ಸಿದ್ದಾಪುರ, ನ. ೧: ಪೊನ್ನಂಪೇಟೆ ತಾಲೂಕು ಹಾತೂರು ಗ್ರಾಮದಲ್ಲಿ ಅಕ್ರಮವಾಗಿ ಕಡವೆಯನ್ನು ಕೊಂದು ಮಾರಾಟ ಮಾಡುವ ಉದ್ದೇಶದಿಂದ ಮಾಂಸ ಮಾಡುತ್ತಿದ್ದ ಬಗ್ಗೆ ಬಂದ ಖಚಿತ ಮಾಹಿತಿಯಂತೆ ವೀರಾಜಪೇಟೆ ಅರಣ್ಯ ಅಧಿಕಾರಿಗಳು ದಾಳಿ ನಡೆಸಿ ಅಂದಾಜು ೬೦ ಕೆಜಿ ಮಾಂಸವನ್ನು ವಶಪಡಿಸಿಕೊಂಡಿದ್ದಾರೆ.
ಪ್ರಕರಣದಲ್ಲಿ ಮನೆ ಮಾಲೀಕ ಕೊಕ್ಕಂಡ ಸತ್ಯುಂಜಯ ಮತ್ತು ಗೋಣಿಕೊಪ್ಪ ನಿವಾಸಿಯಾದ ಶರಣು ಮತ್ತು ಇತರರು ಭಾಗಿಯಾಗಿದ್ದು, ಪರಾರಿಯಾಗಿದ್ದಾರೆ. ಪ್ರಕರಣಕ್ಕೆ ಸಂಬAಧಿಸಿದAತೆ ವೀರಾಜಪೇಟೆ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಚಕ್ರಪಾಣಿ ಮಾರ್ಗದರ್ಶನದಲ್ಲಿ ವೀರಾಜಪೇಟೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೊಚ್ಚೆರ ಎ. ನೆಹರೂ ಮತ್ತು ವಲಯ ಅರಣ್ಯ ಅಧಿಕಾರಿ ಕಳ್ಳೀರ ದೇವಯ್ಯ, ಉಪವಲಯ ಅರಣ್ಯ ಅಧಿಕಾರಿಗಳಾದ ಶ್ರೀಶೈಲ ಮಾಲಿಗೌಡ್ರ, ದೇಯಂಡ ಸಂಜಿತ್ ಸೋಮಯ್ಯ, ಅರಣ್ಯ ರಕ್ಷಕರಾದ ಅರುಣಾ ಸಿ, ಮಾಲತೇಶ್ ಬಡಿಗೇರ್, ಚಂದ್ರಶೇಖರ ಅಮರಗೋಳ, ಚಾಲಕ ಅಶೋಕ, ವೀರಾಜಪೇಟೆ ಆರ್ಆರ್ಟಿ ಸಿಬ್ಬಂದಿಗಳಾದ ಅನಿಲ್, ವಿಕಾಸ್, ಸುರೇಶ, ಮಹೇಶ್, ನಾಚಪ್ಪ ಮತ್ತು ಅಮ್ಮತ್ತಿ ಆರ್ಆರ್ಟಿ ಸಿಬ್ಬಂದಿಗಳಾದ ಮುರುಗನ್, ಮಂಜು, ಸಚಿನ್, ವಿನೋದ್, ವಿನು, ಅಚ್ಚಯ್ಯ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ವಲಯ ಅರಣ್ಯಾಧಿಕಾರಿ ಪೊನ್ನಂಪೇಟೆ ಶಂಕರ್ ಅವರಿಗೆ ಮುಂದಿನ ಕ್ರಮಕ್ಕಾಗಿ ಪ್ರಕರಣವನ್ನು ಹಸ್ತಾಂತರಿಸಲಾಗಿದೆ.