಿಲ್ಲಾ ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ಗಿರೀಶ್ ಮಲ್ಲಪ್ಪ, ನಿರ್ದೇಶಕ ಡಿ.ಕೆ.ಅರುಣ, ಉದ್ಯಮಿ ಹಸೈನಾರ್, ಕಾರ್ಪೋರೇಶನ್ ಬ್ಯಾಂಕ್ ನಿವೃತ್ತ ಎಜಿಎಂ ತೋಟಂಬೈಲ್ ಮನೋಹರ್, ಜೈವಿಕ ತಂತ್ರಜ್ಞಾನ ಸಂಶೋಧಕಿ ಡಾ. ಆಶಿಕಾ ಸತೀಶ್ ಸಿರಕಜೆ, ಸ್ಪಾಟಿಸ್ಟಿಕಲ್ ಪ್ರೋಗ್ರಾಮರ್ ಮಳ್ಳಂದಿರ ಪ್ರೇರಿತ ಉಪಸ್ಥಿತರಿರುವರು.
ಸಮಾರೋಪ
ಸಮಾರೋಪ ಸಮಾರಂಭ ತಾ.೬ರಂದು ಸಂಜೆ ೪ಗಂಟೆಗೆ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಶಾಸಕ ಕೊಂಬಾರನ ಜಿ.ಬೋಪಯ್ಯ, ಸಮಾಜ ಸೇವಕ ಡಾ.ಮಂಥರ್‌ಗೌಡ, ಉಚ್ಚ ನ್ಯಾಯಾಲಯದ ಹಿರಿಯ ವಕೀಲ ಎ.ಎಸ್. ಪೊನ್ನಣ್ಣ, ರಾಜ್ಯ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಹರಪಳ್ಳಿ ರವೀಂದ್ರ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕಾಂಗೀರ ಸತೀಶ, ಸಮಾಜ ಸೇವಕ ಬೆಪ್ಪುರನ ಅವಿನಾಶ್ ಕೇಸರಿ, ಉದ್ಯಮಿ ಶಫೀಕ್, ಮೋಬೀಸ್ ಫೌಂಡೇಶನ್ ಸಂಚಾಲಕ ಮಧು ಬೋಪಣ್ಣ, ಬೆಳೆಗಾರ ಪಾರುವಂಗಡ ಪೂಣಚ್ಚ, ಎಂಎಫ್‌ಡಿಆರ್‌ಸಿ ಕ್ಲಬ್ ಅಧ್ಯಕ್ಷ ಕಟ್ಟೆಮನೆ ಹರೀಶ್, ಗುತ್ತಿಗೆದಾರ ಬಿ.ಡಿ.ನಾರಾಯಣ್ ರೈ, ಬೆಳೆಗಾರರಾದ ಕಟ್ಟೆಮನೆ ಲಲಿತ ಸಿದ್ಧಾರ್ಥ, ಕೊಂಪುಳಿರ ಸುನಿ ದಿನೇಶ್ ಉಪಸ್ಥಿತರಿರುವರು ಎಂದು ಅನೂಪ್ ತಿಳಿಸಿದರು.
ಗೋಷ್ಠಿಯಲ್ಲಿ ಕ್ಲಬ್‌ನ ಉಪಾಧ್ಯಕ್ಷ ಮಂದ್ರೀರ ಮೋಹನ್‌ದಾಸ್, ಕಾರ್ಯದರ್ಶಿ ಪಾಂಡನ ನಿಶಾಂತ್, ಖಜಾಂಚಿ ಬಡುವಂಡ್ರ ಸುಜಯ್, ಸ್ಥಾಪಕ ಅಧ್ಯಕ್ಷ ಕೋಚನ ಲವಿನ್ ಉಪಸ್ಥಿತರಿದ್ದರು.