ಮಡಿಕೇರಿ, ನ. ೧: ಜಗತ್ತು ಕಂಡ ಧೀಮಂತ ಮಹಿಳೆ ಇಂದಿರಾ ಗಾಂಧಿಯವರು ಎಂದು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಕೊಡಗು ಜಿಲ್ಲಾಧ್ಯಕ್ಷ ತೆನ್ನಿರ ಮೈನ ಹೇಳಿದರು.

ಕೊಡಗು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಇಂದಿರಾಗಾAಧಿ ಸಂಸ್ಮರಣೆ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿರಾಗಾAಧಿಯವರು ಭಾರತದ ಪ್ರಧಾನಿಯಾಗಿ ದೇಶದ ಅಭ್ಯುದಯಕ್ಕೆ ಅನೇಕ ಕೊಡುಗೆಗಳನ್ನು ನೀಡಿದರು. ಭಾರತಕ್ಕೆ ಸ್ವಾತಂತ್ರö್ಯ ದೊರೆತಾಗ ದೇಶವು ಸುಮಾರು ಎಂಟುನೂರಕ್ಕೂ ಅಧಿಕ ಸಂಸ್ಥಾನಗಳಾಗಿ ಹಂಚಿ ಹೋಗಿದ್ದು ಅಂದಿನ ಉಪ ಪ್ರಧಾನಿ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರು ಹಂಚಿಹೋಗಿದ್ದ ದೇಶವನ್ನು ಒಗ್ಗೂಡಿಸಿದರು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಗೌರವ ಕಾರ್ಯದರ್ಶಿ ವಿ.ಪಿ. ಸುರೇಶ್, ಇಂದಿರಾ ಗಾಂಧಿ ದೇಶ ಕಂಡ ಅತ್ಯಂತ ಸಮರ್ಥ ಪ್ರಧಾನಿಯಾಗಿದ್ದು ಅವರು ತಮ್ಮ ಅಂಗರಕ್ಷಕರ ದಾಳಿಗೆ ಬಲಿಯಾಗಿದ್ದು ದೇಶದ ದುರಂತ ಎಂದು ಹೇಳಿದರು.ಭಾರತದ ಒಕ್ಕೂಟದ ವ್ಯವಸ್ಥೆಯನ್ನು ಬಲಪಡಿಸಲು ಸರ್ದಾರ ವಲ್ಲಭಭಾಯಿ ಪಟೇಲ್ ಅವರು ತೆಗೆದುಕೊಂಡ ಕಠಿಣ ನಿರ್ಧಾರಗಳ ಬಗ್ಗೆ ಪ್ರಶಂಸಿಸಿದರು.

ಇAದಿರಾ ಗಾಂಧಿ ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಡಿ.ಸಿ.ಸಿ. ಸದಸ್ಯರಾದ ಕಟ್ರತನ ವೆಂಕಟೇಶ್, ಟಿ.ಹೆಚ್. ಉದಯ್ ಕುಮಾರ್. ತೋಲಂಡ ನಾಣಯ್ಯ, ಜುಲೇಕಾಬಿ, ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಕಲೀಲ್ ಬಾಷ, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ವಸಂತ್ ಭಟ್, ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಫ್ಯಾನ್ಸಿ ಪಾರ್ವತಿ, ದಿವ್ಯಾ ಸೇರಿದಂತೆ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.