*ಗೋಣಿಕೊಪ್ಪ, ಅ. ೨೮: ಹಿರಿಯ ಚೇತನ ೮೭ರ ಹರಿಯದ ಪಾರುವಂಗಡ ಸನ್ನಿ ಮೊಣ್ಣಪ್ಪ ಅವರ ಜೀವನ ಆಧಾರಿತ ಪುಸ್ತಕವನ್ನು ವೀರಾಜಪೇಟೆ ತಾಲೂಕು ತಹಶೀಲ್ದಾರ್ ಅರ್ಚನಭಟ್ ಲೋಕಾರ್ಪಣೆ ಮಾಡಿದರು.

ಪೊನ್ನಪ್ಪಸಂತೆ ವಿವಿಧೋದ್ದೇಶ ಸಹಕಾರಿ ಪ್ರೌಢಶಾಲೆಯಲ್ಲಿ ವೀರಾಜ ಪೇಟೆ ತಾಲೂಕು ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ಮುಲ್ಲೇಂಗಡ ಶಂಕರಿ ಪೂನ್ನಪ್ಪ ಅಧ್ಯಕ್ಷತೆಯಲ್ಲಿ ಪುಸ್ತಕ ಬಿಡುಗಡೆ ನಡೆಯಿತು.

ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ತಹಶೀಲ್ದಾರ್ ಅರ್ಚನ ಭಟ್ ಹಿರಿಯರು ಹಾಕಿಕೊಟ್ಟ ಉತ್ತಮ ಮಾರ್ಗದಲ್ಲಿ ಜೀವನದ ಹೆಜ್ಜೆಗಳನ್ನು ಹಾಕಿದಾಗ ಬದುಕು ಸುಂದರವಾಗಿ ಇರುತ್ತದೆ ಎಂದು ಹೇಳಿದರು.

ಹಿರಿಯರು ಅಪಾರವಾದ ಅನುಭವ ಹೊಂದಿರುತ್ತಾರೆ. ಅವರ ಜೀವನದ ಅನುಭವಗಳ ನುಡಿಗಳನ್ನು ಆಲಿಸುವುದರಿಂದ ನಾವು ಪರಿಪೂರ್ಣ ಬದುಕು ನಡೆಸಲು ಸಾಧÀ್ಯವಿದೆ ಎಂದು ತಿಳಿಸಿದರು.

ಹಿರಿಯರು ತಮ್ಮ ಬದುಕಿನ ಸ್ವಾರಸ್ಯ ಸಂಗತಿಗಳನ್ನು ಪುಸ್ತಕದಲ್ಲಿ ದಾಖಲಿಸಿದರೆ ಮುಂದಿನ ಪಿಳಿಗೆಗೆ ಅಪರೂಪದ ಕೊಡುಗೆಯಾಗಲಿದೆ ಎಂದು ಹೇಳಿದ ಅವರು, ಇಂದಿಗೂ ತನ್ನ ತಂದೆಯ ಸಲಹೆ ಪಡೆದು ಕಾರ್ಯ ನಿಭಾಯಿಸುವುದಾಗಿ ತಿಳಿಸಿದರು.

ಹಿರಿಯ ವೈದ್ಯ ಡಾ ಶಿವಪ್ಪ, ಕೊಡವ ಅಕಾಡಮಿ ಮಾಜಿ ಅಧÀ್ಯಕ್ಷ ಪೊನ್ನಪ್ಪ, ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪುಸ್ತಕ ಬರಹಗಾರ, ಪಾರುವಂಗಡ ಸನ್ನಿ ಮೊಣ್ಣಪ್ಪ, ಮಾತನಾಡಿ, ಮುಂದಿನ ಪೀಳಿಗೆಗೆ ನನ್ನ ಬಗ್ಗೆ ಪರಿಚಯ ಮಾಡಿಕೊಡುವ ಉದ್ದೇಶ ಮತ್ತು ೮೭ ವರ್ಷದ ಬದುಕಿನ ಬಗ್ಗೆ ತಿಳಿಸಲು ಪುಸ್ತಕ ಬರೆದಿರುವುದಾಗಿ ತಿಳಿಸಿದರು. ಸಮಾಜ ಸೇವಕ ಅಜ್ಜಮಾಡ ಕಟ್ಟಿಮಂದಯ್ಯ, ಹಿರಿಯ ನಾಗರಿಕರ ವೇದಿಕೆ ಕಾರ್ಯದರ್ಶಿ ಪುಲಿಯಂಡ ಪಿ ಪೊನ್ನಪ್ಪ, ಕಿಗ್ಗಟ್ಟುನಾಡ್ ಹಿರಿಯ ನಾಗರಿಕ ವೇದಿಕೆಯ ಅಧ್ಯಕ್ಷ ಕೊಟ್ಟುಕತ್ತಿರ ಪಿ ಸೋಮಣ್ಣ, ಪೋನ್ನಂಪೇಟೆ ಕೊಡವ ಸಮಾಜ ಅಧ್ಯಕ್ಷ ಕಾಳಿಮಾಡ ಮೋಟಯ್ಯ, ಪೊನ್ನಪ್ಪಸಂತೆ ಪ್ರೌಢÀಶಾಲೆಯ ಅಧ್ಯಕ್ಷ ಪುಚ್ಚಿಮಾಡ ಟಿ ಪೂಣಚ್ಚ, ಪ್ರೌಢÀಶಾಲೆ ಮುಖ್ಯ ಶಿಕ್ಷಕಿ ಸಿ ಎಂ ರಾಧ, ಗುತ್ತಿಗೆದಾರ ಪಾರುವಂಗಡ ಟಿ ರಾಜಪ್ಪ, ಕಲ್ಲುಗುಡ್ಡೆ ಈಶ್ವರ ದೇವಸ್ಥಾನದ ಅಧ್ಯಕ್ಷ ಎ. ಪ್ರದೀಪ್ ಇದ್ದರು.