ಮಡಿಕೇರಿ, ನ. ೩: ಸುಂಟಿಕೊಪ್ಪದ ಶ್ರೀ ನಾರಾಯಣಗುರು ಬಿಲ್ಲವ ಸಂಘ, ದೇಯಿಬೈದೇತಿ ಬಿಲ್ಲವ ಮಹಿಳಾ ಸಂಘ ಹಾಗೂ ಬಿಲ್ಲವ ವಿದ್ಯಾರ್ಥಿ ಘಟಕ ಇವರ ಆಶ್ರಯದಲ್ಲಿ ಬಿಲ್ಲವ ಕ್ರೀಡಾಕೂಟ ಹಾಗೂ ಶ್ರೀ ನಾರಾಯಣಗುರು ಜಯಂತೋತ್ಸವ, ಗೌರವ ಸಮರ್ಪಣೆ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಏರ್ಪಡಿಸಲಾಗಿದೆ. ಮಡಿಕೇರಿ, ನ. ೩: ಸುಂಟಿಕೊಪ್ಪದ ಶ್ರೀ ನಾರಾಯಣಗುರು ಬಿಲ್ಲವ ಸಂಘ, ದೇಯಿಬೈದೇತಿ ಬಿಲ್ಲವ ಮಹಿಳಾ ಸಂಘ ಹಾಗೂ ಬಿಲ್ಲವ ವಿದ್ಯಾರ್ಥಿ ಘಟಕ ಇವರ ಆಶ್ರಯದಲ್ಲಿ ಬಿಲ್ಲವ ಕ್ರೀಡಾಕೂಟ ಹಾಗೂ ಶ್ರೀ ನಾರಾಯಣಗುರು ಜಯಂತೋತ್ಸವ, ಗೌರವ ಸಮರ್ಪಣೆ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಏರ್ಪಡಿಸಲಾಗಿದೆ. ಕಾರ್ಯದರ್ಶಿ ವೆಂಕಪ್ಪ ಕೊಟ್ಯಾನ್, ತಾ.೫ರಂದು ಬೆಳಿಗ್ಗೆ ೮.೩೦ಗಂಟೆಯಿAದ ಗರಗಂದೂರಿನ ಶ್ರೀಮತಿ ಡಿ.ಚೆನ್ನಮ್ಮ ಪ.ಪೂ. ಕಾಲೇಜು ಮೈದಾನದಲ್ಲಿ ಕ್ರಿಕೆಟ್ ಪಂದ್ಯಾವಳಿ ನಡೆಯಲಿದ್ದು, ಹರದೂರು ಗ್ರಾ.ಪಂ. ಅಧ್ಯಕ್ಷ ಬಿ.ಡಿ. ಪದ್ಮನಾಭ ಹಾಗೂ ಬೇಳೂರು ಗ್ರಾ.ಪಂ. ಅಧ್ಯಕ್ಷ
(ಮೊದಲ ಪುಟದಿಂದ) ಬಿ.ಎಂ.ಪ್ರಶಾAತ್ ಉದ್ಘಾಟಿಸುವರು. ತಾ.೬ರಂದು ಬೆಳಿಗ್ಗೆ ೮.೩೦ರಿಂದ ಸುಂಟಿಕೊಪ್ಪ ಜಿ.ಎಂ.ಪಿ. ಶಾಲಾ ಮೈದಾನದಲ್ಲಿ ವಾಲಿಬಾಲ್, ಥ್ರೋಬಾಲ್, ಹಗ್ಗ ಜಗ್ಗಾಟ, ಇತರ ಕ್ರೀಡಾಕೂಟ ನಡೆಯಲಿದ್ದು, ಸುಂಟಿಕೊಪ್ಪ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಬಿ.ಹೆಚ್. ವೇಣುಗೋಪಾಲ್, ಕುಶಾಲನಗರ ಗ್ರಾಮಾಂತರ ಉಪ ಠಾಣಾಧಿಕಾರಿ ಬಿ.ಎಸ್.ವಿಠಲ, ಕೆದಕಲ್ ಗ್ರಾ.ಪಂ.ಅಧ್ಯಕ್ಷೆ ವಿಶ್ಮಿತ, ಮಾದಾಪುರ ಗ್ರಾ.ಪಂ. ಅಧ್ಯಕ್ಷೆ ನಿರೂಪ ಹರೀಶ್ ಉದ್ಘಾಟಿಸುವರು ಎಂದು ತಿಳಿಸಿದರು.
ಜಯಂತೋತ್ಸವ-ಗುರುಪೂಜೆ
ತಾ. ೧೩ರಂದು ಬೆಳಿಗ್ಗೆ ೭ ಗಂಟೆಗೆ ಸುಂಟಿಕೊಪ್ಪದ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಗಣ ಹೋಮ ನಡೆಯಲಿದೆ. ೮ ಗಂಟೆಗೆ ಶ್ರೀ ನಾರಾಯಣಗುರುವಿನ ಮಂಡಲ ಕಲಾಕೃತಿಯೊಂದಿಗೆ ಗುರು ಪೂಜೋತ್ಸವ ನಡೆಯಲಿದ್ದು, ಉಪ್ಪಿನಂಗಡಿಯ ವಿನಯ್ ಶಾಂತಿ ಹಾಗೂ ತಂಡದವರು ನಡೆಸಿಕೊಡಲಿದ್ದಾರೆ. ೯ ಗಂಟೆಗೆ ಭವ್ಯ ಅಲಂಕೃತ ಮಂಟಪದಲ್ಲಿ ಶ್ರೀ ನಾರಾಯಣಗುರು ಮತ್ತು ಕೋಟಿ ಚೆನ್ನಯ್ಯರ ಭಾವಚಿತ್ರ ಹಾಗೂ ಕುಂಭ ಕಲಶದೊಂದಿಗೆ ಪಟ್ಟಣದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಯಲಿದೆ ಎಂದು ತಿಳಿಸಿದರು.
ಸಭಾ ಕಾರ್ಯಕ್ರಮ
ಬೆಳಿಗ್ಗೆ ೧೧ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಸಂಘದ ಅಧ್ಯಕ್ಷ ಬಿ.ಎಂ.ಮುಖೇಶ್ ಅಧ್ಯಕ್ಷತೆ ವಹಿಸುವರು. ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್, ಸಂಸದ ಪ್ರತಾಪ್ ಸಿಂಹ, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ತುಳು ಚಿತ್ರ ರಂಗದ ಹಾಸ್ಯ ನಟ ನವರಸರಾಜ ಬೋಜರಾಜ ವಾಮಂಜೂರು, ಗ್ರಾ.ಪಂ. ಅಧ್ಯಕ್ಷೆ ಶಿವಮ್ಮ ಉಪಸ್ಥಿತರಿರುವರು. ಕುದ್ರೋಳಿಯ ಗೋಕರ್ಣನಾಥೇಶ್ವರ ಕ್ಷೇತ್ರದ ಖಜಾಂಚಿ ಪದ್ಮರಾಜ್ ದಿಕ್ಸೂಚಿ ಭಾಷಣ ಮಾಡುವರು. ಗೌರವ ಅತಿಥಿಗಳಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕಿ ಲೀಲಾವತಿ, ಸಮಾಜಸೇವಕ ಮಂಥರ್ ಗೌಡ, ನಾಪಂಡ ಮುತ್ತಪ್ಪ, ಸೋಮವಾರಪೇಟೆ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಬಿ.ಎ.ಬಾಸ್ಕರ್, ವೀರಾಜಪೇಟೆಯ ಬಿ.ಎಂ.ಗಣೇಶ್, ಕುಶಾಲನಗರ ಕೋಟಿ ಚೆನ್ನಯ್ಯ ಸಂಘದ ಅಧ್ಯಕ್ಷ ಹೆಚ್.ಬಿ.ರಮೇಶ್, ಸಂಘದ ಗೌರವ ಅಧ್ಯಕ್ಷ ಬಿ.ಕೆ.ಮೋಹನ್, ಮಹಿಳಾ ಸಂಘದ ಅಧ್ಯಕ್ಷೆ ಮಧು ನಾಗಪ್ಪ, ವಿದ್ಯಾರ್ಥಿ ಘಟಕದ ಅಧ್ಯಕ್ಷ ಬಿ.ಎಸ್. ಪ್ರೀತಂ ಉಪಸ್ಥಿತರಿರುವರು ಎಂದು ತಿಳಿಸಿದರು.
ಗೌರವ- ಪುರಸ್ಕಾರ
ಈ ಬಾರಿ ವಿಭಿನ್ನವಾದ ಕಾರ್ಯಕ್ರಮ ರೂಪಿಸಲಾಗಿದ್ದು, ವಿವಾಹವಾಗಿ ೫೦ವರ್ಷಗಳನ್ನು ಪೂರೈಸಿ, ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಸಮುದಾಯದ ದಂಪತಿಯರಿಗೆ ಗೌರವ ಸಮರ್ಪಣೆ ಯೊಂದಿಗೆ ಸಂಭ್ರಮವನ್ನು ಸಂಘದ ವತಿಯಿಂದ ಆಚರಿಸಲಾಗು ವದು. ಈಗಾಗಲೇ ಹತ್ತು ದಂಪತಿಯನ್ನು ಗುರುತಿಸಿರುವದಾಗಿ ಕೋಟ್ಯಾನ್ ಹೇಳಿದರು. ಇದರೊಂದಿಗೆ ಗ್ರಾಮ ಪಂಚಾಯಿತಿ ಮತ್ತು ಇತರ ಸಂಸ್ಥೆಗಳಿಗೆ ಆಯ್ಕೆಯಾಗಿರುವ ಸಮುದಾಯದ ಪ್ರತಿನಿಧಿಗಳಿಗೆ ಗೌರವ ಸಮರ್ಪಣೆ, ಹತ್ತನೇ ಮತ್ತು ಪಿಯುಸಿಯಲ್ಲಿ ಶೇ.೭೫ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡಿರುವದಾಗಿ ಅವರು ತಿಳಿಸಿದರು.
ಗೋಷ್ಠಿಯಲ್ಲಿ ಗೌರವ ಅಧ್ಯಕ್ಷ ಬಿ.ಕೆ.ಮೋಹನ್, ಉಪಾಧ್ಯಕ್ಷರಾದ ನಾಗೇಶ್ ಪೂಜಾರಿ, ಗೀತಾ, ಸದಸ್ಯ ಅಕ್ಷಿತ್, ವಿದ್ಯಾರ್ಥಿ ಘಟಕದ ಅಧ್ಯಕ್ಷ ಪ್ರೀತಂ ಉಪಸ್ಥಿತರಿದ್ದರು.