ಮಡಿಕೇರಿ, ಅ. ೨೮: ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಮಡಿಕೇರಿ ತಾಲೂಕು ಘಟ ಕಕ್ಕೆ ಪದಾಧಿ ಕಾರಿಗಳ ಆಯ್ಕೆ ಪ್ರಕ್ರಿಯೆಯು ಮಡಿಕೇರಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಜರುಗಿತು. ೨೦೨೨-೨೩ನೇ ಸಾಲಿನ ನೂತನ ಕಾರ್ಯಕಾರಿ ಮಂಡಳಿಯನ್ನು ರಚಿಸಲಾಯಿತು.

ಅಧ್ಯಕ್ಷರಾಗಿ ಮರಗೋಡು ಭಾರತಿ ಪ್ರೌಢಶಾಲೆಯ ಶಿಕ್ಷಕ ಪಿ.ಎಸ್. ರವಿಕೃಷ್ಣ, ಕಾರ್ಯದರ್ಶಿಯಾಗಿ ಸಿದ್ದಾಪುರ ಸರ್ಕಾರಿ ಶಾಲೆಯ ಶಿಕ್ಷಕ ಬಿ.ಎಸ್. ಪ್ರವೀಣ್, ಕೋಶಾಧ್ಯಕ್ಷರಾಗಿ ಕೊಯನಾಡು ಶಾಲೆಯ ಶಿಕ್ಷಕ ವಿಶ್ವನಾಥ ಹೋಬಳೀದಾರ್, ರಾಜ್ಯ ಪರಿಷತ್ ಸದಸ್ಯರಾಗಿ ನೇತಾಜಿ ಪ್ರೌಢಶಾಲೆ ಬಲ್ಲಮಾವಟಿಯ ಎನ್.ಕೆ. ಮಹಬೂಬ್ ಸಾಬ್, ಉಪಾಧ್ಯಕ್ಷರಾಗಿ ಚೆಂಬು ಸರ್ಕಾರಿ ಪ್ರೌಢಶಾ¯ ಶಿಕ್ಷಕಿ ಪಿ.ಎಸ್. ಕಾಮಾಕ್ಷಿ, ಗೌರವಾಧ್ಯಕ್ಷರಾಗಿ ಮೂರ್ನಾಡು ಅನುದಾನಿತ ಪ್ರೌಢಶಾಲೆಯ ಎಂ.ಎನ್. ಸುಜಾತ, ಸಂಘಟನಾ ಕಾರ್ಯದರ್ಶಿಗಳಾಗಿ ಕಕ್ಕಬೆ ಪ್ರೌಢಶಾಲೆಯ ಕೆ.ಎಂ. ಶರತ್, ಚೇರಂಬಾಣೆ ಅರುಣ ಪ್ರೌಢಶಾಲೆ ಎಸ್.ಪಿ. ಪರಮೇಶ್, ಸಹಕಾರ್ಯದರ್ಶಿಯಾಗಿ ಮಡಿಕೇರಿ ಸರ್ಕಾರಿ ಪ್ರೌಢಶಾಲೆಯ ಐ.ಜೆ. ಜಾನೆಟ್, ಕ್ರೀಡಾ ಕಾರ್ಯದರ್ಶಿಯಾಗಿ ಮಡಿಕೇರಿ ಸಂತ ಜೋಸೆಫರ ಪ್ರೌಢಶಾಲೆಯ ಜೋಸೆಫ್ ಶಾಂತರಾಜ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಕಡಂಗ ಪ್ರೌಢಶಾಲೆಯ ಎಂ.ಪಿ. ಲವೀನ, ಲೆಕ್ಕ ಪರಿಶೋಧಕರಾಗಿ ಮೂರ್ನಾಡು ಸರ್ಕಾರಿ ಪ್ರೌಢಶಾಲೆಯ ಎನ್.ಪಿ. ಉಷಾ ಇವರುಗಳನ್ನು ಆಯ್ಕೆ ಮಾಡಲಾಯಿತು.