ಮಡಿಕೇರಿ, ಅ. ೩೧: ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಮಡಿಕೇರಿಯ ಪನಾಸಿಯಾ ಪಾಲಿ ಕ್ಲಿನಿಕ್ (ಇಯರಿಗ್, ಸ್ಪೀಚ್ ಅಂಡ್ ಇನ್‌ಪ್ಲಾಂಟ್ ಕ್ಲಿನಿಕ್) ಸಹಯೋಗದಲ್ಲಿ ಸೋಮವಾರ, ಪತ್ರಕರ್ತರ ಸಂಘದ ಸದಸ್ಯರು ಮತ್ತು ಅವರ ಕುಟುಂಬದವರಿಗಾಗಿ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಿತ್ತು. ಕಿವಿ, ಮೂಗು, ಗಂಟಲು ಹಾಗೂ ದಂತ ಸಮಸ್ಯೆಗಳಿಗೆ ಸಂಬAಧಿಸಿದAತೆ ವೈದ್ಯರುಗಳು ತಪಾಸಣೆ ಮಾಡಿ, ಅಗತ್ಯ ಸಲಹೆ ನೀಡಿದರು.
ಶಿಬಿರದ ಉದ್ಘಾಟನಾ ಕಾರ್ಯಕ್ರಮ ಪನಾಸಿಯಾ ಕ್ಲಿನಿಕ್‌ನಲ್ಲಿ ನಡೆಯಿತು. ದಂತ ವೈದ್ಯರಾದ ಡಾ. ತಿರುಮಲರಾವ್, ಇಎನ್‌ಟಿ ಸರ್ಜನ್ ಡಾ.ದಿವ್ಯ ಜ್ಯೋತಿ, ರೇಡಿಯೋಗ್ರಾಫರ್ ಕುಶಾಲ್ ಕುಮಾರ್, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷೆ ಬಿ.ಆರ್. ಸವಿತಾ ರೈ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮತ್ತು ಕಾರ್ಯಕ್ರಮ ಸಂಯೋಜಕ ಹಾಗೂ ಸಂಘದ ನಿರ್ದೇಶಕ ಜೈರಸ್ ಥಾಮಸ್ ಅಲೆಕ್ಸಾಂಡರ್ ವೇದಿಕೆಯಲ್ಲಿದ್ದರು. ಕ್ಲಿನಿಕ್ ಮುಖ್ಯಸ್ಥರಾದ ಡಾ.ರಾಧಾ ಸಿಂಹಾದ್ರಿ ಅವರ ಆಶಯದಂತೆ, ಇದೇ ವೇಳೆ ತ್ಯಾಗರಾಜ ಕಾಲೋನಿಯ ಶಾಹಿನಾ ಎಂಬ ಮಹಿಳೆಗೆ ಉಚಿತ ಶ್ರವಣ ಉಪಕರಣವನ್ನು ವಿತರಿಸಲಾಯಿತು. ರಮೇಶ್ ಕುಟ್ಟಪ್ಪ ಹಾಗೂ ಸವಿತಾ ರೈ ಉಪಕರಣ ಹಸ್ತಾಂತರಿಸಿದರು. ಸಂಘದ ಖಜಾಂಚಿ ಆನಂದ್ ಕೊಡಗು ಕಾರ್ಯಕ್ರಮ ನಿರ್ವಹಿಸಿದರು.