ಅಮ್ಮತ್ತಿ, ಅ. ೨೮: ಅಮ್ಮತ್ತಿ ಒಂಟಿಯAಗಡಿಯ ಕೊಡವ ಅಸೋಸಿಯೇಷನ್ ವತಿಯಿಂದ ತಾ. ೨೬ ರಂದು ಸಂಸ್ಥೆಯ ಆವರಣದಲ್ಲಿ .೨೨ ರೈಫಲ್ ಮುಕ್ತ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಈ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧೆಡೆಗಳಿಂದ ಪುರುಷರು, ಮಹಿಳೆಯರು ಸೇರಿದಂತೆ ಸುಮಾರು ೧೭೬ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಸ್ಪರ್ಧಾ ಕಾರ್ಯಕ್ರಮಕ್ಕೆ ಆರ್ಎಸ್ಎಸ್ನ ಪ್ರಮುಖರಾದ ಮಚ್ಚಾರಂಡ ಮಣಿ ಕಾರ್ಯಪ್ಪ ಅವರು ಚಾಲನೆ ನೀಡಿದರು.
ಸ್ಪರ್ಧೆಯಲ್ಲಿ ನೆಲ್ಲಮಕ್ಕಡ ವಿವೇಕ್ ಪ್ರಥಮ ಸ್ಥಾನದೊಂದಿಗೆ ರೂ. ೩೦ ಸಾವಿರ ನಗದು ಹಾಗೂ ಒಡಿಕತ್ತಿಯನ್ನು ಪಡೆದುಕೊಂಡರು. ದ್ವಿತೀಯ ಸ್ಥಾನ ಪುದಿಯೊಕ್ಕಡ ಪೂಣಚ್ಚ, ತೃತೀಯ ಸೂದನ ಭೀಷ್ಮ ಹಾಗೂ ನಾಲ್ಕನೇ ಸ್ಥಾನವನ್ನು ನೆಲ್ಲೀರ ಧನು ಪಡೆದುಕೊಂಡರು. ಇವರಿಗೆ ತಲಾ ರೂ. ೧೫ ಸಾವಿರ ನಗದು ಹಾಗೂ ಒಡಿಕತ್ತಿಯನ್ನು ನೀಡಲಾಯಿತು.
ಸ್ಪರ್ಧೆಯ ತೀರ್ಪುಗಾರರಾಗಿ ಮಂಡೇಪAಡ ಮಂಜು, ಚೆಂಬಾAಡ ಲಾಲ ಹಾಗೂ ಮಚ್ಚಾರಂಡ ನವೀನ್ ಬೋಪಣ್ಣ ಕಾರ್ಯನಿರ್ವಹಿಸಿದರು. ವಿಜೇತರಿಗೆ ಕ್ಲಬ್ನ ಅಧ್ಯಕ್ಷ ಪಾಲೆಕಂಡ ಸಾಯಿ ಕರುಂಬಯ್ಯ, ಅತಿಥಿಗಳಾಗಿದ್ದ ಚೇಂದAಡ ರವಿ ಹಾಗೂ ಮಚ್ಚಾರಂಡ ಮಣಿ ಕಾರ್ಯಪ್ಪ ಅವರುಗಳು ಬಹುಮಾನ ವಿತರಿಸಿದರು. ಬೆಳಿಗ್ಗೆಯಿಂದ ಸಂಜೆತನಕವೂ ಸ್ಪರ್ಧೆ ನಡೆಯಿತು.