ಗೋಣಿಕೊಪ್ಪಲು, ಅ. ೩೧: ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆ ಟರ್ಫ್ ಮೈದಾನದಲ್ಲಿ ನಡೆಯುತ್ತಿರುವ ದಿ.ಪಾಂಡAಡ ಕುಟ್ಟಪ್ಪ ಸ್ಮರಣಾರ್ಥ ಕೊಡವ ಕೌಟುಂಬಿಕ ರಿಂಕ್ ಹಾಕಿ ಪಂದ್ಯಾವಳಿಯಲ್ಲಿ ಚೆಪ್ಪುಡಿರ ಮತ್ತು ಪೆಮ್ಮಂಡ ತಂಡಗಳು ಪ್ರಿ- ಕ್ವಾರ್ಟರ್ ಪ್ರವೇಶ ಪಡೆದುಕೊಂಡವು.
ಚೆಪ್ಪುಡಿರ ತಂಡ ಅಮ್ಮುಣಿಚಂಡ ತಂಡದ ವಿರುದ್ಧ ೧೨-೧ ಗೋಲುಗಳ ಭರ್ಜರಿ ಜಯಗಳಿಸುವ ಮೂಲಕ ಪ್ರಿ - ಕ್ವಾರ್ಟರ್ಗೆ ಪ್ರವೇಶಿಸಿತು.
ಚೆಪ್ಪುಡಿರ ಸೋಮಣ್ಣ ೪, ಚಿಣ್ಣಪ್ಪ, ಕಾರ್ಯಪ್ಪ ತಲಾ ೩, ದಿವಾನ್ ೨ ಗೋಲುಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಅಮ್ಮುಣಿಚಂಡ ಭವನ್ ೧ ಗೋಲು ಗಳಿಸಿದರು.
ಮತ್ತೊಂದು ಪಂದ್ಯದಲ್ಲಿ ಪೆಮ್ಮಂಡ ತಂಡ ಬಿದ್ದಾಟಂಡ ತಂಡವನ್ನು ೧೦-೫ ಗೋಲುಗಳಿಂದ ಸೋಲಿಸಿ ಪ್ರಿ-ಕ್ವಾರ್ಟರ್ಗೆ ಲಗ್ಗೆ ಇಟ್ಟಿತು.
ಪೆಮ್ಮಂಡ ಸೋಮಣ್ಣ ೫, ಸೋಮಣ್ಣ ೪, ಚರಣ್ ೧ ಗೋಲು ಗಳಿಸಿ ಮಿಂಚಿದರು. ಬಿದ್ದಾಟಂಡ ಚೆಲೆಶ್ ೪, ಸಂಪನ್ ೧ ಗೋಲು ಗಳಿಸಿ ಸೋಲಿನ ಅಂತರ ತಗ್ಗಿಸಿದರು.
ದಿನದ ಮೊದಲನೇ ಪಂದ್ಯದಲ್ಲಿ ಕುಟ್ಟಂಡ ವಿರುದ್ಧ ಬಾರಿಯಂಡ ೫-೪ ಗೋಲಿನಿಂದ ರೋಚಕ ಜಯ ಸಾಧಿಸಿತು. ಬಾರಿಯಂಡ ಬೆಳ್ಳಿಯಪ್ಪ ೪ ಗೋಲು ಬಾರಿಸಿ ಮಿಂಚಿದರು. ವಿನು ೧, ಕುಟ್ಟಂಡ ದಿಲನ್ ೨, ಬಿದ್ದಪ್ಪ, ಕವನ್ ತಲಾ ೧ ಗೋಲು ಹೊಡೆದರು.
ಬೊಟ್ಟೋಳಂಡ ತಂಡ ಮುಂಡ್ಯೋಳAಡ ತಂಡದ ವಿರುದ್ಧ ೫-೪ ಗೋಲುಗಳ ಜಯ ದಾಖಲಿಸಿತು. ಬೊಟ್ಟೋಳಂಡ ಸೂರಜ್ ೫ ಗೋಲುಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಮುಂಡ್ಯೋಳAಡ ಅಯ್ಯಪ್ಪ ೩, ಮಾಚಯ್ಯ ೧ ಗೋಲು ಗಳಿಸಿದರು. ಅಮ್ಮುಣಿಚಂಡ ತಂಡ ಮಾಚಿಮಂಡ ವಿರುದ್ಧ ೩-೨ ಗೋಲಿನಿಂದ ಜಯಸಾಧಿಸಿತು.
ಅಮ್ಮುಣಿಚಂಡ ಸೋಮಯ್ಯ ೨, ಬೋಪಣ್ಣ ೧, ಮಾಚಿಮಂಡ ಚಂಗಪ್ಪ ಮತ್ತು ಆಶಿಕ್ ತಲಾ ೧ ಗೋಲು ಗಳಿಸಿದರು. ಮೂಕೊಂಡ ವಿರುದ್ಧ ಚೆಪ್ಪುಡಿರ ೧೦-೬ ಗೋಲುಗಳ ಜಯ ಸಾಧಿಸಿತು. ಚೆಪ್ಪುಡಿರ ಸೋಮಣ್ಣ ೫, ಚಿಣ್ಣಪ್ಪ ೩, ಅಯ್ಯಪ್ಪ, ಕಾರ್ಯಪ್ಪ ತಲಾ ೧ ಗೋಲು, ಮೂಕೊಂಡ ಅಕ್ಷಿತ್ ೩, ಮಿಥೇಶ್ ೨, ನಿಖಿತ್ ೧ ಗೋಲು ಹೊಡೆದರು. ಕೋಡಿಮಣಿಯಂಡ ವಿರುದ್ಧ ಪೆಮ್ಮಂಡ ೮-೧ ಗೋಲುಗಳಿಂದ ಭರ್ಜರಿ ಜಯ ಸಾಧಿಸಿತು.
ಪೆಮ್ಮಂಡ ಸೋಮಣ್ಣ ೫, ಸುಹಾಸ್ ೩, ಗೋಲುಗಳಿಸಿ ಮಿಂಚಿದರು. ಕೋಡಿಮಣಿಯಂಡ ಪೂಣಚ್ಚ ೧ ಗೋಲು ಗಳಿಸಿದರು.
ಬಿದ್ದಾಟಂಡ, ಚೌರಿರ ವಿರುದ್ಧ ೫-೪ ಗೋಲುಗಳ ರೋಚಕ ಜಯ ಸಾಧಿಸಿತು. ಬಿದ್ದಾಟಂಡ ಮೇದಪ್ಪ ೫ ಗೋಲು ಗಳಿಸಿ ಸಂಚಲನ ಮೂಡಿಸಿದರು. ಚೌರಿರ ಶರತ್ ೨, ಪ್ರತಾಪ್, ಡಾನ್ ತಲಾ ೧ ಗೋಲು ಗಳಿಸಿದರು. ಮತ್ತೊಂದು ರೋಮಾಂಚನಕಾರಿ ಪಂದ್ಯದಲ್ಲಿ ಮುಕ್ಕಾಟಿರ ವಿರುದ್ಧ ಪಾಲಚಂಡ ತಂಡ ೬-೫ ಗೋಲುಗಳ ಜಯ ಸಾಧಿಸಿತು. ಪಾಲಚಂಡ ಜೋಯಪ್ಪ ೪, ಸಜನ್, ಪವನ್ ತಲಾ ೧ ಗೋಲು ಗಳಿಸಿದರು.
ಮುಕ್ಕಾಟಿರ ಬೋಪಣ್ಣ ೩, ಉತ್ತಪ್ಪ, ಮಂಥನ್ ತಲಾ ೧ ಗೋಲು ಬಾರಿಸಿದರು. ನೆರವಂಡ ತಂಡ ಚಿಯಕ್ಪೂವಂಡ ವಿರುದ್ಧ ೧೧-೨ ಗೋಲುಗಳ ಸುಲಭ ಜಯ ಸಾಧಿಸಿತು. ನೆರವಂಡ ನಾಚಪ್ಪ ೪, ದರ್ಶನ್, ದೇವಯ್ಯ ತಲಾ ೨, ಪ್ರವೀಣ್, ಕವನ್, ಬೆಳ್ಳಿಯಪ್ಪ ತಲಾ ೧ ಗೋಲು ಗಳಿಸಿದರು. ಚಿಯಕ್ಪೂವಂಡ ವಿವೇಕ್ ಮತ್ತು ರತನ್ ತಲಾ ೧ ಗೋಲು ಗಳಿಸಿದರು.
ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲಿಸಿದ್ದ ಮತ್ತೊಂದು ಪಂದ್ಯದಲ್ಲಿ ಪಾಲಂದಿರ ತಂಡ ನಾಗಂಡ ವಿರುದ್ಧ ೧೩-೧೨ ಗೋಲುಗಳಿಂದ ಗೆದ್ದು ಬೀಗಿತು. ಪಾಲಂದಿರ ಅಪ್ಪಚ್ಚು ೫, ಉತ್ತಪ್ಪ ೪, ಮುತ್ತಣ್ಣ ೩ ಗೋಲು ಗಳಿಸಿ ಮಿಂಚಿದರು. ನಾಗಂಡ ರಾಜ, ನಾಚಪ್ಪ, ಲವ ತಲಾ ೪ ಗೋಲು ಗಳಿಸಿ ಸೋಲಿನ ಅಂತರ ತಗ್ಗಿಸಿದರು.
ಸೋಮವಾರ ನಡೆದ ಹಾಕಿ ಪಂದ್ಯಾವಳಿಯಲ್ಲಿ ಅಮ್ಮುಣಿಚಂಡ ಕುಟುಂಬದ ಪರವಾಗಿ ಅಜ್ಜ ದಿಸು ನಂಜಪ್ಪ (೭೪) ಮಗ ಸಂಜು ಸೋಮಯ್ಯ, ಮೊಮ್ಮಗ ಬೆನ್ನಿ ಬೆಳಿಯಪ್ಪ ಆಟವಾಡಿ ಗಮನ ಸೆಳೆದರು.