ಮಡಿಕೇರಿ, ಅ. ೩೦: ಜಮಾಅತೆ ಇಸ್ಲಾಮೀ ಹಿಂದ್ ವತಿಯಿಂದ ದಾನಿಗಳ ಸಹಯೋಗ ದೊಂದಿಗೆ ಅರ್ಹ ಬಡ ಕುಟುಂಬಗಳಿಗಾಗಿ ನಿರ್ಮಿಸಲಾದ ತಲಾ ೩ ಲಕ್ಷ ವೆಚ್ಚದ ೭ ಮನೆಗಳನ್ನು ಇಂದು ಹಸ್ತಾಂತರಿಸಲಾಯಿತು. ಮಡಿಕೇರಿಯ ಆಜಾದ್‌ನಗರ, ಗದ್ದುಗೆ, ಹೊಸ್ಕೋಟೆ, ಕತ್ತಲೆಕಾಡು, ಕಕ್ಕಬೆ ಹಾಗೂ ಚೆಟ್ಟಿಮಾನಿಗಳಲ್ಲಿ ನಿರ್ಮಿಸಲಾದ ಮನೆಗಳನ್ನು ಫಲಾನುಭವಿಗಳಿಗೆ ನೀಡಲಾಯಿತು. ಜಮಾಅತೆ ಇಸ್ಲಾಮೀ ಹಿಂದ್ ಜಿಲ್ಲಾಧ್ತಕ್ಷ ಪಿ.ಕೆ. ಅಬ್ದುಲ್ ರೆಹಮಾನ್ ನೇತೃತ್ವದಲ್ಲಿ ಫಲಾನುಭವಿಗಳಿಗೆ ಕೀ ಹಸ್ತಾಂತರ ಮಾಡಲಾಯಿತು.

ಈ ವೇಳೆ ಮಾತನಾಡಿದ ಅಬ್ದುಲ್ ರೆಹಮಾನ್, ಇಂದು ದೇಶದಲ್ಲಿ ವಸತಿ ಸೌಲಭ್ಯವಿಲ್ಲದೇ ಹಲವು ಕುಟುಂಬಗಳು ಪರಿತಪಿಸುತ್ತಿವೆ. ಆದರೂ ಸರ್ಕಾರ ಈ ಬಗ್ಗೆ ಗಮನಹರಿಸದೇ ಇರುವುದು ವಿಷಾದನೀಯ ಎಂದರು. ದಾನಿಗಳಾದ ಅಮೀನ್, ಮುಖ್ಯ ಅತಿಥಿಯಾಗಿ ಎಸ್‌ಎಸ್‌ಎಫ್ ಜಿಲ್ಲಾ ಸಂಘಟನಾ ಸದಸ್ಯ

(ಮೊದಲ ಪುಟದಿಂದ) ಖಲೀಲ್ ಭಾಷ ಮಾತನಾಡಿದರು. ತನಲ್ ಆಶ್ರಮದ ಕಾರ್ಯದರ್ಶಿ ಮೊಹಮ್ಮದ್ ಮುಸ್ತಫಾ ಪ್ರಾಸ್ತಾವಿಕ ನುಡಿಯಾಡಿದರು. ಸಿದ್ದಾಪುರದ ಸಮಾಜ ಸೇವಕರಾದ ಅಶ್ರಫ್ ದಾನಿಗಳಾದ ನಾಸರ್ ಮಾಹೆ, ಸಮಾಜ ಸೇವಕ ಪಿ.ಎಂ ಉಮ್ಮರ್ ಸ್ಥಾನೀಯ ಕಾರ್ಯದರ್ಶಿ ಅಹ್ಮದ್ ಕಬೀರ್ ಹಾಗೂ ಮಸ್ಜಿದ್ ಉರ್ ರಹ್ಮಾನ್ ಮಸೀದಿ ಖತೀಬರಾದ ಉಮರ್ ಮೌಲವಿ ಉಪಸ್ಥಿತರಿದ್ದರು.