ಚೆಯ್ಯAಡಾಣೆ, ಅ. ೩೦: ಕೊಡಗಿನ ಅನಿವಾಸಿ ಸಂಘಟನೆಯಾದ ಕೊಡಗು ಸುನ್ನೀ ವೆಲ್ಫೇರ್ ಅಸೋಸಿಯೇಷನ್ ಜಿಸಿಸಿ ಘಟಕದ ವತಿಯಿಂದ ಬೆಮ್ಮತ್ತಿಯಲ್ಲಿ ಕೊಡಗು ಸುನ್ನೀ ವೆಲ್ಫೇರ್‌ನ ಸದಸ್ಯರಾಗಿದ್ದ ದಿವಂಗತ ಸಾಜಿದ್ ಕುಟುಂಬಕ್ಕೆ ನಿರ್ಮಿಸಲಾಗಿದ್ದ ೮ ಲಕ್ಷ ವೆಚ್ಚದ ಮನೆಯನ್ನು ದಾರುಲ್ ಖೈರ್ ಕೊಡಗು ಜಿಲ್ಲೆಯ ನಾಇಬ್ ಖಾಝಿ ಶಾದುಲಿ ಪೈಝಿ ಕೀ ಹಸ್ತಾಂತರಿಸಿದರು.

ಎಸ್‌ಎಸ್‌ಎಫ್ ಜಿಲ್ಲಾಧ್ಯಕ್ಷ ಶಾಫಿ ಸಅದಿ ಸೋಮವಾರಪೇಟೆ ಮಾತನಾಡಿ, ಸಮಾಜ ಸೇವಾ ಸಂಘಟನೆಗಳು ಸಂಕಷ್ಟದಲ್ಲಿದ್ದವರಿಗೆ ನೆರವಾದಲ್ಲಿ ಜಿಲ್ಲೆಯ ವಿವಿಧ ಭಾಗದಲ್ಲಿರುವ ಬಡ ಕುಟುಂಬಗಳಿಗೆ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದರು.

ದಿವAಗತ ಸಾಜಿದ್ ಅವರ ಹಿರಿಯ ಪುತ್ರ ಮುಹಮ್ಮದ್ ಸಿಬಿಲ್‌ಗೆ ನಾಇಬ್ ಖಾಝಿ ಶಾದುಲಿ ಫೈಝಿ ಹಾಗೂ ನೇತಾರರು ಮನೆಯ ಕೀಯನ್ನು ಹಸ್ತಾಂತರಿಸಿದರು.

ಎಸ್‌ವೈಎಸ್ ರಾಜ್ಯ ಕಾರ್ಯದರ್ಶಿ ಹಫೀಲ್ ಸಅದಿ ಕೊಳಕೇರಿ ಮಾತನಾಡಿ ವೆಲ್ಫೇರ್ ಕೊಡಗಿನಲ್ಲಿ ಸಂಭವಿಸಿದ ಜಲ ಪ್ರಳಯ, ಕೊರೊನಾದಂತಹ ಸಂಕಷ್ಟದ ಸಂದರ್ಭಗಳಲ್ಲಿ ಹಲವು ಸಮಾಜ ಸೇವಾ ಕಾರ್ಯಗಳನ್ನು ಮಾಡಿದೆ ಎಂದರು.

ಕೂರ್ಗ್ ಜಂಇಯತ್ತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಹ್ಸನಿ ವೀರಾಜಪೇಟೆ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ದಾರುಲ್ ಖೈರ್ ಚೇರ್ಮೆನ್ ಅಬ್ದುಲ್ಲ್ ಖಾದರ್ ತಂಘಳ್ ಮಾತನಾಡಿ, ಕೊಡಗು ಸುನ್ನಿ ವೆಲ್ಫೇರ್ ಜಿಸಿಸಿ ಘಟಕವು ಹಲವಾರು ಜನಪರ ಕಾರ್ಯಕ್ರಮಗಳನ್ನು ನಡೆಸುತಿದ್ದು, ೨ ಮನೆಯನ್ನು ಪೂರ್ಣಗೊಳಿಸಿ ಅರ್ಹ

(ಮೊದಲ ಪುಟದಿಂದ) ಕುಟುಂಬಕ್ಕೆ ಹಸ್ತಾಂತರಿಸಿದೆ. ಇನ್ನು ಕೂಡ ಕೆಲ ಮನೆಗಳ ಕಾಮಗಾರಿ ಪ್ರಗತಿಯಲ್ಲಿದೆ. ಅದನ್ನು ಕೂಡ ಆದಷ್ಟು ಬೇಗ ಪೂರ್ಣಗೊಳಿಸಲಾಗುವು ದೆಂದರು.

ಬೆಮ್ಮತ್ತಿ ಜಮಾಅತ್ ಮಾಜಿ ಅಧ್ಯಕ್ಷ ಬಾಪು ಮಾತನಾಡಿ ಕೊಡಗು ಸುನ್ನೀ ವೆಲ್ಫೇರ್ ನಂತಹ ಸಂಘಟನೆಯನ್ನು ಸರ್ವರು ಪ್ರೋತ್ಸಾಹಿಸಬೇಕೆಂದರು.

ಈ ಸಂದರ್ಭ ಮನೆಯ ಕಾಮಗಾರಿ ನಡೆಸಿದ ಗುತ್ತಿಗೆದಾರ ಇಬ್ರಾಹಿಂ ಹಾಗೂ ಮನೆ ನಿರ್ಮಾಣಕ್ಕೆ ಹಗಲಿರುಳು ಶ್ರಮಿಸಿದ ಜಿಸಿಸಿ ಘಟಕದ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.

ಕೊಡಗು ಸುನ್ನಿ ವೆಲ್ಪೇರ್ ಜಿಸಿಸಿ ಘಟಕದ ಪದಾಧಿಕಾರಿಗಳಾದ ಹಂಝ, ಮಾಹೀನ್ ಸಖಾಫಿ ಕುವೈತ್, ಹಾರಿಸ್ ಎಡಪಾಲ, ಸ್ವಾದಿಕ್ ಎಡಪಾಲ, ಖಾಸಿಂ ಸಖಾಫಿ, ಅರಫಾತ್ ನಾಪೋಕ್ಲು, ಮುಸ್ಲಿಂ ಜಮಾಅತ್ ಜಿಲ್ಲಾ ಕಾರ್ಯದರ್ಶಿ ಮುಹಮ್ಮದ್ ಹಾಜಿ ಕುಂಜಿಲ, ಬೆಮ್ಮತ್ತಿ ಜಮಾಅತ್ ಮಾಜಿ ಅಧ್ಯಕ್ಷ ಮೊಹಮ್ಮದ್ ಪಿ, ಖತೀಬ್ ಯಾಸಿರ್ ಯಮಾನಿ, ಎಸ್‌ವೈಎಸ್ ಕಾರ್ಯ ದರ್ಶಿ ಮೊಹಿದ್ದೀನ್ ಪೊನ್ನತ್‌ಮೊಟ್ಟೆ ಉಪಸ್ಥಿತರಿದ್ದರು. ವೆಲ್ಫೇರ್ ಶಿಕ್ಷಣ ವಿಭಾಗದ ಕಾರ್ಯದರ್ಶಿ ರಿಯಾಝ್ ಕೊಂಡAಗೇರಿ ಸ್ವಾಗತಿಸಿ, ಸಾಂತ್ವನ ವಿಭಾಗದ ಜಿಸಿಸಿ ಸಂಚಾಲಕ ಸಿದ್ದೀಕ್ ಝಹರಿ ವಂದಿಸಿದರು.

-ಅಶ್ರಫ್