ಗುಡ್ಡೆಹೊಸೂರು, ನ. ೧: ಬೆಂಗಳೂರಿನಲ್ಲಿ ತಾ. ೧೧ ರಂದು ಪ್ರಧಾನಿ ನರೇಂದ್ರ ಮೋದಿಯವರ ಸಮ್ಮುಖದಲ್ಲಿ ಪ್ರತಿಮೆ ಪ್ರತಿಷ್ಠಾಪನೆಗೆ ಸಂಬAಧಿಸಿದAತೆ ಕೊಡಗಿನ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಿಂದ ಮಣ್ಣು ಸಂಗ್ರಹಣೆ ಮಾಡಿ ಬೆಂಗಳೂರಿಗೆ ಸಾಗಿಸುವ ರಥಕ್ಕೆ ಗುಡ್ಡೆಹೊಸೂರಿನಲ್ಲಿ ಸ್ವಾಗತ ಮಾಡಲಾಯಿತು.

ಈ ಸಂದರ್ಭ ರಥದ ಜೊತೆಯಲ್ಲಿ ಶಾಸಕರುಗಳಾದ ಅಪ್ಪಚ್ಚುರಂಜನ್ ಮತ್ತು ಕೆ.ಜಿ. ಬೋಪಯ್ಯ ಹಾಜರಿದ್ದು, ಕೆಂಪೇಗೌಡರ ಬಗ್ಗೆ ಮಾತನಾಡಿದರು. ಗುಡ್ಡೆಹೊಸೂರಿನಲ್ಲಿ ಅನೇಕ ಮಂದಿ ಸಾರ್ವಜನಿಕರು ಹಾಜರಿದ್ದು ರಥಕ್ಕೆ ಸ್ವಾಗತಿಸಿದರು. ಅಲ್ಲದೆ ಇಲ್ಲಿನ ಗೌಡಸಮಾಜದ ನೂರಾರು ಮಂದಿ ಹಾಜರಿದ್ದರು. ಗ್ರಾ.ಪಂ. ಅಧ್ಯಕ್ಷೆ ನಂದಿನಿ, ಉಪಾಧ್ಯಕ್ಷೆ ಯಶೋಧ ಮತ್ತು ಸದಸ್ಯರು ಹಾಜರಿದ್ದರು. ಈ ಸಂದÀರ್ಭ ಗುಡ್ಡೆಹೊಸೂರು ಗ್ರಾ.ಪಂ.ವತಿಯಿAದ ಮಣ್ಣು ನೀಡಲಾಯಿತು. ಪಿ.ಡಿ.ಓ ಶ್ಯಾಂ, ಕಾರ್ಯದರ್ಶಿ ಕುಮಾರಸ್ವಾಮಿ, ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಗನ್ನಾಥ್ ಮುಂತಾದವರು ಹಾಜರಿದ್ದರು.