ಮಡಿಕೇರಿ, ನ. ೧ : ಸಚಿಂತನ ಬಳಗದ ವತಿಯಿಂದ ದೀಪಾವಳಿ ಪ್ರಯುಕ್ತ "ಭೀಷ್ಮ ವಿಜಯ" ಎಂಬ ಪೌರಾಣಿಕ ಯಕ್ಷಗಾನ ತಾಳಮದ್ದಳೆ ನಡೆಯಿತು.
ಮೂರ್ನಾಡುವಿನ ಸುಜ್ಞಾನ ಸೇವಾ ಟ್ರಸ್ಟ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದ ನೇತೃತ್ವವನ್ನು ಅನ್ನಪೂರ್ಣೇಶ್ವರಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಡಾ. ಮಹಾಭಲೇಶ್ವರ ಭಟ್ ವಹಿಸಿದ್ದರು.
ಕಥಾ ಭಾಗದಲ್ಲಿ ಭೀಷ್ಮನ ಪಾತ್ರದಲ್ಲಿ ವಿನಾಯಕ ಹೆಗಡೆ ದೇವರಪುರ, ಅಂಬೆ ಪಾತ್ರದಲ್ಲಿ ಡಾ.ಮಹಾಭಲೇಶ್ವರ್ ಭಟ್ ಮೂರ್ನಾಡು, ಸಾಲ್ವನ ಪಾತ್ರದಲ್ಲಿ ಕೆ.ಎಂ.ಭಟ್ ಬೆಂಗಳೂರು, ಪರಶುರಾಮನ ಪಾತ್ರದಲ್ಲಿ ವೇದಮೂರ್ತಿ ಜನಾರ್ಧನ ಭಟ್ ಪೊನ್ನಂಪೇಟೆ, ಕಾಶಿರಾಜ ಪಾತ್ರದಲ್ಲಿ ಪ್ರಮೋದ್ ಭಟ್, ಏಕಲವ್ಯನ ಪಾತ್ರದಲ್ಲಿ ರಾಘವೇಂದ್ರ ಹೆಗಡೆ ಶಿರಸಿ, ಅಂಬಿಕೆ ಪಾತ್ರದಲ್ಲಿ ಕುಮಾರಿ ಮಾನ್ಯ ಮೂರ್ನಾಡು, ಬ್ರಾಹ್ಮಣ ಪಾತ್ರದಲ್ಲಿ ಅನಂತ್ ಭಟ್ ಹಾತ್ತೂರು ಕಾರ್ಯನಿರ್ವಹಿಸಿದರು.
ಹಿಮ್ಮೆಳ ಭಾಗವತರಾಗಿ ಗಜಾನನ ಹೆಗಡೆ ಬೆಂಗಳೂರು, ಮದ್ದಳೆಗಾರರಾಗಿ ನಾಗಭೂಷಣ ಜೋಶಿ ಕುಮುಟ ಇವರುಗಳು ಕಾರ್ಯನಿರ್ವಹಿಸಿದರು.