ಮಡಿಕೇರಿ, ಅ. ೩೦: ಬೆಂಗಳೂರಿನ ಖ್ಯಾತ ವೈದ್ಯರು ಮೂಲತಃ ನಿಟ್ಟೂರು ಗ್ರಾಮದವರಾದ ಡಾ. ಮಾಪಂಗಡ ಪ್ರತಾಪ್ ಬೆಳ್ಳಿಯಪ್ಪ ಅವರು ನಿಟ್ಟೂರು ಗ್ರಾಮ ಪಂಚಾಯಿತಿಗೆ ಕಳೆ ಕಟಾವು ಮಾಡಲು ಒಂದು ಲಕ್ಷದ ಇಪ್ಪತ್ತು ಸಾವಿರ ವೆಚ್ಚದಲ್ಲಿ ಎರಡು ಯಂತ್ರಗಳನ್ನು ಕೊಡುಗೆಯಾಗಿ ನೀಡಿದರು.
ಮುಂದಿನ ದಿನಗಳಲ್ಲಿ ಪಂಚಾಯಿತಿಯು ಈ ಯಂತ್ರಗಳ ಮೂಲಕ ಸ್ವಚ್ಛತೆ ಮತ್ತು ನೈರ್ಮಲ್ಯಕ್ಕೆ ಆದ್ಯತೆ ನೀಡಿ ರಾಜ್ಯಕ್ಕೆ ಮಾದರಿಯಾಗಬೇಕೆಂದು ಕರೆ ನೀಡಿದರು ನಿಟ್ಟೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕಾಟಿಮಾಡ ಶರೀನ್ ಮುತ್ತಣ್ಣ. ಉಪಾಧ್ಯಕ್ಷೆ ಅಳಮೇಂಗಡ ಪವಿತಾ, ಸದಸ್ಯರುಗಳಾದ ಪಡಿಞರಂಡ ಕವಿತಾ ಪ್ರಭು. ಚಕ್ಕೇರ ಸೂರ್ಯ ಅಯ್ಯಪ್ಪ, ಅಮ್ಮಣಿ ಕೊಡಗು ದಿಶಾ ಸಮಿತಿ ಸದಸ್ಯರಾದ ಮಾಪಂಗಡ ಯಮುನಾ ಚಂಗಪ್ಪ ಪ್ರಮುಖರಾದ ಹರೀಶ್, ಪೊನ್ನಿಮಾಡ ಸಂತೋಷ್, ಮುಕ್ಕಾಟಿರ ರೊಷನ್, ತೇಜ, ಮುಕ್ಕಾಟಿರ ಸೋಮಯ್ಯ, ಮಾಚಂಗಡ ಅಯ್ಯಪ್ಪ ಮತ್ತಿತರರು ಹಾಜರಿದ್ದರು.