ಶನಿವಾರಸಂತೆ, ನ. ೧: ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಭೆ ಉದ್ಘಾಟನೆ ಅಂಗವಾಗಿ ಎಲ್ಲೆಡೆಯಿಂದ ಪವಿತ್ರ ಮೃತ್ತಿಕೆ (ಮಣ್ಣು) ಸಂಗ್ರಹ ರಥಯಾತ್ರೆ ಅಭಿಯಾನ ನಡೆಯುತ್ತಿದ್ದು, ಈ ರಥಯಾತ್ರೆ ಅಭಿಯಾನಕ್ಕೆ ಶನಿವಾರಸಂತೆ ಮತ್ತು ದುಂಡಳ್ಳಿ ಗ್ರಾ.ಪಂ. ಸಂಯುಕ್ತ ಆಶ್ರಯದಲ್ಲಿ ಸ್ವಾಗತಿಸಲಾಯಿತು.

ಶನಿವಾರಸಂತೆ ಗ್ರಾ.ಪಂ.ನಿAದ ಗ್ರಾ.ಪಂ. ಅಧ್ಯಕ್ಷೆ ಫರ್ಜಾನ್ ಶಾಹಿದ್ ಖಾನ್ ಮತ್ತು ಗ್ರಾ.ಪಂ. ಸದಸ್ಯರು, ಪಿಡಿಓ ಮೇದಪ್ಪ, ವಿವಿಧ ಸಂಘ-ಸAಸ್ಥೆಗಳ ಪದಾಧಿಕಾರಿಗಳು ಮತ್ತು ಕಳಸ ಹೊತ್ತ ಮಹಿಳೆಯರು ಮೃತ್ತಿಕೆ ಸಂಗ್ರಹ ರಥಯಾತ್ರೆಗೆ ಹೂವಿನ ಹಾರ ಹಾಕುವ ಮೂಲಕ ಸ್ವಾಗತಿಸಿದರು. ನಂತರ ಗ್ರಾ.ಪಂ. ಪರವಾಗಿ ಸಂಗ್ರಹಿಸಿದ ಮೃತ್ತಿಕೆಯನ್ನು ವಾಹನದಲ್ಲಿ ಕಳುಹಿಸಲಾಯಿತು. ಸ್ಥಳೀಯ ಜಾಮೀಯ ಮಸೀದಿ ಪರವಾಗಿ ಮಸೀದಿ ಅಧ್ಯಕ್ಷರು ರಥಯಾತ್ರೆಗೆ ಸ್ವಾಗತಿಸಿದರು.

ಪಟ್ಟಣದ ಕೆಆರ್‌ಸಿ ವೃತ್ತಕ್ಕೆ ತಲುಪಿದ ರಥಯಾತ್ರೆಯನ್ನು ದುಂಡಳ್ಳಿ ಗ್ರಾ.ಪಂ. ಅಧ್ಯಕ್ಷೆ ಪೂರ್ಣಿಮಾ ಕಿರಣ್, ಗ್ರಾ.ಪಂ. ಸದಸ್ಯರು, ಪಿಡಿಓ ಮತ್ತು ಗ್ರಾಮಸ್ಥರು ಕಳಸ ಹೊತ್ತ ಮಹಿಳೆಯರು ಸ್ವಾಗತಿಸಿದರು. ನಂತರ ನಡೆದ ಕಾರ್ಯಕ್ರಮದಲ್ಲಿ ರಥಯಾತ್ರೆ ಕುರಿತು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ನಮ್ಮ ನಾಡಿಗೆ ನಾಡಪ್ರಭು ಕೆಂಪೇಗೌಡರ ಕೊಡುಗೆ ಅಪಾರ. ಬೆಂಗಳೂರು ಕಟ್ಟಿದ ಕೆಂಪೇಗೌಡರು ಇಂದಿನ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ಬೆಂಗಳೂರಿನಲ್ಲಿ ರಾಜ್ಯ, ರಾಷ್ಟç, ವಿದೇಶಿಗರು ನೆಲೆಸಿದ್ದು, ರಾಷ್ಟçದ ಸಿಲಿಕಾನ್ ಸಿಟಿ ಎಂದು ಹೆಸರುಗಳಿಸಲು ಆಗ ಬೆಂಗಳೂರನ್ನು ಕಟ್ಟಿದ ನಾಡಪ್ರಭು ಕೆಂಪೇಗೌಡರು ಮೂಲ ಕಾರಣರು ಎಂದರು.

ಮಾಜಿ ಜಿ.ಪಂ. ಸದಸ್ಯ ಭಾರತೀಶ್ ಮಾತನಾಡಿದರು. ಶನಿವಾರಸಂತೆ ಗ್ರಾ.ಪಂ. ಸದಸ್ಯ ಎಸ್.ಎನ್. ರಘು ಪ್ರಾಸ್ತಾವಿಕವಾಗಿ ಮಾತನಾಡಿದರು. ರಥಯಾತ್ರೆ ಅಭಿಯಾನ ಕಾರ್ಯಕ್ರಮದಲ್ಲಿ ಮಾಜಿ ಎಂಎಲ್‌ಸಿ ಎಸ್.ಜಿ. ಮೇದಪ್ಪ, ಸೋಮವಾರಪೇಟೆ ತಹಶೀಲ್ದಾರ್ ಎಸ್.ಎನ್. ನರಗುಂದ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಜಯಣ್ಣ, ವಿವಿಧ ಇಲಾಖೆ ಅಧಿಕಾರಿಗಳು, ಕ್ಷೇತ್ರ ಸಂಪನ್ಮೂಲ ಅಧಿಕಾರಿಗಳು, ಶಿಕ್ಷಕರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು.